ರಾಜ್ಯದ ಸಾಲ 8.14 ಲಕ್ಷ ಕೋಟಿ ರೂ. ಅಲ್ಲ, 7.64 ಲಕ್ಷ ಕೋಟಿ ರೂ. ಮಾತ್ರ: ಹಣಕಾಸು ಇಲಾಖೆ ಸ್ಪಷ್ಟನೆ

Date:

2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಒಟ್ಟು ಹೊಣೆಗಾರಿಕೆ (ಸಾಲ) 8.14 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂಬ ಪತ್ರಿಕಾ ವರದಿಗಳ ಕುರಿತು ರಾಜ್ಯ ಹಣಕಾಸು ಇಲಾಖೆಯು ಸ್ಪಷ್ಟೀಕರಣ ನೀಡಿದೆ. ಈ ವರದಿಗಳಲ್ಲಿ ಉಲ್ಲೇಖಿಸಿರುವ ಅಂಕಿ-ಅಂಶಗಳು ವಾಸ್ತವಕ್ಕೆ ದೂರವಾಗಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

​ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವರದಿಯನ್ನು ಉಲ್ಲೇಖಿಸಿ ಪ್ರಕಟವಾದ ಸುದ್ದಿಯಲ್ಲಿ, 2025-26ರ ಅಂತ್ಯಕ್ಕೆ ರಾಜ್ಯದ ಸಾಲ 8.14 ಲಕ್ಷ ಕೋಟಿ ರೂ. (ರಾಜ್ಯದ ಒಟ್ಟು ಆಂತರಿಕ ಉತ್ಪನ್ನ- ಜಿಎಸ್‌ಡಿಪಿಯ ಶೇ. 26.5) ಆಗಲಿದೆ ಎಂದು ಹೇಳಲಾಗಿತ್ತು. ಆದರೆ, 2025-26ನೇ ಸಾಲಿನ ಬಜೆಟ್ ಅಂದಾಜಿನ ಪ್ರಕಾರ, ಮಾರ್ಚ್ 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆ 7,64,655 ಕೋಟಿ ರೂ. ಇರಲಿದ್ದು, ಇದು ಜಿಎಸ್‌ಡಿಪಿಯ ಶೇ. 24.91 ರಷ್ಟು ಮಾತ್ರ ಇರಲಿದೆ. ಆರ್‌ಬಿಐ ವರದಿಯಲ್ಲಿರುವ ಅಂಕಿ-ಅಂಶ ಹಾಗೂ ರಾಜ್ಯ ಸರ್ಕಾರದ ವಾಸ್ತವಿಕ ಸಾಲದ ಅಂದಾಜಿನ ನಡುವೆ ಸುಮಾರು 60,500 ಕೋಟಿ ರೂ.ಗಳ ವ್ಯತ್ಯಾಸವಿದ್ದು, ಸಾಲವಲ್ಲದ ಕೆಲವು ಬಾಬ್ತುಗಳನ್ನು ಸಾಲದ ಲೆಕ್ಕಕ್ಕೆ ಸೇರಿಸಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವಿವರಿಸಲಾಗಿದೆ.

​ಪ್ರಮುಖವಾಗಿ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲು ಕೇಂದ್ರ ಸರ್ಕಾರವು ಪಡೆದಿರುವ 20,412 ಕೋಟಿ ರೂ. ಸಾಲವನ್ನು ಆರ್‌ಬಿಐ ವರದಿಯಲ್ಲಿ ರಾಜ್ಯದ ಹೊಣೆಗಾರಿಕೆ ಎಂದು ತೋರಿಸಲಾಗಿದೆ. ಆದರೆ, ಈ ಸಾಲವನ್ನು ಕೇಂದ್ರ ಸರ್ಕಾರವೇ ಸಂಗ್ರಹಿಸುವ ಸೆಸ್ ಮೂಲಕ ಮರುಪಾವತಿಸಲಾಗುತ್ತಿದ್ದು, ಇದು ರಾಜ್ಯದ ಮೇಲಿನ ಹೊರೆಯಲ್ಲ. ಇದರ ಜೊತೆಗೆ, ರಾಜ್ಯವು ಸೆಸ್ ಮೂಲಕ ಸಂಗ್ರಹಿಸುವ ತನ್ನದೇ ಆದ ತೆರಿಗೆ ಆದಾಯವನ್ನು ಮೂಲಸೌಕರ್ಯ ಯೋಜನೆಗಳ ಬಂಡವಾಳ ಹೂಡಿಕೆಗೆ ಬಳಸಲು ಪ್ರತ್ಯೇಕ ನಿಧಿಯಲ್ಲಿರಿಸುತ್ತದೆ. ಈ 23,810 ಕೋಟಿ ರೂ. ಮೊತ್ತವನ್ನು ‘ಸಾರ್ವಜನಿಕ ಲೆಕ್ಕಪತ್ರ ನಿಧಿ’ ಹಾಗೂ ‘ಮೀಸಲಿಟ್ಟ ನಿಧಿಗಳಲ್ಲಿನ ಹೂಡಿಕೆ’ ಎಂಬ ಎರಡು ಪ್ರತ್ಯೇಕ ವರ್ಗಗಳಲ್ಲಿ ಪರಿಗಣಿಸಿ, ದ್ವಿಗುಣ ಎಣಿಕೆ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಮಹಾರಾಷ್ಟ್ರದಲ್ಲಿ 60 ಲಕ್ಷ ರೂ. ಮೌಲ್ಯದ 28 ಟನ್ ಗೋಮಾಂಸ ವಶ: ರಫ್ತು ಜಾಲದ ಹಿಂದೆ ನಿತಿನ್ ಗಡ್ಕರಿ ಪುತ್ರನ ನಂಟು?

​ಇದಲ್ಲದೆ, ಭವಿಷ್ಯದ ಸಾಲ ಮರುಪಾವತಿಯ ಭದ್ರತೆಗಾಗಿ ಆರ್‌ಬಿಐನ ಮಾರ್ಗಸೂಚಿಯಂತೆಯೇ ರಾಜ್ಯ ಸರ್ಕಾರವು ‘ಕನ್ಸಾಲಿಡೇಟೆಡ್ ಸಿಂಕಿಂಗ್ ಫಂಡ್'(ಏಕೀಕೃತ ಸಾಲ ತೀರಿಸುವ ನಿಧಿ) ಮತ್ತು ‘ಗ್ಯಾರಂಟಿ ರಿಡೆಂಪ್ಷನ್ ಫಂಡ್(ಜಾಮೀನು ತೀರಿಸುವ ನಿಧಿ)’ಗಳಲ್ಲಿ 16,300 ಕೋಟಿ ರೂ. ಹೂಡಿಕೆ ಮಾಡಿದೆ. ಇದೊಂದು ಹೂಡಿಕೆಯಾಗಿದ್ದರೂ, ಇದನ್ನು ಕೂಡ ರಾಜ್ಯದ ಸಾಲ ಎಂದೇ ಪರಿಗಣಿಸಲಾಗಿದೆ. ಈ ಮೂರು ಕಾರಣಗಳಿಂದಾಗಿ, ವಾಸ್ತವದಲ್ಲಿ ಸಾಲವಲ್ಲದ ಸುಮಾರು 60,500 ಕೋಟಿ ರೂ. ಮೊತ್ತವು ಬಾಹ್ಯ ವರದಿಗಳಲ್ಲಿ ರಾಜ್ಯದ ಸಾಲವಾಗಿ ತಪ್ಪಾಗಿ ಬಿಂಬಿತವಾಗಿದೆ. ಈ ನಮೂದುಗಳನ್ನು ಮರುವರ್ಗೀಕರಣ ಮಾಡುವಂತೆ ಮಹಾಲೇಖಪಾಲರಿಗೆ ಸರ್ಕಾರವು ಈಗಾಗಲೇ ಪತ್ರ ಬರೆದಿದ್ದು, ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಇಲಾಖೆ ತಿಳಿಸಿದೆ.

​ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆಗಳನ್ನು ಗಮನಿಸಿದರೆ, 2022–23ನೇ ಸಾಲಿನಲ್ಲಿ 5,22,847 ಕೋಟಿ ರೂ. (ಜಿಎಸ್‌ಡಿಪಿಯ ಶೇ. 23.97) ಇತ್ತು. 2023–24ರಲ್ಲಿ ಇದು 6,03,015 ಕೋಟಿ ರೂ.ಗೆ (ಶೇ. 23.49) ಹಾಗೂ 2024–25ರಲ್ಲಿ 6,84,428 ಕೋಟಿ ರೂ.ಗಳಿಗೆ (ಶೇ. 23.91) ತಲುಪಿತ್ತು. ಇದೀಗ 2025–26ನೇ ಸಾಲಿನ ಬಜೆಟ್ ಅಂದಾಜಿನ ಪ್ರಕಾರ ಈ ಮೊತ್ತ 7,64,655 ಕೋಟಿ ರೂ. (ಶೇ. 24.91) ಆಗಲಿದ್ದು, ವಾಸ್ತವಿಕ ಸಾಲದ ಪ್ರಮಾಣವು 8.14 ಲಕ್ಷ ಕೋಟಿ ರೂ. ಅಲ್ಲ ಎಂಬುದನ್ನು ಹಣಕಾಸು ಇಲಾಖೆಯು ಪುನರುಚ್ಚರಿಸಿದೆ.

State Finance Govt
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...