ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ನೀಡುವ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ 8 ಗ್ರಾಮಪಂಚಾಯಿತಿಗಳಲ್ಲಿ ಚಿಕ್ಕಬಳ್ಳಾಪುರ ತಾಲ್ಕೂಕು ಕುಪ್ಪಹಳ್ಳಿ ಗ್ರಾಮಪಂಚಾಯಿತಿ ಎರಡನೇ ಬಾರಿಗೆ ಗಾಂಧಿ ಪುರಸ್ಕಾರ ಪಡೆದು ಸೈ ಎನಿಸಿಕೊಂಡಿದೆ. ಮೊದಲಿಂದಲೂ ಸ್ವಚ್ಚ ಭಾರತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನ ಪಡೆದ ಕುಪ್ಪಹಳ್ಳಿ ಗ್ರಾಮಪಂಚಾಯಿತಿ ಈ ಭಾರಿ ಘೋಷಣೆ ಮಾಡಿದ ಪ್ರಶಸ್ತಿಯಲ್ಲೂ ತನ್ನ ಹೆಸರನ್ನ ಉಳಿಸಿಕೊಂಡು ಬಂದಿದೆ.
ಈ ಭಾರಿ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡ ಕುಪ್ಪಳ್ಳಿ ಪಂಚಾಯಿತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿಯೇ ಅತ್ಯಂತ ಶ್ರೀಮಂತ ಪಂಚಾಯಿತಿ ಎನಿಸಿಕೊಂಡಿರುವ ಕುಪ್ಪಹಳ್ಳಿ ಗ್ರಾಮಪಂಚಾಯಿತಿ ಈ ಭಾರಿಯೂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ಪ್ರಧಾನ ಮಾಡಿದ ಗಾಂಧಿ ಪುರಸ್ಕಾರ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ 8 ತಾಲ್ಲೂಕುಗಳಲ್ಲಿಯೂ ತಲಾ ಒಂದೊಂದು ಪಂಚಾಯ್ತಿ ಆಯ್ಕೆಯಾಗಿದ್ದು ಚಿಕ್ಕಬಳ್ಳಾಪುರ ತಾಲ್ಲೂಕು ಕುಪ್ಪಹಳ್ಳಿ ಪಂಚಾಯಿತಿಗೆ ಪ್ರಸಕ್ತ ಸಾಲಿಗೆ ಭಾಜನವಾಗಿದೆ.
2020-21 ಸಾಲಿನಲ್ಲಿಯೂ ಗಾಂಧಿ ಪುರಸ್ಕಾರವನ್ನ ಪಡೆದುಕೊಂಡಿದ್ದ ಕುಪ್ಪಹಳ್ಳಿ ಪಂಚಾಯಿತಿ ಅದಕ್ಕೂ ಮೊದಲು ಜಿಲ್ಲಾಡಳಿತ ಮತ್ತು ಪಂಚಾಯತ್ ರಾಜ್ ಹಾಗೂ ಕೇಂದ್ರ ಸರ್ಕಾರಗಳು ನೀಡಿದ ಸ್ವಚ್ಚ ಭಾರತ್ ಯೋಜನೆಗಳಲ್ಲೂ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದ್ದು ಶೌಚಾಲಯ ಮುಕ್ತ ಪಂಚಾಯಿತಿ ಪ್ರಶಸ್ತಿಯನ್ನ 2015-16 ರಲ್ಲೆ ಪಡೆದುಕೊಂಡು ಇಡಿ ತಾಲ್ಲೂಕಿಗೆ ಮಾದರಿ ಪಂಚಾಯಿತಿ ಎನಿಸಿಕೊಂಡಿತ್ತು.
ಇತ್ತೀಚೆಗೆ ಹಳೇ ಕಟ್ಟಡದಿಂದ ನೂತನ ಕಟ್ಟಡಕ್ಕೆ ತಮ್ಮ ಕಚೇರಿಯನ್ನ ವರ್ಗಾಯಿಸಿಕೊಂಡಿರುವ ಕುಪ್ಪಹಳ್ಳಿ ಪಂಚಾಯಿತಿ ಕಟ್ಟಡ ಸುಮಾರು ಒಂದೂವರೆ ಕೋಟಿ ವೆಚ್ಚ ಮೌಲ್ಯದ ಭವ್ಯವಾದ ಸುಂದರ ಕಟ್ಟಡಕ್ಕೆ ವರ್ಗಾವಣೆಯಾಗಿದೆ. ಇಡೀ ತಾಲ್ಲೂಕಿನಲ್ಲೆ ನಂಬರ್ ಒನ್ ಹೈಟೆಕ್ ಮಾದರಿ ಕಟ್ಟಡ ಹೊಂದಿರುವ ಕುಪ್ಪಹಳ್ಳಿ ಗ್ರಾಮಪಂಚಾಯಿತಿಯಿಂದ ಅತ್ಯತ್ತಮ ಸೇವೆ ಸಿಗುತ್ತಿದೆ ಆಯಾ ಕಾಲಕ್ಕೆ ಜನರ ಎಲ್ಲ ಅರ್ಜಿಗಳು ವಿಲೇವಾರಿಯಾಗುತ್ತಿದೆ ಎನ್ನುವ ಕಾರಣಕ್ಕೆ ಈ ಬಾರಿಯೂ ಗಾಂಧಿ ಪುರಸ್ಕಾರ ತನ್ನ ಮುಡಿಗೇರಿಸಿಕೊಂಡಿದೆ.
ಇದನ್ನು ಓದಿದ್ದೀರಾ..?ಮುಖ್ಯ ಶಿಕ್ಷಕಿ ಗೀತಾಗೆ ರಾಜ್ಯ ಮಟ್ಟದ ”ಅಪರ್ಣ ನಿರೂಪಣ ರತ್ನ” ಪ್ರಶಸ್ತಿ: ಅಭಿನಂದನೆ
ಇನ್ನು ಈ ಬಾರಿ ತಮ್ಮ ಪಂಚಾಯ್ತಿಗೆ ಸಿಕ್ಕಿರುವ ಗಾಂಧಿ ಪುರಸ್ಕಾರ ಪ್ರಶಸ್ತಿಯ ಗೌರವ ನಮ್ಮ ಅಧ್ಯಕ್ಷರಾದ ಕುಡುವತಿ ನಾರಾಯಣಸ್ವಾಮಿ ಹಾಗೂ ಪಂಚಾಯ್ತಿಯ ಎಲ್ಲ ಸದಸ್ಯರು ಕಚೇರಿ ಸಿಬ್ಬಂದಿ ವರ್ಗ ಮತ್ತು ನಮ್ಮ ಪಂಚಾಯತಿ ಕಟ್ಟಡ ಅಷ್ಟೋಂದು ಸುಂದರವಾಗಿ ಮೂಡಿ ಬರಲು ಸಹಕರಿಸಿದ ಎಲ್ಲರಿಗೂ ಸಲ್ಲುತ್ತದೆ ಪ್ರಶಸ್ತಿ ನಮಗೆ ಮುಂದಿನ ಕಾರ್ಯ ಚಟುವಟಿಕೆಗಳನ್ನ ಮತ್ತಷ್ಟು ಚುರುಕಾಗಿ ಮಾಡಿಕೊಂಡು ಹೋಗಲು ಸ್ಪೂರ್ತಿಯ ಸೆಲೆಯಾಗಿದೆ ಎಂದು ಅಭಿವೃದ್ದಿ ಅಧಿಕಾರಿ ಎಸ್. ಮೋಹನ್ ಕುಮಾರ್ ತಿಳಿಸಿದ್ದಾರೆ..
ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ
Date:
ಪೋಸ್ಟ್ ಹಂಚಿಕೊಳ್ಳಿ:




