ಕಬ್ಬು ಬೆಳಗಾರರ ಹೋರಾಟ –ಪಕ್ಷಗಳ ರಾಜಕಾರಣ: ರೈತರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಗಳಿವು!

Date:

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ಭುಗಿಲೆದ್ದಿದೆ. ಕಬ್ಬು ಬೆಳೆಯುವ ರೈತರು ನಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಶ್ರಮಕ್ಕೆ ಪ್ರತಿಫಲವಿಲ್ಲದೆ, ಪರದಾಡುತ್ತಿದ್ದಾರೆ. ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಕಬ್ಬು ಬೆಳಗಾರರನ್ನು ರಕ್ಷಿಸಬೇಕು. ಪ್ರತಿ ಟನ್ ಕಬ್ಬಿಗೆ 3,500 ರೂ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ನಾವು ಬೆಳೆವ ಕಬ್ಬು, ಅದರಿಂದ ಬರುವ ಉತ್ಪನ್ನ, ಅದರಿಂದಾಗುವ ಲಾಭದಲ್ಲಿ ನಮಗೊಂದಿಷ್ಟು ಉಳಿಸಿ, ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಸರ್ಕಾರ ಮತ್ತು ಕಾರ್ಖಾನೆಗಳು ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಕಾರ್ಖಾನೆಗಳು ರೈತರಿಗೆ 3,500 ರೂ. ಕೊಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿವೆ. ರೈತರಿಗೆ ಹೆಚ್ಚಿನ ಆದಾಯ ಒದಗಿಸಲು ಸಾಧ್ಯವಿಲ್ಲವೆಂದು ಪಟ್ಟು ಹಿಡಿದಿವೆ.

ಶುಕ್ರವಾರ ಸತತ ಏಳುಗಳ ಕಾಲ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ನಡೆದ ಮಾತುಕತೆಯ ಬಳಿಕ DC ಜೊತೆಗಿನ ಒಪ್ಪಂದದಂತೆ 3,200 ರೂ. ಜೊತೆಗೆ 100 ರೂ. ಸೇರಿಸಿ 3,300 ರೂ. ಕೊಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಅಂದಹಾಗೆ, ಕರ್ನಾಟಕ – ಭಾರತದಲ್ಲಿಯೇ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ 2ನೇ ದೊಡ್ಡ ರಾಜ್ಯ. ಕರ್ನಾಟಕದಲ್ಲಿ ಒಟ್ಟು 77 ಸಕ್ಕರೆ ಕಾರ್ಖಾನೆಗಳಿವೆ. ಈ ಎಲ್ಲ ಕಾರ್ಖಾನೆಗಳು ಪ್ರತಿ ವರ್ಷ ಸರಾಸರಿ ಸುಮಾರು 55-60 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡುತ್ತವೆ. ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಾಗುತ್ತಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ವಿಜಯನಗರ, ಬೀದರ್, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಮಂಡ್ಯ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಕಬ್ಬು ಬೆಳೆವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಕಬ್ಬು ಬೆಳೆವ ರೈತರ ಪಾಡು-ಪರಿಪಾಟಲು ಹೇಳತೀರದು. ಹಾಗಂತ, ಕಬ್ಬು ಬೆಳೆಯಲ್ಲಿ ಲಾಭವಿಲ್ಲ ಎಂದಲ್ಲ, ಕಬ್ಬಿನ ಲಾಭವು ರೈತರಿಗೆ ದೊರೆಯುತ್ತಿಲ್ಲವಷ್ಟೇ…

ನಿನ್ನೆ ಸತತ ಏಳು ಗಂಟೆಗಳ ಕಾಲ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಜೊತೆಗಿನ ಸಮಾಲೋಚನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಟನ್ ಕಬ್ಬಿಗೆ 3,300 ರೂ. ಕೊಡಲು ನಿರ್ಧರಿಸಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆಗಿನ ಒಪ್ಪಂದದಂತೆ 3,200 ರೂ. ಜೊತೆಗೆ 100 ರೂ. ಸೇರಿಸಿ 3,300 ರೂ. ಕೊಡಲು ತೀರ್ಮಾನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜ್ಯದ 70% ಜನರು ತಮ್ಮ ಬದುಕಿಗಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತರು ಮತ್ತು ಕೃಷಿ ಕಾರ್ಮಿಕರನ್ನು ಒಳಗೊಂಡು ಕೃಷಿ ಆರ್ಥಿಕತೆಯು ರಾಜ್ಯದ ಜಿಡಿಪಿಗೆ 13-15% ಕೊಡುಗೆ ನೀಡುತ್ತಿದೆ. ಆದರೆ, ರೈತರು ಮಾತ್ರ ಸಂಕಷ್ಟದ ಸುಳಿಯಲ್ಲಿದ್ದಾರೆ. ಪರಿಣಾಮವಾಗಿ, 2013 ಮತ್ತು 2017ರ ನಡುವೆ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರ ನಂತರದ ಅಂಕಿಅಂಶವನ್ನು ಸರ್ಕಾರ ಬಹಿರಂಗ ಪಡಿಸಿಲ್ಲ. ಅತ್ಮಹತ್ಯೆಗೆ ಶರಣಾದ ರೈತರಲ್ಲಿ ಬಹುಸಂಖ್ಯಾತರು ಕಬ್ಬು ಬೆಳೆಗಾರರು.

ಕಬ್ಬು ವಾಣಿಜ್ಯ ಬೆಳೆ. ರಾಜ್ಯದ ರೈತರು ವಾರ್ಷಿಕ ಸುಮಾರು 600 ಲಕ್ಷ ಟನ್ ಕಬ್ಬು ಬೆಳೆದು, ಕಾರ್ಖಾನೆಗಳಿಗೆ ಪೂರೈಕೆ ಮಾಡುತ್ತಾರೆ. ಪರಿಣಾಮವಾಗಿ, ರಾಜ್ಯದಲ್ಲಿ ವಾರ್ಷಿಕ ಸರಾಸರಿ 55-60 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುತ್ತದೆ. ಸಕ್ಕರೆಯಿಂದ ರಾಜ್ಯಕ್ಕೆ 55,000 ಕೋಟಿ ರೂ. ಆದಾಯ (ಲಾಭ) ದೊರೆಯುತ್ತದೆ. ಆದರೆ, ಕಬ್ಬು ಬೆಳೆಗಾರರು ಲಾಭದಿಂದ ವಂಚಿತರಾಗುತ್ತಿದ್ದಾರೆ.

ಸರ್ಕಾರದ ಅಂದಾಜಿನ ಪ್ರಕಾರ, ಪ್ರತಿ ಟನ್ ಕಬ್ಬಿನಿಂದ ಸರಾಸರಿ 115 ಕೆ.ಜಿ ಸಕ್ಕರೆ ಉತ್ಪಾದನೆಯಾಗುತ್ತದೆ. ಆ ಸಕ್ಕರೆಯಿಂದ ಸರಾಸರಿ 4,370 ರೂ. ಆದಾಯ ದೊರೆಯುತ್ತದೆ. ಅದರಲ್ಲಿ, ಕಾರ್ಖಾನೆಯ ಖರ್ಚು (ಅರೆಯುವಿಕೆ, ಕಾರ್ಮಿಕ ವೆಚ್ಚು, ಇತ್ಯಾದಿ) 500 ರೂ. ಎಂದು ಅಂದಾಜಿಸಲಾಗಿದೆ. ಅಂದರೆ, ಸುಮಾರು 3,870 ರೂ. ಲಾಭ ಕಾರ್ಖಾನೆಗಳಿಗೆ ದೊರೆಯುತ್ತದೆ. ಅದರಲ್ಲಿ, ರೈತರಿಗೆ ಕಾರ್ಖಾನೆಗಳು ಕೊಡುವುದು ಕೇವಲ 2,600 ರೂ. ಮಾತ್ರ. ಒಂದು ಟನ್ ಕಬ್ಬಿನಲ್ಲಿ ಕಾರ್ಖಾನೆಗಳು ಸಕ್ಕರೆಯಿಂದಲೇ ಸರಿಸುಮಾರು 1,000 ರೂ. ಲಾಭ ಗಳಿಸುತ್ತಿವೆ. ಆದರೆ, ರೈತರಿಗೆ ಸಿಗುವ 2,600 ರೂ.ಗಳಲ್ಲಿ ಬಿತ್ತನೆ, ನಿರ್ವಹಣೆ, ರಸಗೊಬ್ಬರ, ಕಟಾವು ಹಾಗೂ ಸಾಗಾಟ ವೆಚ್ಚವೇ 2,000 ರೂ.ಗಳಿಗೆ ಅಧಿಕವಾಗುತ್ತದೆ. ಪರಿಣಾಮ, ರೈತರ ಒಂದು ವರ್ಷದ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ.

ಅಂದಹಾಗೆ, ಕಾರ್ಖಾನೆಗಳು ಕಬ್ಬಿನಿಂದ ಕೇವಲ ಸಕ್ಕರೆಯನ್ನು ಮಾತ್ರವೇ ಉತ್ಪಾದನೆ ಮಾಡುವುದಿಲ್ಲ. ಸಕ್ಕರೆಯ ಜೊತೆಗೆ, ಮೊಲಾಸಸ್, ಎಥನಾಲ್, ಬಗಾಸ್ (ಪಕಾಸ್) ಹಾಗೂ ಪ್ರೆಸ್‌ಮಡ್‌ (ಗೊಬ್ಬರ)ವನ್ನೂ ಉತ್ಪಾದನೆ ಮಾಡುತ್ತವೆ. ಪ್ರತಿ ಟನ್‌ ಕಬ್ಬಿನಿಂದ 115 ಕೆ.ಜಿ ಸಕ್ಕರೆಯ ಜೊತೆಗೆ, 45 ಕೆ.ಜಿ ಮೊಲಾಸಸ್, 15 ಲೀಟರ್ ಎಥನಾಲ್, 250 ಕೆ.ಜಿ ಬಗಾಸ್ ಹಾಗೂ 40 ಕೆ.ಜಿ ಗೊಬ್ಬರ ಉತ್ಪಾದನೆಯಾಗುತ್ತದೆ.

ಒಂದು ಟನ್‌ ಕಬ್ಬಿನಿಂದ ಉತ್ಪಾದನೆಯಾಗುವ ಮೊಲಾಸಸ್‌ನಿಂದ 900 ರೂ., ಎಥನಾಲ್‌ನಿಂದ 975 ರೂ., ಬಗಾಸ್‌ನಿಂದ 1,005 ರೂ. ಹಾಗೂ ಸಕ್ಕರೆಯಿಂದ 4,370 ರೂ. ದೊರೆಯುತ್ತದೆ. ಅಂದರೆ, ಒಂದು ಟನ್‌ ಕಬ್ಬಿನಿಂದ ಕಾರ್ಖಾನೆಗಳು ಸರಾಸರಿ ಒಟ್ಟು 7,250 ರೂ. ಆದಾಯ ಪಡೆಯುತ್ತವೆ.

ಈ ಒಟ್ಟು 7,250 ರೂ. ಆದಾಯದಲ್ಲಿ, ಕಾರ್ಖಾನೆಗಳ ಉತ್ಪಾದನಾ ವೆಚ್ಚವು ಗರಿಷ್ಠ 1,650 ರೂ. ಎಂದು ಅಂದಾಜಿಸಲಾಗಿದೆ. ಅಂದರೆ, 6,500 ರೂ. ಕಾರ್ಖಾನೆಗಳಿಗೆ ಉಳಿತಾಯವಾಗುತ್ತಿದೆ. ಇದರಲ್ಲಿ, ಕೇವಲ 2,600 ರೂ.ಗಳನ್ನು ಮಾತ್ರವೇ ರೈತರಿಗೆ ಕೊಟ್ಟು, 3,900 ರೂ.ಗಳನ್ನು ಕಾರ್ಖಾನೆಗಳು ಲಾಭ ಮಾಡುತ್ತಿವೆ.  ವರ್ಷ ಪೂರ್ತಿ ಶ್ರಮ ವ್ಯಯಿಸಿ, ಬೆವರು ಸುರಿಸಿ ದುಡಿವ ರೈತರು ಲಾಭವಲ್ಲದ ಲಾಭ ಪಡೆದು ಸಂಕಷ್ಟ ಎದುರಿಸುವಂತಾಗಿದೆ.

ಹೀಗಾಗಿಯೇ, ತಮ್ಮ ಶ್ರಮ, ಸಮಯ ಹಾಗೂ ವೆಚ್ಚಕ್ಕೆ ಪ್ರತಿಫಲ ದೊರೆಯಬೇಕು. ಅದಕ್ಕಾಗಿ, ವೈಜ್ಞಾನಿಕವಾಗಿ ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಮಾಡಬೇಕು ಎಂದು ರೈತರು ಕೇಳುತ್ತಿದ್ದಾರೆ. ರೈತರು ಕೇಳುತ್ತಿರುವುದು ಕಷ್ಟಸಾಧುವೇನಲ್ಲ. 2025-26ರ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವೇ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ (ಫೇರ್ ಆಂಡ್ ರಿಮ್ಯುನರೇಟಿವ್ ಪ್ರೈಸ್ –FRP) ಅಡಿಯಲ್ಲಿ ಪ್ರತಿ ಟನ್ ಕಬ್ಬಿಗೆ 3,550 ರೂ. ಬೆಲೆ ನಿಗದಿ ಮಾಡಿದೆ. ಇದರಲ್ಲಿಯೇ ಕಟಾವು ಮತ್ತು ಸಾಗಾಟ ವೆಚ್ಚವೂ ಇರಲಿದೆ ಎಂದು ಸರ್ಕಾರ ಹೇಳಿದೆ.

ಆದರೆ, ರಸಗೊಬ್ಬರ, ಕಾರ್ಮಿಕ ವೆಚ್ಚ, ನೀರು, ನಿರ್ವಹಣೆ ಹಾಗೂ ಸಾಗಾಟ ವೆಚ್ಚಗಳು 30-40% ಏರಿಕೆಯಾಗಿವೆ. ಹೀಗಾಗಿ, ಕಟಾವು ಮತ್ತು ಸಾಗಾಟ ವೆಚ್ಚವಲ್ಲದೆ, 3,500 ರೂ. ನಿಗದಿ ಮಾಡಬೇಕು ಎಂಬುದು ರೈತರ ಬೇಡಿಕೆ.

ರೈತರು ಎದುರಿಸುತ್ತಿರುವ ಮತ್ತೊಂದು ಗಂಭೀರ ವಿಚಾರವೆಂದರೆ, ಕಾರ್ಖಾನೆಗಳು ದುರುದ್ದೇಶದಿಂದ ಕಬ್ಬಿನ ತೂಕ ಕಡಿಮೆ ಬರುವಂತೆ ಮಾಡುತ್ತಿವೆ. ರೈತರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿ, ಕಾರ್ಖಾನೆಗಳಿಗೆ ತರುತ್ತಾರೆ. ಆದರೆ, ಕಾರ್ಖಾನೆಯವರು ಲೋಡ್‌ ಹೆಚ್ಚಾಗಿದೆ ಎಂದು ಕಟಾವು ಮಾಡಲಾದ ಕಬ್ಬನ್ನು ಎರಡು/ಮೂರು ದಿನಗಳ ಕಾಲ ಕಾರ್ಖಾನೆಗಳ ಮುಂದೆ ಇರಿಸಿಕೊಳ್ಳುತ್ತಾರೆ. ಪರಿಣಾಮವಾಗಿ, ಕಬ್ಬು ಬಿಸಿಲಿನಲ್ಲಿ ಒಣಗಿ ಅದರ ತೂಕ ಕಡಿಮೆಯಾಗುತ್ತದೆ. ಇದು ರೈತರಿಗೆ ಮತ್ತಷ್ಟು ಆದಾಯ ಕಡಿಮೆ ಮಾಡುತ್ತದೆ.

ಅಂತೆಯೇ, ಕಬ್ಬು ಸರ್ಕಾರಿ ನಿಯಮಗಳ ಪ್ರಕಾರ, ಕಬ್ಬು ಕಾರ್ಖಾನೆಗೆ ಬಂದ 15 ದಿನಗಳೊಳಗೆ ರೈತರಿಗೆ ಹಣವನ್ನು ಪಾವತಿ ಮಾಡಬೇಕು. ಆದರೆ, ಬಹುತೇಕ ಕಾರ್ಖಾನೆಗಳು ಪಾವತಿಯನ್ನು ತಿಂಗಳುಗಳ ಕಾಲ ವಿಳಂಬಗೊಳಿಸುತ್ತವೆ. ಸಾಲ ಮಾಡಿ, ಕೃಷಿ ಮಾಡಿದ ರೈತರು ಸಕಾಲಕ್ಕೆ ಸಾಲ ತೀರಿಸಲಾಗದೆ ಪರದಾಡುವಂತಾಗುತ್ತದೆ.

ಈ ಲೇಖನ ಓದಿದ್ದೀರಾ?: ಕಬ್ಬು ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳು & ಸರ್ಕಾರ, ಬೀದಿಯಲ್ಲಿ ರೈತ

ಗಮನಾರ್ಹವಾಗಿ, ಕರ್ನಾಟಕದ ಬಹುತೇಕ ಕಾರ್ಖಾನೆಗಳ ಮಾಲೀಕರು ರಾಜಕಾರಣಿಗಳೇ ಆಗಿದ್ದಾರೆ. ಬಿಜೆಪಿಯ ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ, ಚಾಲಚಂದ್ರ ಜಾರಕಿಹೊಳಿ, ಗುರುದಪ್ಪ ನಾಗಮರಪ್ಪಳ್ಳಿ, ಸಂಗಮೇಶ್‌ ನಿರಾಣಿ, ಬಂಡೆಪ್ಪ ಕಾಶೇಂಪುರ, ಸುರೇಶ್‌ ಅಂಗಡಿ ಮತ್ತು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಯತ್ನಾಳ್‌ ಹಾಗೂ ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಮನೂರ ಶಿವಶಂಕರಪ್ಪ, ಈಶ್ವರ್ ಖಂಡ್ರ, ಎಸ್‌.ಆರ್‌ ಪಾಟೀಲ್ ಸೇರಿದಂತೆ ಹಲವು ರಾಜಕಾರಣಿಗಳು ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ಈ ಎಲ್ಲರೂ ಉತ್ತರ ಕರ್ನಾಟಕ ಭಾಗದಲ್ಲಿಯೇ ತಮ್ಮ ಕಾರ್ಖಾನೆಗಳನ್ನು ಹೊಂದಿದ್ದಾರೆ.

ಪ್ರಸ್ತುತ, ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಯುವ ರೈತರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಯನ್ನು ಬಿಜೆಪಿ ಹೈಜಾಕ್ ಮಾಡುತ್ತಿದೆ. ಕಬ್ಬು ಬೆಳೆವ ರೈತರ ಪರವಾಗಿ ತಾವಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಅದೇ ಭಾಗದಲ್ಲಿ ಬಿಜೆಪಿಗರದ್ದೇ ಸಕ್ಕರೆ ಕಾರ್ಖಾನೆಗಳಿವೆ. ಬಿಜೆಪಿಗರ ಸಕ್ಕರೆ ಕಾರ್ಖಾನೆಗಳು ಕೂಡ ರೈತರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ 3,500 ರೂ. ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿವೆ. ಇದು ಬಿಜೆಪಿಯ ಇಬ್ಬಂದಿ ಧೋರಣೆಯನ್ನೂ – ರೈತರ ಹೋರಾಟವನ್ನು ತನ್ನ ರಾಜಕೀಯ ಲಾಭಕ್ಕಾಗಿ ಮಾತ್ರವೇ ಬಳಸಿಕೊಳ್ಳುತ್ತಿದೆ ಎಂಬುದನ್ನೂ ಬಟಾಬಯಲು ಮಾಡಿದೆ.

ಸರ್ಕಾರವೂ ಬಿಜೆಪಿಯಂತೆ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರದ ತಲೆಗೆ ಕಟ್ಟಿ, ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್‌ – ಎರಡೂ ಪಕ್ಷಗಳಿಗೂ ರೈತರ ಹಿತವಾಗಲೀ, ರೈತರಿಗೆ ನ್ಯಾಯ ಒದಗಿಸುವುದಾಗಲೀ ಬೇಕಿಲ್ಲ. ನ್ಯಾಯಯುತ ಬೆಲೆ ಸಿಗದೆ ಪ್ರತಿಭಟನೆಯನ್ನು ಕೈಬಿಡುವ ಮಾತೇ ಇಲ್ಲ ಎನ್ನುತ್ತಿದ್ದಾರೆ ರೈತರು.

ಇದನ್ನೂ ಓದಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 3300 ರೂ. ಕೊಡಲು ತೀರ್ಮಾನ: ಸಿದ್ದರಾಮಯ್ಯ ಘೋಷಣೆ

ರೈತರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ. ಈಗಾಗಲೇ, ಮಹಾರಾಷ್ಟ್ರದಲ್ಲಿ ಪ್ರತಿ ಟನ್‌ ಕಬ್ಬಿಗೆ 3,400ರಿಂದ 3,500 ರೂ. ಕೊಡಲಾಗುತ್ತಿದೆ. ಮಾತ್ರವಲ್ಲದೆ, ಕಟಾವು ಮತ್ತು ಸಾಗಾಟ ವೆಚ್ಚವನ್ನು ಕಾರ್ಖಾನೆಗಳೇ ಭರಿಸುತ್ತಿವೆ. ಜೊತಗೆ, ‘ಸಕ್ಕರೆ ಕಂಟ್ರೋಲ್ ಆರ್ಡರ್-1966’ರ ಪ್ರಕಾರ ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಸ್, ಎಥನಾಲ್‌ನಿಂದ ಬರುವ ಲಾಭದಲ್ಲಿಯೂ ರೈತರಿಗೆ ಪಾಲು ಕೊಡಬೇಕು.

ಹೀಗಿರುವಾಗ, ಮಹಾರಾಷ್ಟ್ರ ಮಾದರಿಯಲ್ಲಿ ಬೆಲೆ ನಿಗದಿ ಮಾಡಲು ಕರ್ನಾಟಕ ಸರ್ಕಾರ ಮತ್ತು ಕಾರ್ಖಾನೆಗಳಿಗೆ ಇಚ್ಛಾಸಕ್ತಿ ಬೇಕು. ರೈತರ ಪರವಾದ ಕೃಷಿ ನೀತಿ, FRP ಸುಧಾರಣೆಗಳು ಜಾರಿಯಾಗಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...