ಕೋಲಾರ: ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಲು ಅವಧಿಯನ್ನು ವಿಸ್ತರಿಸುವಂತೆ ಆಗ್ನೇಯ ಪದವೀಧರರ ಕ್ಷೇತ್ರದ ಎನ್.ಡಿ.ಎ ಮೈತ್ರಿ ಕೂಟದ ಆಕಾಂಕ್ಷಿ ಹಾಗೂ ಜೆಡಿಯು ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ ಕೆ ನಾಗರಾಜ್ ಪ್ರಾದೇಶಿಕ ಚುನಾವಣಾ ಆಯುಕ್ತರನ್ನು ಒತ್ತಾಯಿಸಿದ್ದಾರೆ,
ಈ ಕುರಿತು ಪತ್ರಿಕ ಹೇಳಿಕೆ ಮೂಲಕ ಒತ್ತಾಯಿಸಿದ ಅವರು ಮುಂಬರುವ 2026ರ ಜೂನ್ ನಲ್ಲಿ ನಡೆಯಲಿರುವ ಆಗ್ನೇಯ ವಿಧಾನಪರಿಷತ್ ಗ ಚುನಾವಣೆ ನಡೆಯುವ ಸಲುವಾಗಿ ಮತದಾರ ಪಟ್ಟಿಯಲ್ಲಿ ಅರ್ಹ ಪದವೀಧರರು ಹಾಗೂ ಶಿಕ್ಷಕರು ನೋಂದಣಿ ಮಾಡಿಸಲು ಕೊನೆಯ ದಿನಾಂಕ ನವೆಂಬರ್ 6 ಮುಗಿದಿದ್ದು ಬಹುತೇಕ ಪದವೀಧರರಿಗೆ ಸರಿಯಾದ ಸಮಯ ಮತ್ತು ಮಾಹಿತಿ ಕೊರತೆಯಿಂದ ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ ನೋಂದಣಿ ಅವಧಿಯನ್ನು ವಿಸ್ತರಿಸಿ ಎಲ್ಲಾ ಅರ್ಹ ಪದವೀಧರರಿಗೆ ಹಾಗೂ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕೆಂದು ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ…? ನ. 1ರಿಂದ ಡಿ.15 ರವರೆಗೆ ರಾಜ್ಯದಾದ್ಯಾಂತ ಸಿಪಿಎಂ ರಾಜಕೀಯ ಪ್ರಚಾರಾಂದೋಲ
ಪದವೀಧರ ಕ್ಷೇತ್ರದ ಮತದಾರರರ ಪಟ್ಟಿಯನ್ನು ಪ್ರತಿಯೊಂದು ಚುನಾವಣೆಯಲ್ಲಿ ಸಹ ಹೊಸದಾಗಿ ಪಟ್ಟಿ ತಯಾರಿಸಬೇಕಾಗಿದ್ದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರರ ಪಟ್ಟಿಯಲ್ಲಿರುವ ಎಲ್ಲಾ ಪದವೀಧರರು ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸ ಸಮಯ ಬೇಕಾಗಿದೆ ಇನ್ನೂ ಎರಡು ಬಾರಿ ಚುನಾವಣೆಗೆ ಸಂಬಂಧಿಸಿದಂತೆ ನೋಟಿಫಿಕೇಷನ್ ಹೊರಡಿಸಲಿದ್ದು ಪ್ರತಿಯೊಬ್ಬ ಪದವೀಧರರ ಮತದಾರರರು ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಲು ಅವಧಿ ವಿಸ್ತರಿಸಿ ಅನುಕೂಲವಾಗುವಂತೆ ಮಾಡಬೇಕು ಎಂದು ಡಾ.ಕೆ ನಾಗರಾಜ್ ಮನವಿ ಮಾಡಿದ್ದಾರೆ.





