ತುಮಕೂರು | ಕೊಬ್ಬರಿ ಬೆಲೆ ನಿರಂತರ ಕುಸಿತ; ನಷ್ಟದ ದವಡೆಗೆ ರೈತರು

Date:

ನಾಫೆಡ್ ಖರೀದಿ ನಿಲ್ಲಿಸಿದ್ದರಿಂದ ಕೊಬ್ಬರಿ ಬೆಲೆ ಕುಸಿತವಾಗಿದೆ. ನಾಫೆಡ್ ಖರೀದಿ ಆರಂಭಿಸಿದರೆ ಕೊಬ್ಬರಿ ಬೆಲೆ ಏರಿಕೆಯಾಗಲಿದೆ. ಹಾಗಾಗಿ ಕಡಿಮೆ ಬೆಲೆಗೆ ಕೊಬ್ಬರಿ ಸಿಗುವಾಗ ಹೆಚ್ಚಿನ ಬೆಲೆ ನೀಡಿ ತೆಗೆದುಕೊಳ್ಳುವುದು ಯಾಕೆಂಬ ಧೋರಣೆಯಿಂದ ಕೊಬ್ಬರಿ ಬೆಲೆ ನಿರಂತರ ಕುಸಿತ ಕಂಡಿದೆ. ಕೂಡಲೇ ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕು.

ಕೊಬ್ಬರಿ ಬೆಲೆ ನಿರಂತರ ಕುಸಿತದಿಂದ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ತೆಂಗು ಬೆಳೆಗಾರಿಗೆ ಕೊಬ್ಬರಿ ಬೆಲೆ ಇಳಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಲ್ಪತರು ನಾಡು ಎಂದೇ ಪ್ರಸಿದ್ಧಿ ಪಡೆದಿರುವ ತುಮಕೂರು ಜಿಲ್ಲೆಯಲ್ಲಿ ತೆಂಗು ಬೆಳೆಯನ್ನೇ ಅವಲಂಬಿಸಿ ಸಾವಿರಾರು ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ರಾಜ್ಯದಲ್ಲಿ ಒಟ್ಟು 6,46,552 ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಮಳೆಯಿಲ್ಲದೆ ಬರ ಆವರಿಸಿರುವ ಸಂಕಷ್ಟದ ಕಾಲದಲ್ಲಿ ಕೊಬ್ಬರಿ ಬೆಲೆ ಕುಸಿತದಿಂದ ರೈತರನ್ನು ಬೆಂಕಿಯಿಂದ ತೆಗೆದು ಬಾಣಲಿಗೆ ಹಾಕಿದಂತಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಿ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕೆಂಬುದು ರೈತರ ಒತ್ತಾಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತ ಸಂಘದ ತುಮಕೂರು ಜಿಲ್ಲಾ ಸಂಚಾಲಕ ಸಿ.ಕೆ. ಪ್ರಕಾಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಆರು ತಿಂಗಳಿಂದ ಕೊಬ್ಬರಿ ಬೆಲೆ ನಿರಂತರ ಕುಸಿತ ಕಂಡಿದೆ. ಕ್ವಿಂಟಾಲ್ ಕೊಬ್ಬರಿಗೆ ₹7,000ದಿಂದ ₹8,000, ₹9,000 ಮಾತ್ರ ಇದೆ. ತೋಟಗಾರಿಕೆ ಇಲಾಖೆಯ ಅಂದಾಜಿನಂತೆ ಒಂದು ಕ್ವಿಂಟಾಲ್ ಕೊಬ್ಬರಿ ಬರಲು ₹16,000 ಖರ್ಚಾಗುತ್ತದೆ. ಆದರೆ ಅದರ ಅರ್ಧದಷ್ಟು ಅಸಲು ಹಣ ಸಿಗದೆ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕೇಂದ್ರ ಸರ್ಕಾರ ಕಳೆದ ಆಗಸ್ಟ್ ತಿಂಗಳವರೆಗೂ ನಾಫೆಡ್ ಮೂಲಕ ರಾಜ್ಯದಲ್ಲಿ 5.1 ಲಕ್ಷ ಕ್ವಿಂಟಾಲ್ ಕೊಬ್ಬರಿಯನ್ನು ಕ್ವಿಂಟಾಲ್‌ಗೆ ₹11750ಕ್ಕೆ ರೈತರಿಂದ ನೇರವಾಗಿ ಖರೀದಿ ಮಾಡಿತ್ತು. ಇದರ ಜೊತೆಗೆ ರಾಜ್ಯ ಸರ್ಕಾರವೂ ₹1,250 ಪೋತ್ಸಾಹಧನ ನೀಡಿದ ಮೇಲೆ ಕ್ವಿಂಟಾಲ್ ಕೊಬ್ಬರಿಗೆ ₹13,000ದಂತೆ ಒಂದು ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಲಾಗಿದೆ. ಆದರೆ ಈಗ ಖರೀದಿ ಮಾಡುವುದನ್ನು ನಿಲ್ಲಿಸಿರುವುದು ಕೊಬ್ಬರಿ ಲಾಟು ಇಟ್ಟುಕೊಂಡು ಆಸೆಗಣ್ಣಿನಿಂದ ನೋಡುತ್ತಿದ್ದ ರೈತರನ್ನು ನಡು ನೀರಿನಲ್ಲಿ ಕೈ ಬಿಟ್ಟಾಂತಾಗಿದೆ” ಎಂದರು.

“ರೈತರ ದನಿ ಜನಪ್ರತಿನಿಧಿಗಳ ಕಿವಿಗೆ ಬೀಳುತ್ತಿಲ್ಲ. ರಾಜಕೀಯ ಲಾಭಕ್ಕೆ ಬೃಹತ್ ಹೋರಾಟ ಮಾಡುವ ರಾಜಕೀಯ ಧುರೀಣರು ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ಕೇಂದ್ರ ಸರ್ಕಾರ ಖರೀದಿಸುವಂತೆ ಒತ್ತಾಯ ಮಾಡುವಲ್ಲಿ ಅವರ ದನಿ ಸೊರಗಿ ಹೋಗಿದೆ” ಎನ್ನುತ್ತಾರೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ರೈತರು.

“ರೋಗ ಬಾಧೆಯಿಂದ ತೆಂಗು ಬೆಳೆಯ ವಿಸ್ತೀರ್ಣವೇ ಕುಸಿಯುತ್ತಿದೆ. 15, 16 ವರ್ಷ ಸಾಕಿದ ಮರಗಳೇ ಇದ್ದಕ್ಕಿದ್ದಂತೆ ರೋಗಕ್ಕೆ ತುತ್ತಾಗಿ ಒಣಗುತ್ತಿವೆ. ಇಂತಹ ಹಲವು ಸಮಸ್ಯೆಯ ಸುಳಿಯಲ್ಲಿರುವ ತೆಂಗು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಸಿಗದೆ ಹೋದರೆ ಚೇತರಿಸಿಕೊಳ್ಳುವುದೇ ಕಷ್ಟವಾಗಲಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ” ಎಂದು ರೈತರು ಒತ್ತಾಯಿಸಿದರು.

ತಿಪಟೂರಿನ ಟೂಡ ಶಶಿಧರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವೈಜ್ಞಾನಿಕ ಬೆಂಬಲ ಬೆಲೆಯಂತೆ ಕನಿಷ್ಠ ಒಂದು ಕ್ವಿಂಟಾಲ್‌ಗೆ ₹16,000 ಕೇಂದ್ರ ಸರ್ಕಾರ ಕೊಡಬೇಕು. ಇವರು ಕೊಡುತ್ತಿರುವುದೇ 11,750. ನಾಫೆಡ್ ಬೆಂಬಲ ಬೆಲೆಯಲ್ಲೇ ₹5,000 ಕಡಿಮೆ ಇದೆ. ಹಾಗಾಗಿ ಬೆಲೆ ನಿಗದಿ ಮಾಡುವಾಗ ವೈಜ್ಞಾನಿಕವಾಗಿ ನಿಗದಿ ಮಾಡಬೇಕು. ನಾಫೆಡ್ ಖರೀದಿಸುವುದನ್ನು ಯಾವಾಗ ಬೇಕೋ ಆಗ ನಿಲ್ಲಿಸಿಬಿಡುತ್ತದೆ. ಗುಣಮಟ್ಟದ ಕೊಬ್ಬರಿ ಮಾತ್ರ ತೆಗೆದುಕೊಳ್ಳುತ್ತೇವೆಂದು ಗೋಲ್‌ಮಾಲ್ ಮಾಡುತ್ತಾರೆ. ಅದರೆ ರೈತರು ಬೆಳೆದಿರುವ ಎಲ್ಲ ಕೊಬ್ಬರಿ ತೆಗೆದುಕೊಳ್ಳುವಂತಾಗಬೇಕು” ಎಂದು ಒತ್ತಾಯಿಸಿದ್ದಾರೆ.

“ಸರ್ಕಾರ ನಿರಂತರವಾಗಿ ಕೊಬ್ಬರಿ ಖರೀದಿ ಮಾಡಬೇಕು. ಚುನಾವಣಾ ಪ್ರಚಾರಕ್ಕೆ ಬಂದಾಗ ಈಗಿನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಂಮತ್ರಿ ಅವರು ಬೆಂಬಲ ಬೆಲೆ ಕೊಡಲು ಒಪ್ಪಿಕೊಂಡು ಹೋಗಿದ್ದರು. ಆ ಮಾತು ಉಳಿಸಿಕೊಳ್ಳಬೇಕು. ಹಾಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎರಡೂ ಸೇರಿ ಕನಿಷ್ಠ ₹15,000 ಬೆಂಬಲ ಬೆಲೆ ಕೊಡಬೇಕು” ಎಂದು ಆಗ್ರಹಿಸಿದರು.

ನಾಫೆಡ್ ಖರೀದಿ ನಿಲ್ಲಿಸಿದ್ದರಿಂದ ಕೊಬ್ಬರಿ ಬೆಲೆ ಕುಸಿತವಾಗಿದೆ. ನಾಫೆಡ್ ಖರೀದಿ ಆರಂಭಿಸಿದರೆ ಕೊಬ್ಬರಿ ಬೆಲೆ ಏರಿಕೆಯಾಗಲಿದೆ. ಹಾಗಾಗಿ ಕಡಿಮೆ ಬೆಲೆಗೆ ಕೊಬ್ಬರಿ ಸಿಗುವಾಗ ಹೆಚ್ಚಿನ ಬೆಲೆ ನೀಡಿ ತೆಗೆದುಕೊಳ್ಳುವುದು ಯಾಕೆಂಬ ಧೋರಣೆಯಿಂದ ಕೊಬ್ಬರಿ ಬೆಲೆ ನಿರಂತರ ಕುಸಿತ ಕಂಡಿದೆ. ಕೂಡಲೇ ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕು.

ಒಟ್ಟಾರೆ ಕೇಂದ್ರ ಸರ್ಕಾರ ನಾಫೆಡ್ ಮೂಲಕ ಕೊಬ್ಬರಿ ಖರೀದಿಸುವ ಮೂಲಕ ಕೊಬ್ಬರಿಯನ್ನೇ ನಂಬಿ ಜೀವನ ಸಾಗಿಸುವವರ ಬದುಕಿಗೆ ನೆರವಾಗಬೇಕಿದೆ.

ವಿಶೇಷ ವರದಿ – ಚಂದನ್ ಡಿ ಎನ್ ತುಮಕೂರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...