ಕರ್ನಾಟಕ ರಾಜ್ಯ ಯುವ ಆಯೋಗವನ್ನು ಸ್ಥಾಪಿಸಬೇಕು. ಅದಕ್ಕಾಗಿ, ಯುವ ಆಯೋಗದ ಸ್ಥಾಪನೆಗೆ ಶುಕ್ರವಾರದಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಬೇಕು ಎಂದು ‘ರಾಜ್ಯವ್ಯಾಪಿ ಯುವ ಸಂಘಟನೆಗಳ ಒಕ್ಕೂಟ’ ಆಗ್ರಹಿಸಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಯುವ ಮುಖಂಡರು ‘ಯುವ ಆಯೋಗ’ದ ರಚನೆಗಾಗಿ ಸರ್ಕಾಋವನ್ನು ಒತ್ತಾಯಿಸಿದ್ದಾರೆ. ರಾಜ್ಯ ಯುವ ಆಯೋಗದ ಸ್ಥಾಪನೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
“ನಿರ್ಣಾಯಕ ಹೆಜ್ಜೆ ಇಡುವ ಸಮಯ ಬಂದಿದೆ. ಕರ್ನಾಟಕದ ಯುವಜನತೆ ಇಂದು ಒಂದು ಮಹತ್ವದ ತಿರುವಿನಲ್ಲಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ಯುವಜನರು ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಪ್ರತಿನಿಧಿತ್ವದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಜನರ ಸಮಸ್ಯೆಗಳಿಗೆ ಸಮಗ್ರ ಹಾಗೂ ವ್ಯವಸ್ಥಾತ್ಮಕ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪನೆ ಅತ್ಯಾವಶ್ಯಕವಾಗಿದೆ” ಎಂದು ಒಕ್ಕೂಟ ಹೇಳಿದೆ.
“ಕರ್ನಾಟಕದಲ್ಲಿ ಯುವಜನ ಆಯೋಗ ಸ್ಥಾಪಿಸಬೇಕೆಂದು 2018ರಿಂದಲೂ ಅನೇಕ ಸಂಘ ಸಂಸ್ಥೆಗಳು ಸಂಘಟನೆಗಳು ಬೇಡಿಕೆ ಇಟ್ಟಿವೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವ ಆಯೋಗ ಸ್ಥಾಪಿಸುವ ಭರವಸೆ ನೀಡಿತ್ತು. ಆದರೆ, ಇನ್ನೂ ಆ ಭರವಸೆ ಈಡೇರದಿರುವುದು ಯುವ ಸಮುದಾಯದಲ್ಲಿ ನಿರಾಶೆಯನ್ನು ಉಂಟುಮಾಡಿದೆ” ಎಂದು ಒಕ್ಕೂಟದ ಮುಖಂಡರು ಹೇಳಿದ್ದಾರೆ.
“2 ಕೋಟಿಗೂ ಅಧಿಕ ಯುವಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಯುವಜನ ಹಕ್ಕುಗಳ ರಕ್ಷಣೆಗಾಗಿ ಸ್ವಾಯತ್ತ ವೇದಿಕೆ ಇಲ್ಲದಿರುವುದು ಆಡಳಿತಾತ್ಮಕ ಶೂನ್ಯವಾಗಿದೆ ಯುವಜನ ಹಕ್ಕುಗಳ ರಕ್ಷಣೆ,ದೂರುಗಳ ಪಾರದರ್ಶಕ ಪರಿಹಾರ ಶಿಕ್ಷಣ ಮತ್ತು ಉದ್ಯಮನೀತಿಗಳ ಶಿಫಾರಸ್ಸುಮಾನಸಿಕ ಆರೋಗ್ಯ ರಕ್ಷಣೆ,ಮಾದಕವಸ್ತು ವಿರೋದಿಕಾರ್ಯಯೋಜನೆ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮಗಳ ಅಭಿವೃದ್ಧಿಗೆ ಯುವ ಆಯೋಗದ ಅಗತ್ಯತೆವಿದೆ” ಎಂದು ಹೇಳಿವೆ.
ಸಭೆಯಲ್ಲಿ ಮೂರ್ತಿ ಭೀಮರಾವ್ ಡಾ.ನಸೀಮ್ ಅಹ್ಮದ್ ಸೋಲಿಡಾರಿಟಿ ಯೂತ್ ಮೂಮೆಂಟ್, ಅಶ್ಫಾಕ್ ಉಸ್ತಾದ್ ಸೆರಾ, ಸೈಫ್ – ಯುವ ಜನಾಧಿಕಾರ, ಜನಾರ್ಧನ ಕೆಸರಗದ್ದೆ – ಸಾಮಾಜಿಕ ಕಾರ್ಯಕರ್ತರು, ಅರಾತ್ರಿಕ – ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್, ಡಾ.ಹಕೀಮ್ – ಸಾಮಾಜಿಕ ಕಾರ್ಯಕರ್ತರು, ಮುಹಮ್ಮದ್ ಹಯ್ಯಾನ್ ಸುಹೈಲ್ ಮಸೂಲ್ದಾರ್ -ಕೆಎಸ್ ಡಬ್ಲ್ಯು ಎ ಮುಹಮ್ಮದ್ ಪೀರ್ – ಎಸ್ ಐಒ ಮಾಝ್ ಸಲ್ಮಾನ್ ಮನಿಯಾರ್ – ಸೋಲಿಡಾರಿಟಿ ಯೂತ್ ಮೂವ್ಮೆಂಟ್, ಸುಹೇಲ್ ಅಹ್ಮದ್ ನಸೀರುದ್ದೀನ್ ಮುಹಮ್ಮದ್ ಇಸ್ಮಾಯಿಲ್ – ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ, ಝಬಿ ಅಲಿ ಅಸಾದುಲ್ಲಾ ಖಾನ್ ಝಕಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.




