ಎಲ್ಲಾ ಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಾಗ ಮಾತ್ರ ಹೆಚ್ಚಿನಗೌರವ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

Date:

ಬಾಗೇಪಲ್ಲಿ: ಪಂಚಾಯ್ತಿ ಚುನಾವಣೆಯಿಂದ ಪಾರ್ಲಿಮೆಂಟ್ ಚುನಾವಣೆವರೆಗಿನ ಎಲ್ಲಾ ಚುನಾವಣೆಗಳನ್ನು ಪಕ್ಷದ
ಮುಖಂಡರು ಹಾಗು ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಂಡು ಗೆಲುವನ್ನು ಪಡೆದುಕೊಂಡಾಗ ನಾವು ಬಲಿಷ್ಠರಾಗುವುದರ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಠು ಬಲಿಷ್ಠಗೊಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.

ಅವರು ಇಲ್ಲಿಗೆ ಸಮೀಪದ ಹೆದ್ದಾರಿ 44 ರಲ್ಲಿರುವ ಕೋಮಲ್ ಗಾರ್ಡನ್ ಹೋಟೆಲ್ ಸಂಸ್ಕೃತಿ ಸಭಾಂಗಣದಲ್ಲಿ
ಬಾಗೇಪಲ್ಲಿ ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ
ಪದವೀಧರರ ಕ್ಷೇತ್ರದ ಚುನಾವಣೆಯನ್ನು ಉದ್ದೇಶದಿಂದ ಪಕ್ಷದ ಮುಖಂಡರು ನಿಮ್ಮ ನಿಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿನ ಪದವೀದರರನ್ನು ನೊಂದಣೆ ಮಾಡುವುದರ ಮೂಲಕ ಕ್ಷೇತ್ರದಿಂದ ಕನಿಷ್ಠ 7 ಸಾವಿರಕ್ಕೂ ಹೆಚ್ಚಿನ ಪದವೀಧರರನ್ನು
ನೊಂದಣಿ ಮಾಡುವ ಗುರಿಯನ್ನು ತಲುಪಲೇಬೇಕು.

ನಡೆಯುವ ಎಲ್ಲಾ ಚುನಾವಣೆಗಳನ್ನು ನಾವು ಗೆದ್ದಾಗ ಮಾತ್ರ ನಮಗೆ ಹೆಚ್ಚಿನ ಗೌರವ. ಯಾವುದೇ ಚುನಾವಣೆಯನ್ನು ನಾವು ನಿರ್ಲಕ್ಷ್ಯ ಮಾಡಿದಾಗ ಜನರು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ. ಮುಂದೆ ಗ್ರಾಪಂ,ತಾಪಂ ಜಿಪಂ ಚುನಾವಣೆಗಳು ಶೀಘ್ರದಲ್ಲಿಯೇ ಬರಲಿದೆ ಅವುಗಳನ್ನು ನಾವು ಯಶಸ್ವಿಯಾಗಿ ಎದುರಿಸಿ ಗೆಲುವನ್ನು ಪಡೆದುಕೊಂಡು ಕಾಂಗ್ರೆಸ್ ಪಕ್ಷವನ್ನು
ಮತ್ತಷ್ಠು ಬಲಿಷ್ಠಗೊಳಿಸಬೇಕು. ಕಾಂಗ್ರೆಸ್ ಪಕ್ಷ ಮಾಡಿರುವ ಅನುಕೂಲ ಮತ್ತು ಸೇವೆಯನ್ನು ಯಾವ
ಪಕ್ಷದವರಿಂದಲೂ ಮಾಡಲು ಸಾಧ್ಯವಿಲ್ಲ. ಕಳೆದ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿದ್ದು ನಮಗೆ
ನಷ್ಠವೇ ಎಂಬುದನ್ನು ನಾವೆಲ್ಲವೂ ತಿಳಿಯಬೇಕು. ಬಾಗೇಪಲ್ಲಿ ಕ್ಷೇತ್ರದಿಂದ ಹೆಚ್ಚಿನ ಲೀಡ್ ಕೊಡಿಸಿದ ತೃಪ್ತಿ
ಬಿಟ್ಟರೆ ಎಂಪಿ ಸ್ಥಾನವನ್ನು ಕಳೆದು ಕೊಂಡಿದ್ದರಿಂದ ನಮಗೆ ನಷ್ಠ. ಇದನ್ನು ಪಕ್ಷದ ಮುಖಂಡರು ಮತ್ತು
ಕಾರ್ಯಕರ್ತರು ತಿಳಿದುಕೊಂಡು ಎಲ್ಲಾ ಚುನಾವಣೆಗಳನ್ನು ಗೆಲ್ಲುವುದರತ್ತ ಮುನ್ನುಗ್ಗಬೇಕು ಎಂದರು.


ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮಾತನಾಡಿ, ಇಡೀ ಭಾರತ ದೇಶದಲ್ಲಿಯೇ ವೋಟ್ ಚೋರಿ ಅಭಿಯಾನದಲ್ಲಿ
ಕರ್ನಾಟಕದ ಕಾಂಗ್ರೆಸ್ ಪಕ್ಷ ಮುಂಚೋಣಿಯಲ್ಲಿರುವುದು ಸಂತಸದ ವಿಚಾರ. 1.25 ಕೋಟಿ ಜನರು ಈಗಾಗಲೇ ಸಹಿ ಹಾಕಿದ್ದಾರೆ. ರಾಜ್ಯದ 224ಮತಕ್ಷೇತ್ರದ ಪ್ರತಿಯೊಂದು ಬೂತ್ ನಲ್ಲಿಯೂ ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಇದುಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಸಂದೇಶವನ್ನು ನೀಡಿದೆ. ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಪ್ರತಿ ವರ್ಷ 54 ಸಾವಿರ
ಕೋಟಿ ರೂಪಾಯಿಗಳನ್ನು ಪಂಚ ಗ್ಯಾರಂಟಿಗಳ ಮೂಲಕ ವೆಚ್ಚಮಾಡುತ್ತಿದೆ. ವಿಶೇಷವಾಗಿ ಮಹಿಳೆಯರು
ಸಂತಸ ಪಡುವಂತಹ ಯೋಜನೆಗಳನ್ನು ರಾಜ್ಯದ ಕಾಂಗ್ರಸ್ ಸರ್ಕಾರಿ ಜಾರಿಗೊಳಿಸಿದೆ. ಮುಂಬರುವ ಪದವೀಧರ
ಕ್ಷೇತ್ರದ ವಿಧಾನಸಭ ಚುನಾವಣೆಯಲ್ಲಿ ಎಲ್ಲಾ ಪದವೀಧರರನ್ನು ಗರಿಷ್ಠ ಸಂಖ್ಯೆಯಲ್ಲಿ ನೊಂದಣಿ ಮಾಡಿಸುವುದರ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಲಭ್ಯವಾಗುವಂತೆ ಮಾಡಬೇಕು ಎಂದರು.

ಎಐಸಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದ ಜನಮೆಚ್ಚಿದ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಮುಂಬರುವ ದಿನಗಳಲ್ಲಿ ನೂರಕ್ಕೆ ನೂರುರಷ್ಠು ಸಚಿವರಾಗುವುದು
ಖಚಿತ. ಬಿಜೆಪಿ ಪಕ್ಷ ದೇಶದಾದ್ಯಂತ ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳನ್ನು ತೆಗೆಯುವ ಕಾರ್ಯದಲ್ಲಿ ಮಗ್ನವಾಗಿದೆ. ನ.25 ರಿಂದ ಡಿ.10 ವರೆವಿಗೂ ಎಲ್ಲಾ ಪದವೀಧರರನ್ನು ನೊಂದಾಯಿಸುವ ಕಾರ್ಯದಲ್ಲಿ ಪಕ್ಷದ ಮುಖಂಡರು ಮುಂದಾಗಬೇಕು ಎಂದರು.

ಇದನ್ನು ಓದಿದ್ದೀರಾ..? ಆಗ್ನೇಯ ಪದವೀಧರರ ಕ್ಷೇತ್ರ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪೂರ್ವಭಾವಿ ಸಭೆ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ನರೇಂದ್ರ, ಆದಿರೆಡ್ಡಿ, ಪಿ.ಆರ್.ಚಲಂ. ಯುವ ಕಾಂಗ್ರೆಸ್ ಕಾರ್ಯದರ್ಶಿ ಹೆಚ್ಚು ಸೇರಿದಂತೆ ನೂರಾರು ಸಂಖ್ಯೆಯ ಕಾಂಗ್ರೆಸ್ ಮುಖಂಡರು
ಭಾಗವಹಿಸಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...