ಯುಜಿಸಿ ಹೊಸ ನಿಯಮದ ಹೊಡೆತ: ಕೆಲಸ ಕಳೆದುಕೊಂಡ ಸಾವಿರಾರು ಅತಿಥಿ ಉಪನ್ಯಾಸಕರು

Date:

ಕಳೆದ ಎರಡು ದಶಕಗಳಿಂದ ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಾ ಬಂದಿರುವ ಸಾವಿರಾರು ಅತಿಥಿ ಉಪನ್ಯಾಸಕರು ಇಂದು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುಜಿಸಿ ನಿಗದಿ ಮಾಡಿದ ಹೊಸ ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರಣ, ಸುಮಾರು 6,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಹೈಕೋರ್ಟ್ ಆದೇಶದಂತೆ, ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯು 2025–26ನೇ ಸಾಲಿನ 2, 4 ಮತ್ತು 6ನೇ ಸೆಮಿಸ್ಟರ್‌ಗಳಿಗಾಗಿ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ನೇಮಕಾತಿ ಸಂಪೂರ್ಣವಾಗಿ ಯುಜಿಸಿ ನಿಯಮಗಳ ಆಧಾರವಾಗಿದ್ದು, ಸ್ನಾತಕೋತ್ತರ ಪದವಿಯ ಜೊತೆಗೆ ಎನ್‌ಇಟಿ, ಕೆ-ಸೆಟ್ ಅಥವಾ ಪಿಎಚ್‌.ಡಿ ಕಡ್ಡಾಯವಾಗಿದೆ. ಡಿಸೆಂಬರ್ 4ರಿಂದ ಈ ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು, ಅರ್ಹತೆ ಇಲ್ಲದ ಅತಿಥಿ ಉಪನ್ಯಾಸಕರಿಗೆ ಮುಂದಿನ ಅವಕಾಶಗಳು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶ ಇದಾದರೂ, ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ದೊಡ್ಡ ಹಿನ್ನಡೆಯಾಗಿದೆ.

ಅತಿಥಿ ಉಪನ್ಯಾಸಕರ ಸಮಸ್ಯೆಗೆ ಇದೊಂದು ಹೊಸ ಸಂಗತಿಯಲ್ಲ. 1995–96ರಲ್ಲೇ ಅರೆಕಾಲಿಕ ಉಪನ್ಯಾಸಕರನ್ನು ಕಾಯಂ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಸೇವಾ ಭದ್ರತೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ, 2003ರಲ್ಲಿ ‘ಅರೆಕಾಲಿಕ’ ಎಂಬ ಪದವನ್ನು ‘ಅತಿಥಿ’ ಎಂದು ಬದಲಾಯಿಸಲಾಯಿತು. ಇದರಿಂದ ಸೇವಾ ಭದ್ರತೆಗೆ ಇರುವ ಹಕ್ಕುಗಳು ಕಳೆದುಕೊಳ್ಳುವಂತಾಯಿತು. ಮೊದಲಿಗೆ ತಿಂಗಳಿಗೆ ಕೇವಲ ₹1,200 ಗೌರವಧನ ಪಡೆದುಕೊಳ್ಳುತ್ತಿದ್ದ ಈ ಉಪನ್ಯಾಸಕರು, ವರ್ಷಗಳಿಂದ ಸೇವಾ ಭದ್ರತೆಗಾಗಿ ಹೋರಾಡುತ್ತಿದ್ದರು. ಹೋರಾಟ ತೀವ್ರವಾದಾಗ ಸಂಬಳವನ್ನು ಹೆಚ್ಚಿಸಿದರೂ, ಶಾಶ್ವತ ಉದ್ಯೋಗ ನೀಡುವ ಪ್ರಶ್ನೆಯಲ್ಲಿ ಸರ್ಕಾರಗಳು ಹಿಂಜರಿದವು. 2022–23ರಲ್ಲಿ ಗೌರವಧನ ದ್ವಿಗುಣಗೊಳಿಸಿದರೂ, ಮೂಲ ಸಮಸ್ಯೆ ಬಗೆಹರಿಯದೆ ಉಳಿಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನಡುವೆ ಯುಜಿಸಿಯು ಹೊಸ ಅರ್ಹತಾ ನಿಯಮಗಳನ್ನು ಜಾರಿಗೊಳಿಸಿತು. ಸ್ನಾತಕೋತ್ತರ ಪದವಿಯ ಜೊತೆಗೆ ಎನ್‌ಇಟಿ/ಕೆ-ಸೆಟ್ ಅಥವಾ ಪಿಎಚ್‌.ಡಿ ಕಡ್ಡಾಯ. ಅನುಭವದ ಆಧಾರದ ಮೇಲೆ ದಶಕಗಳಿಂದ ಕೆಲಸ ಮಾಡುತ್ತಿದ್ದ ಅತಿಥಿ ಉಪನ್ಯಾಸಕರು ಈ ನಿಯಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋದರೂ, ಕೋರ್ಟ್ ಯುಜಿಸಿ ನಿಯಮವನ್ನೇ ಸಮರ್ಥಿಸಿತು. ಹಿಂದಿನಿಂದಲೂ ಸೇವೆ ಸಲ್ಲಿಸುತ್ತಿದ್ದವರಿಗೆ ವಿನಾಯಿತಿ ನೀಡಬೇಕೆಂಬ ಅವರ ಬೇಡಿಕೆಗೆ ಮನ್ನಣೆ ಸಿಗಲಿಲ್ಲ. ಅರ್ಹತೆ ಪಡೆಯಲು ನೀಡಿದ್ದ ಮೂರು ವರ್ಷಗಳ ಗಡುವೂ ಮುಗಿದುಹೋಗಿದ್ದು, ದಶಕಗಳ ಹೋರಾಟವೂ ಫಲವಿಲ್ಲದೆ ಹೋಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಹಿತಕ್ಕಾಗಿ ಕಾರ್ಮಿಕರ ಹಕ್ಕುಗಳ ಹತ್ತಿಕ್ಕುತ್ತಿರುವ ಮೋದಿ

ಕಾನೂನು ಇಲಾಖೆಯ ಸಲಹೆಯಂತೆ, ಮಾನವೀಯ ನೆಲೆಯಲ್ಲಿ 2024–25ರಲ್ಲಿ ಕೆಲಸ ಮಾಡಿದ ಅತಿಥಿ ಉಪನ್ಯಾಸಕರನ್ನು 2025–26ರ 1, 3 ಮತ್ತು 5ನೇ ಸೆಮಿಸ್ಟರ್‌ಗಳಿಗೆ ಮುಂದುವರಿಸಲಾಯಿತು. ಅವರು ಸೆಪ್ಟೆಂಬರ್ 14ಕ್ಕೆ ಕೆಲಸ ಹಿಡಿದರೂ, ಈಗ ಕೇವಲ ಎರಡು ತಿಂಗಳಲ್ಲೇ ಅವರ ಉದ್ಯೋಗ ಅಂತ್ಯವಾಗಿದೆ. ಇದರಿಂದಾಗಿ ಅವರ ಜೀವನದಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಬಹುದು ಮತ್ತು ಕಾಲೇಜುಗಳಲ್ಲಿ ಅನುಭವಿ ಶಿಕ್ಷಕರ ಕೊರತೆಯೂ ಎದುರಾಗಬಹುದು.

Guest lectures 1

ಈ ಸಂಕಷ್ಟವು 6,000ಕ್ಕೂ ಹೆಚ್ಚು ಕುಟುಂಬಗಳ ಜೀವನವನ್ನು ಮಾತ್ರ ಪ್ರಭಾವಿಸುತ್ತದೆ ಎನ್ನುವುದಲ್ಲ; ಶಿಕ್ಷಣ ವ್ಯವಸ್ಥೆಯಲ್ಲಿರುವ ಮೂಲಭೂತ ತೊಂದರೆಗಳನ್ನು ತೋರಿಸುತ್ತದೆ. ಸರ್ಕಾರ ಮುಂಚೆಯೇ ಶಾಶ್ವತ ನಿಯಮಾವಳಿ ರಚಿಸಿದ್ದರೆ, ಇಂತಹ ಸಮಸ್ಯೆಗಳು ಉಂಟಾಗುತ್ತಿರಲಿಲ್ಲ. ಮುಂದೆ ಅತಿಥಿ ಉಪನ್ಯಾಸಕರು ಮತ್ತೆ ಕೋರ್ಟ್‌ಗಳನ್ನು ಮೊರೆಹೋಗುವ ಸಾಧ್ಯತೆ ಇದೆ, ಅಥವಾ ಸರ್ಕಾರ ಮಾನವೀಯ ದೃಷ್ಟಿಯಿಂದ ಕೆಲವು ಪರಿಹಾರಗಳನ್ನು ನೀಡಬಹುದು. ಆದರೆ ಯುಜಿಸಿ ನಿಯಮಗಳು ಜಾರಿಯಲ್ಲಿರುವ ಮಟ್ಟಿಗೆ, ಈ ಹೋರಾಟ ಇನ್ನೂ ಮುಂದುವರಿಯಲಿದೆ ಎಂಬುದು ನಿಶ್ಚಿತ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಮಹತ್ವದ್ದೇ ಸರಿ, ಆದರೆ ದಶಕಗಳಿಂದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಿದ ಅನುಭವಿ ಶಿಕ್ಷಕರನ್ನು ಕಡೆಗಣಿಸುವುದೂ ಸರಿಯಲ್ಲ.

ರಾಜ್ಯಾದ್ಯಂತ ಹೋರಾಟ: ಹನುಮಂತಗೌಡ ಕಲ್ಮನಿ

ಸರ್ಕಾರದ ನಿರ್ಧಾರದ ಬಗ್ಗೆ ಈದಿನ.ಕಾಂ ನೊಂದಿಗೆ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಗೌಡ ಕಲ್ಮನಿ, “ಯುಜಿಸಿ ನಿಯಮದಲ್ಲಿರುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಅತಿಥಿ ಉಪನ್ಯಾಸಕರನ್ನು ಮಾತ್ರ ನೇಮಿಸಿಕೊಳ್ಳಬೇಕೆಂದು ಬೇಧ ಮಾಡದೆ ಎಲ್ಲರನ್ನು ಉಪನ್ಯಾಸಕ್ಕೆ ಅವಕಾಶ ನೀಡಬೇಕು.  ಯುಜಿಸಿ ಪರೀಕ್ಷೆ ಅಥವಾ ಎನ್‌ಇಟಿ ಅಥವಾ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಉತ್ತೀರ್ಣರಾದವರನ್ನು  ಮಾತ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಪರಿಗಣಿಸದೆ, ಎನ್‌ಇಟಿ ಅಥವಾ ಕೆ- ಸೆಟ್‌ ಪರೀಕ್ಷೆಯ ಅರ್ಹರಲ್ಲದವರನ್ನು  ಅತಿಥಿ ಉಪನ್ಯಾಸಕ ಹುದ್ದೆಗೆ ಪರಿಗಣಿಸಬೇಕು. 15- 20 ವರ್ಷ ಸೇವೆ ಸಲ್ಲಿಸಿದವರನ್ನು ಕೈಬಿಡುವ ಮನೋಭಾವ ಸರಿಯಲ್ಲ. ಸರ್ಕಾರವೇ ನಮ್ಮ ಬಗ್ಗೆ ಆಸಕ್ತಿ ತೋರಿಸಬೇಕು. ಸರ್ಕಾರದ ಈ ನಿರ್ಧಾರದಿಂದ ಆರೂವರೆ ಸಾವಿರ ಉಪನ್ಯಾಸಕರಿಗೆ ತೊಂದರೆಯಾಗಿದೆ. ಸಾವಿರಾರು ಕುಟುಂಬ ಬೀದಿಗೆ ಬಂದಿರುವ ಕಾರಣ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಉದ್ಯೋಗ ಕಳೆದುಕೊಂಡ ಎಲ್ಲರೂ ಕುಟುಂಬ ಸಮೇತ ಹೋರಾಟ ನಡೆಸುತ್ತೇವೆ. ಕಾನೂನು ತಿದ್ದುಪಡಿಗೆ ಆಗ್ರಹಿಸುತ್ತೇವೆ. ಅಲ್ಲದೆ ಇದಕ್ಕೆ ಇದಕ್ಕಾಗಿ ಸರ್ಕಾರ ಒಂದು ಸುಗ್ರೀವಾಜ್ಞೆ ಹೊರಡಿಸಬೇಕು. ಸದ್ಯ ಗದಗದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಮುಂದೆ ಬೆಳಗಾವಿಗೆ ತೆರಳಲಿದ್ದೇವೆ. ಉನ್ನತ ಶಿಕ್ಷಣ ಇಲಾಖೆ ದಿನಕೊಂದು ದ್ವಂದ್ವ ನಿಲುವು ನೀಡುತ್ತಿದೆ. ಇದಲ್ಲವನ್ನು ಸರಿಪಡಿಸಬೇಕೆಂದು ಆಗ್ರಹಿಸುತ್ತೇವೆ” ಎಂದು ಹೇಳಿದರು.  

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...