ರಾಜ್ಯ ಬಜೆಟ್: ಮೈಸೂರು 2ನೇ ಐಟಿ ಸಿಟಿ, 4000 ಎಲೆಕ್ಟ್ರಿಕ್ ಬಸ್ ಸೇರ್ಪಡೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಬಂಪರ್

Date:

ರಾಜ್ಯ ಸರ್ಕಾರ ಮಂಡಿಸಿರುವ ನೂತನ ಬಜೆಟ್‌ನಲ್ಲಿ ಮಾಹಿತಿ ತಂತ್ರಜ್ಞಾನ, ಕ್ರೀಡೆ ಮತ್ತು ಸಾರಿಗೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಭಾರಿ ಅನುದಾನ ಘೋಷಿಸಲಾಗಿದೆ. ತಂತ್ರಜ್ಞಾನ ವಲಯವನ್ನು ದ್ವಿತೀಯ ಹಂತದ ನಗರಗಳಿಗೆ ವಿಸ್ತರಿಸುವ ಜೊತೆಗೆ, ಸಾರಿಗೆ ನೌಕರರ ಬಾಕಿ ವೇತನ ಪಾವತಿ ಹಾಗೂ ಕ್ರೀಡಾ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ (ಐಟಿ-ಬಿಟಿ)
ಐಟಿ ರಫ್ತು ಗುರಿ: ಪ್ರಸ್ತುತ ಭಾರತದ ಐಟಿ ರಫ್ತಿನಲ್ಲಿ ರಾಜ್ಯವು ಶೇ.43ರಷ್ಟು ಕೊಡುಗೆ ನೀಡುತ್ತಿದ್ದು, 2025–30ರ ಹೊಸ ಐಟಿ ನೀತಿಯಡಿ 2030ರ ವೇಳೆಗೆ ₹11.5 ಲಕ್ಷ ಕೋಟಿ ಸಾಫ್ಟ್‌ವೇರ್ ರಫ್ತು ಮಾಡುವ ಗುರಿ ಹೊಂದಲಾಗಿದೆ. ಎಐ ಮತ್ತು ಬಿಗ್ ಡೇಟಾ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕವಾಗಿ 5ನೇ ಸ್ಥಾನದಲ್ಲಿದೆ.

ಲೀಪ್ (LEAP) ಯೋಜನೆಗೆ ₹1,000 ಕೋಟಿ: ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ನವೋದ್ಯಮ ಉತ್ತೇಜಿಸಲು ₹1,000 ಕೋಟಿ ವೆಚ್ಚದ ಯೋಜನೆ. ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ಕಿಯೋನಿಕ್ಸ್ ಮೂಲಕ ‘ಲೀಪ್ ಲ್ಯಾಬ್ಸ್’ ಸ್ಥಾಪನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡನೇ ಐಟಿ ಸಿಟಿಯಾಗಿ ಮೈಸೂರು: ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಮೈಸೂರು ನಗರವನ್ನು ರಾಜ್ಯದ 2ನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವ ಘೋಷಣೆ.

ಎಐ ಮತ್ತು ರೊಬೊಟಿಕ್ಸ್: ಇಸ್ರೋ ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ‘ಬ್ರೈನ್ಸ್’ (BRAINz) ಕ್ಯಾಂಪಸ್ ಸ್ಥಾಪನೆ. ರಾಯಚೂರು ಐಐಐಟಿಯಲ್ಲಿ ₹5 ಕೋಟಿ ವೆಚ್ಚದಲ್ಲಿ ಎಐ ಶ್ರೇಷ್ಠತಾ ಕೇಂದ್ರ.

ವಿಜ್ಞಾನ ನಗರ ಹಾಗೂ ತಾರಾಲಯ: ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ₹233 ಕೋಟಿ ವೆಚ್ಚದಲ್ಲಿ ‘ವಿಜ್ಞಾನ ನಗರ’ (Science City) ಸ್ಥಾಪನೆ. ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಮತ್ತು ಬೀದರ್‌ನಲ್ಲಿ ತಲಾ ₹4 ಕೋಟಿಯಂತೆ ಒಟ್ಟು ₹24 ಕೋಟಿ ವೆಚ್ಚದಲ್ಲಿ 6 ಹೊಸ ತಾರಾಲಯಗಳ ನಿರ್ಮಾಣ.

GCC ನೀತಿ: 2029ರ ವೇಳೆಗೆ 500 ಹೊಸ ಗ್ಲೋಬಲ್ ಕೆಪಾಸಿಟಿ ಸೆಂಟರ್ (GCC) ಸ್ಥಾಪಿಸಿ 3.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ. ಮಂಗಳೂರಿನಲ್ಲಿ ಕಿಯೋನಿಕ್ಸ್‌ನಿಂದ ಐಟಿ ಪಾರ್ಕ್.

ಇದನ್ನು ಓದಿದ್ದೀರಾ? ಇರಾನ್ ವಿರುದ್ಧ ಅಮೆರಿಕದ ವಿನಾಶಕಾರಿ ಕುತಂತ್ರ; ತನ್ನ ಬೇಳೆ ಬೇಯಿಸಿಕೊಳ್ಳಲು ಕುರ್ಡಿಶ್ ಉಗ್ರರ ಕೈಗೆ ಅಸ್ತ್ರ!

ವೈದ್ಯಕೀಯ ತಂತ್ರಜ್ಞಾನ: ನಿಮ್ಹಾನ್ಸ್-ಐಐಐಟಿ ಬೆಂಗಳೂರು ಸಹಯೋಗದಲ್ಲಿ ಸುಧಾರಿತ ಸರ್ಜಿಕಲ್ ರೋಬೋಟ್ ವಿನ್ಯಾಸಕ್ಕೆ ₹4 ಕೋಟಿ. ಮಾನವ ತಳಿಶಾಸ್ತ್ರ ಕೇಂದ್ರದ ಮೂಲಸೌಕರ್ಯಕ್ಕೆ ₹20 ಕೋಟಿ ಹಾಗೂ ಎಐ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ₹16 ಕೋಟಿ. ಕ್ವಾಂಟಮ್ ರೋಡ್‌ಮ್ಯಾಪ್‌ನ ಮೊದಲ ಹಂತಕ್ಕೆ ₹10 ಕೋಟಿ ಅನುದಾನ.

ಇ-ಆಡಳಿತ: ದತ್ತಾಂಶ ವಿಶ್ಲೇಷಣಾ ಕೋಶ ಸ್ಥಾಪನೆಗೆ ₹1 ಕೋಟಿ ಹಾಗೂ 50 ಸರ್ಕಾರಿ ಕಾಲೇಜುಗಳಲ್ಲಿ ಎಐ ಪ್ರಯೋಗಾಲಯ ನಿರ್ಮಾಣಕ್ಕೆ ₹10 ಕೋಟಿ ಮೀಸಲು.

ಸಾರಿಗೆ ಇಲಾಖೆ: ಶಕ್ತಿ ಯೋಜನೆ ಮುಂದುವರಿಕೆ, ಸಿಬ್ಬಂದಿಗೆ ವೇತನ ಬಾಕಿ ಪಾವತಿ

ಶಕ್ತಿ ಯೋಜನೆಗೆ ₹5,300 ಕೋಟಿ: ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಯಲ್ಲಿ ಈವರೆಗೆ 684 ಕೋಟಿ ಟ್ರಿಪ್‌ಗಳಾಗಿದ್ದು, 2026-27ನೇ ಸಾಲಿಗೆ ₹5,300 ಕೋಟಿ ಒದಗಿಸಲಾಗಿದೆ.

ನೌಕರರಿಗೆ ₹1,271 ಕೋಟಿ ವೇತನ ಬಾಕಿ: ಸಾರಿಗೆ ನೌಕರರಿಗೆ 01.01.2021 ರಿಂದ 28.02.2023 ರವರೆಗಿನ ವೇತನ ಬಾಕಿ ಪಾವತಿಗಾಗಿ ₹1,271 ಕೋಟಿ ಮೀಸಲು ಹಾಗೂ 01.04.2025 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ.

4,000 ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ: ವಿಶ್ವಬ್ಯಾಂಕ್ ನೆರವಿನ ₹2,000 ಕೋಟಿ ಮೊತ್ತದ ‘KEBP’ ಯೋಜನೆಯಡಿ 4,000 ವಿದ್ಯುತ್ ಚಾಲಿತ ಬಸ್‌ಗಳ ಸೇರ್ಪಡೆ. ಬಿಎಂಟಿಸಿಯ 32 ಹಾಗೂ ಇತರೆ ನಿಗಮಗಳ 62 ಡಿಪೋಗಳ ಅಭಿವೃದ್ಧಿ. 2026-27ನೇ ಸಾಲಿನಲ್ಲಿ 1,000 ಡೀಸೆಲ್ ಬಸ್‌ಗಳನ್ನು ಒದಗಿಸಲಾಗುವುದು.

ತಂತ್ರಜ್ಞಾನ ಮತ್ತು ಮೂಲಸೌಕರ್ಯ: ಅಪಘಾತ ವಲಯಗಳನ್ನು (Black Spots) ಗುರುತಿಸಲು ಐಐಟಿ-ಮದ್ರಾಸ್ ಸಹಯೋಗದಲ್ಲಿ ₹5 ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಾಂಶ ಅಭಿವೃದ್ಧಿ.

ಪರೀಕ್ಷಾ ಪಥ ಮತ್ತು ನಿಲ್ದಾಣ: ಚಿಕ್ಕಮಗಳೂರು ಮತ್ತು ತುಮಕೂರಿನಲ್ಲಿ ₹12 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ. ತುಮಕೂರಿನಲ್ಲಿ ₹5 ಕೋಟಿ ವೆಚ್ಚದಲ್ಲಿ ಸೀಜಿಂಗ್ ಯಾರ್ಡ್. ರಾಮದುರ್ಗ, ಹೊನ್ನಾಳಿ, ಗದಗದಲ್ಲಿ ನೂತನ ಬಸ್ ನಿಲ್ದಾಣ ಹಾಗೂ ತರೀಕೆರೆಯಲ್ಲಿ ಬಸ್ ಡಿಪೋ ನಿರ್ಮಾಣ.

ಯುವ ಸಬಲೀಕರಣ ಮತ್ತು ಕ್ರೀಡೆ
ಜಲಕ್ರೀಡೆ ಮತ್ತು ಸೈಕ್ಲಿಂಗ್: ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಕಯಾಕಿಂಗ್ (Kayaking) ಮತ್ತು ಕ್ಯಾನೋಯಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ. ಮೈಸೂರಿನ ದಟ್ಟಗಳ್ಳಿಯಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್.

ಮ್ಯಾರಥಾನ್‌ಗಳ ಆಯೋಜನೆ: ‘ಸಶಕ್ತ ಕರ್ನಾಟಕ’ ಯೋಜನೆಯಡಿ ಬೆಳಗಾವಿ, ಗೋಕರ್ಣ, ಚಿತ್ರದುರ್ಗ ಹಾಗೂ ಹಂಪಿಯಲ್ಲಿ ತಲಾ ₹10 ಲಕ್ಷ ವೆಚ್ಚದಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್ ಮತ್ತು 10 ಜಿಲ್ಲಾ ಕೇಂದ್ರಗಳಲ್ಲಿ ತಲಾ ₹4 ಲಕ್ಷ ವೆಚ್ಚದಲ್ಲಿ ಜಿಲ್ಲಾಮಟ್ಟದ ಮ್ಯಾರಥಾನ್.

ಹೊಸ ಕ್ರೀಡಾಂಗಣಗಳು: ಬಂಗಾರಪೇಟೆ, ಮುದ್ದೇಬಿಹಾಳ, ಗುಳೇದಗುಡ್ಡ, ಕನಕಪುರ, ಕುಕನೂರು ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ತಲಾ ₹2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ. ತುಮಕೂರಿನಲ್ಲಿ ಕ್ರೀಡಾ ಮೂಲಸೌಕರ್ಯ ಉನ್ನತೀಕರಣಕ್ಕೆ ₹3 ಕೋಟಿ.

ಕ್ರೀಡಾ ವಿಜ್ಞಾನ ಕೇಂದ್ರ: ಕಲಬುರಗಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ.

ವಸತಿ ಮತ್ತು ಕುಸ್ತಿ ಅಖಾಡ: ವಿರಾಜಪೇಟೆಯಲ್ಲಿ ಸುಸಜ್ಜಿತ ಕ್ರೀಡಾ ತರಬೇತಿ ವಸತಿ ನಿಲಯ ಹಾಗೂ ಬೆಳಗಾವಿಯ ಬೆಳಗುಂದಿಯಲ್ಲಿ ನೂತನ ಕುಸ್ತಿ ಅಖಾಡ ನಿರ್ಮಾಣ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...