ನಿಯಂತ್ರಣವಿಲ್ಲದ AI ಬೆಳವಣಿಗೆ ಅಪಾಯಕ್ಕೆ ದಾರಿ: ಮೈಕ್ರೋಸಾಫ್ಟ್‌ AI ಸಿಇಒ ಎಚ್ಚರಿಕೆ!

Date:

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅತಿವೇಗದ ಬೆಳವಣಿಗೆಯ ನಡುವೆ, ಉದ್ಯಮವೇ ತಪ್ಪು ದಿಕ್ಕಿನತ್ತ ಸಾಗುತ್ತಿರುವ ಅಪಾಯ ಎದುರಾಗಿದೆ ಎಂದು ಮೈಕ್ರೋಸಾಫ್ಟ್ AI ಸಿಇಒ ಮುಸ್ತಫಾ ಸುಲೈಮಾನ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸೂಪರ್ ಇಂಟೆಲಿಜೆನ್ಸ್ (Superintelligence) ಸಾಧಿಸುವ ಪೈಪೋಟಿಗೆ ಬಿದ್ದಿರುವ ಕಂಪನಿಗಳು ನಿಯಂತ್ರಣ (Containment) ಮತ್ತು ಜೋಡಣೆ (Alignment) ಎಂಬ ಎರಡು ಮೂಲಭೂತ ಅಂಶಗಳನ್ನೇ ಗೊಂದಲಗೊಳಿಸುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

ಇತ್ತೀಚೆಗೆ ಸುಲೈಮಾನ್‌ ತಮ್ಮ X ಖಾತೆಯಲ್ಲಿ ಹೀಗೊಂದು ಪೋಸ್ಟ್‌ ಹಂಚಿಕೊಂಡಿದ್ದಾರೆ..

“ನೀವು ನಿಯಂತ್ರಿಸಲು ಸಾಧ್ಯವಿಲ್ಲದ ಯಾವುದಕ್ಕೂ ದಾರಿ ತೋರಿಸಲು ಸಾಧ್ಯವಿಲ್ಲ” ಎಂದು ನೇರವಾಗಿಯೇ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“AI ಮೇಲೆ ಮೊದಲು ನಿಯಂತ್ರಣ ಇರಬೇಕು. ಇಲ್ಲದಿದ್ದರೆ, ಸರಿಯಾದ ಜೋಡಣೆ (Alignment) ಎಂಬುದು AI ಯನ್ನು ‘ದಯವಿಟ್ಟು ಹಾನಿ ಮಾಡಬೇಡ’ ಎಂದು ಕೇಳಿಕೊಳ್ಳುವಂತಾಗುತ್ತದೆ. ಅಂದರೆ, AIಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ತರಬೇತುಗೊಳಿಸುವ ಮೊದಲು, ಅದು ತಪ್ಪು ಮಾಡಿದಾಗ ಕೂಡಲೇ ಅದನ್ನು ತಡೆಯುವ ಸಾಮರ್ಥ್ಯ ನಮ್ಮ ಕೈಯಲ್ಲಿ ಇರಲೇಬೇಕು ಎಂಬುದು ಅವರ ವಾದ.

AI ಉದ್ಯಮದಲ್ಲಿ ಸಾಮಾನ್ಯವಾಗಿ containment ಮತ್ತು alignment ಎರಡನ್ನೂ ಒಂದೇ ಎಂಬಂತೆ ನೋಡಲಾಗುತ್ತಿದೆ. ಆದರೆ ಇವು ಎರಡು ಸಂಪೂರ್ಣ ವಿಭಿನ್ನ ತಾಂತ್ರಿಕ ಹಾಗೂ ತಾತ್ವಿಕ ಸವಾಲುಗಳಾಗಿವೆ ಎಂದು ಸುಲೈಮಾನ್ ವಿವರಿಸುತ್ತಾರೆ.

  • Containment (ನಿಯಂತ್ರಣ) ಎಂದರೆ: AIನ ಕಾರ್ಯಕ್ಷೇತ್ರ, ಸಾಮರ್ಥ್ಯ ಮತ್ತು ಸ್ವಾಯತ್ತತೆಯನ್ನು ನಿರ್ದಿಷ್ಟ ಗಡಿಗಳೊಳಗೆ ಕಟ್ಟಿ ಹಾಕುವುದು. ಅಂದರೆ, ಅದು ಏನು ಮಾಡಬಹುದು, ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ನಿಯಂತ್ರಿಸುವುದು.
  • Alignment (ಜೋಡಣೆ) ಎಂದರೆ: AI ಮಾನವಕೂಲದ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸುವಂತೆ ಮಾಡುವುದು.

ಈ ಎರಡರಲ್ಲೂ, ನಿಯಂತ್ರಣವಿಲ್ಲದೆ ಅಲೈನ್‌ಮೆಂಟ್‌ಗಾಗಿ ಮಾತ್ರ ಪ್ರಯತ್ನಿಸುವುದು “ಕುದುರೆಯ ಮುಂದೆ ಗಾಡಿ ಕಟ್ಟಿದಂತೆ” ಮೊದಲು AI ಯನ್ನು ತಡೆಯುವ ಸಾಮರ್ಥ್ಯ ಇರಬೇಕು; ನಂತರವೇ ಅದರ ಉದ್ದೇಶಗಳ ಬಗ್ಗೆ ಮಾತನಾಡಲು ಅರ್ಥವಿದೆ ಎಂಬುದು ಅವರ ನಿಲುವು.

AI ಉದ್ಯಮದ ಕೆಲವೊಂದು ಕಂಪನಿಗಳು ಅತಿಯಾದ ಸ್ವಾಯತ್ತ, ಮಿತಿ ಇಲ್ಲದ ವ್ಯವಸ್ಥೆಗಳತ್ತ ಧಾವಿಸುತ್ತಿರುವುದನ್ನು ಸುಲೈಮಾನ್ ಅಪಾಯಕರ ಎಂದು ನೋಡುತ್ತಾರೆ. ಇದೇ ಹಿನ್ನೆಲೆಗಳಲ್ಲಿ, ಮೈಕ್ರೋಸಾಫ್ಟ್ ತನ್ನನ್ನು ಇತರ ಕಂಪನಿಗಳಿಗಿಂತ ವಿಭಿನ್ನ ಮಾರ್ಗದಲ್ಲಿ ನಿಲ್ಲಿಸುತ್ತಿದೆ ಎಂದು ಹೇಳಿಕೊಳ್ಳುತ್ತಾರೆ.

image 2026 01 11T190229.747

ಮೈಕ್ರೋಸಾಫ್ಟ್ AI ಬ್ಲಾಗ್‌ನಲ್ಲಿ ಪ್ರಕಟಿಸಿದ “Towards Humanist Superintelligence” ಎಂಬ ತಮ್ಮ ಪ್ರಬಂಧದಲ್ಲಿ, ಅವರು ಮಾನವ ನಿಯಂತ್ರಣಕ್ಕೆ ಆದ್ಯತೆ ನೀಡುವ AI ದೃಷ್ಠಿಕೋನವನ್ನು ವಿವರಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಬ್ಲೂಂಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ, ನಿಯಂತ್ರಣ ಮತ್ತು ಅಲೈನ್‌ಮೆಂಟ್ ಯಾವ ಕಂಪನಿಯೂ ದಾಟಬಾರದ ʼರೆಡ್ ಲೈನ್ʼಗಳು ಎಂದು ಅವರು ಸ್ಪಷ್ಟಪಡಿಸಿದ್ದರು. ಇದು ಪ್ರಸ್ತುತ AI ಉದ್ಯಮದಲ್ಲಿ “ಹೊಸ ಮತ್ತು ಅಪರೂಪದ ನಿಲುವು” ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂಬುದಾಗಿ TOI ವರದಿ ಮಾಡಿದೆ.

ಸುಲೈಮಾನ್ ಮುಂದಿಡುವ ಪರ್ಯಾಯ ದೃಷ್ಟಿಕೋನವನ್ನು ಅವರು Humanist Superintelligence ಎಂದು ಕರೆಯುತ್ತಾರೆ. ಇದು ಸಾಮಾನ್ಯ ಉದ್ದೇಶದ ಕೃತಕ ಸಾಮಾನ್ಯ ಬುದ್ಧಿಮತ್ತೆ (AGI) ಕಡೆಗೆ ಹೋಗುವುದಕ್ಕಿಂತ, ನಿರ್ದಿಷ್ಟ ಕ್ಷೇತ್ರಗಳಲ್ಲಿ ಅತ್ಯಂತ ಶಕ್ತಿಶಾಲಿ AI ಉಪಯೋಗಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸಿದೆ.

ಮೈಕ್ರೋಸಾಫ್ಟ್ AI ನ ದೃಷ್ಟಿಕೋನದಲ್ಲಿ ವೈದ್ಯಕೀಯ ಮತ್ತು ಶುದ್ಧ ಶಕ್ತಿ (Clean Energy) ಕ್ಷೇತ್ರಗಳು ಪ್ರಮುಖವಾಗಿವೆ. ಇತ್ತೀಚೆಗೆ, New England Journal of Medicine ಪ್ರಕಟಿಸುವ ಅತ್ಯಂತ ಕಠಿಣ ವೈದ್ಯಕೀಯ ಪ್ರಕರಣಗಳ ಆಧಾರದ ಮೇಲೆ ನಡೆಸಿದ ಪರೀಕ್ಷೆಗಳಲ್ಲಿ, ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ AI ವ್ಯವಸ್ಥೆ ಶೇ.85 ರಷ್ಟು ಶುದ್ಧತೆಯನ್ನು ಸಾಧಿಸಿದೆ. ಅದೇ ಪರೀಕ್ಷೆಯಲ್ಲಿ ಮಾನವ ವೈದ್ಯರ ಸರಾಸರಿ ಸಾಧನೆ ಕೇವಲ ಶೇ.20 ಮಾತ್ರವಾಗಿತ್ತು.

ಇದನ್ನೂ ಓದಿ: ಮಾನವ ಕಳ್ಳಸಾಗಣೆ ವಿರುದ್ಧ ಸೆಣಸಲು ಜಾಗೃತಿಯೇ ಅಸ್ತ್ರ!

ಮಾನವನೇ ಚಾಲಕ ಸ್ಥಾನದಲ್ಲಿ ಇರಬೇಕು

ಗೂಗಲ್ ಡೀಪ್‌ಮೈಂಡ್‌ನ ಸಹಸ್ಥಾಪಕರಾಗಿದ್ದ ಸುಲೈಮಾನ್, ಸುಮಾರು 18 ತಿಂಗಳ ಹಿಂದೆ ಮೈಕ್ರೋಸಾಫ್ಟ್‌ಗೆ ಸೇರಿದ್ದರು. ಈಗ OpenAI ಜೊತೆಗಿನ ಪರಿಷ್ಕೃತ ಒಪ್ಪಂದದ ನಂತರ, ಮೈಕ್ರೋಸಾಫ್ಟ್ ಸ್ವತಂತ್ರವಾಗಿ AI ಅಭಿವೃದ್ಧಿ ನಡೆಸಲು ಅವಕಾಶ ಪಡೆದಿದೆ. ಈ ಹಿನ್ನಲೆಯಲ್ಲಿ, ಸುಲೈಮಾನ್ “ಲೋಕದಲ್ಲೇ ಅತ್ಯುತ್ತಮ ಸೂಪರ್ ಇಂಟೆಲಿಜೆನ್ಸ್ ಸಂಶೋಧನಾ ತಂಡ”ವನ್ನು ರೂಪಿಸುತ್ತಿರುವುದಾಗಿ ಹೇಳಿದ್ದಾರೆ. ಈ ತಂಡದ ಮೂಲ ಉದ್ದೇಶ ಒಂದೇ, AI ಎಷ್ಟು ಬುದ್ಧಿವಂತವಾಗಿದ್ರೂ, ಚಾಲಕ ಸ್ಥಾನದಲ್ಲಿ ಮಾನವನೇ ಇರಬೇಕು ಎಂಬುದು.

AI ಭವಿಷ್ಯದ ಕುರಿತ ಚರ್ಚೆಯಲ್ಲಿ, ʼಏನು ಮಾಡಬಹುದುʼ ಎಂಬ ಉತ್ಸಾಹಕ್ಕಿಂತ, ʼಏನು ಮಾಡಬಾರದುʼ ಎಂಬ ಜವಾಬ್ದಾರಿ ಮುಖ್ಯ ಎಂದು ಮುಸ್ತಫಾ ಸುಲೈಮಾನ್ ಅವರ ಈ ಎಚ್ಚರಿಕೆ, ಕೃತಕ ಬುದ್ಧಿಮತ್ತೆ ಉದ್ಯಮದ ದಿಕ್ಕನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಅಗತ್ಯತೆಯನ್ನು ಒತ್ತಿ ಹೇಳಿದೆ.

ಕೃಪೆ: TOI

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...