ಒಂದುವರೆ ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬಂದೆ ಬರುತ್ತೆ : ಕೆ.ಹೆಚ್.ಮುನಿಯಪ್ಪ

Date:

ಕೋಲಾರ: ರಾಜ್ಯದ ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಡಾ. ಪರಮಶಿವಯ್ಯನವರ ಮಹಾತ್ವಕಾಂಕ್ಷಿ ಯೋಜನೆಯ ಎತ್ತಿನ ಹೊಳೆ ಯೋಜನೆಯು ನೀರು ಇನ್ನು ಒಂದೂವರೆ ವರ್ಷದಲ್ಲಿ ಜಿಲ್ಲೆಯ ಗಡಿ ಭಾಗವಾದ ನಂಗಲಿಗೆ ಹರಿಯಲಿದೆ ಎಂದು ರಾಜ್ಯ ಆಹಾರ ಮತ್ತು ನಾಗಾರೀಕ
ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ನಗರದ ಹಾರೋಹಳ್ಳಿಯಲ್ಲಿನ ತಮ್ಮ ಗೃಹಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿ ಎತ್ತಿನ ಹೊಳೆ ಯೋಜನೆಗೆ ಇದ್ದ ಅಡೆತಡೆಗಳನ್ನು ಮೀರಿ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದೆ ಸುಮಾರು ೨೨ ಟಿ.ಎಂ.ಸಿ. ನೀರು ಮಳೆಗಾಲದಲ್ಲಿ ಸಂಗ್ರಹವಾಗಲಿರುವ ನೀರುನ್ನು ಬಯಲು ಸೀಮೆ ಪ್ರದೇಶಗಳಿಗೆ ಹರಿಸುವ ಯೋಜನೆ ಇದೆ ಎಂದರು.

ಸಕಲೇಶ್ವರದಿದ ನೀರನ್ನು ಕೊರಟಗೆರೆ ಮತ್ತು ದೊಡ್ಡಬಳ್ಳಾಫುರದ ಸಾಸಲು ಹೋಬಳಿ ಬಳಿ ಶೇಖರಿಸಿ ನಂತರ ದೇವನಹಳ್ಳಿ ಸಮೀಪದ ಕುಂದಾಣದ ಮೂಲಕ ಪಂಪ್ ಮಾಡುವ ಮೂಲಕ ೩ ಮಾರ್ಗದ ಪೈಪ್‌ಗಳಲ್ಲಿ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ ಗೌರಿಬಿದನೂರು, ಹೊಸ ಕೋಟೆ ಕೆ.ಜಿ.ಎಫ್. ಸೇರಿದಂತೆ ಪೈಪುಗಳ ಮೂಲಕ ಗಡಿಭಾಗದವರೆಗೆ ನೀರನ್ನು ಹರಿಸಲಾಗುವುದು ಎಂದು ಹೇಳಿದರು.

ಎತ್ತಿನ ಹೊಳೆ ನೀರನ್ನು ಚಿಕ್ಕಬಳ್ಳಾಪುರದ ಹೆಚ್.ಎನ್.ವ್ಯಾಲಿ ಅಥವಾ ಕೆ.ಸಿ.ವ್ಯಾಲಿ ನೀರಿಗೆ ಸೇರ್ಪಡೆ ಮಾಡುವುದಿಲ್ಲ ಈ ನದಿ ನೀರನ್ನು ಕುಡಿಯುವ ನೀರಿನ ಸೌಲಭ್ಯಕ್ಕೆ ಮಾತ್ರ ಬಳಕೆ ಮಾಡಲಾಗುವುದು, ಇದರ ಜೂತೆಗೆ ಇನ್ನು
ಒಂದೂವರೆ ವರ್ಷದಲ್ಲಿ ಎತ್ತಿನ ಹೊಳೆ ನೀರು ಬರುವುದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಾಗಲಿದೆ. ಬಯಲು ಸೀಮೆ ಪ್ರದೇಶದ ಕೃಷಿ ಚಟುವಟಿಕೆಗೆ ಉತ್ತಮ ಕಾಲ ಬರಲಿದೆೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಸಚಿವರಾದ ಸೋಮಣ್ಣ ಮತ್ತು ನನ್ನ ನಡುವೆ ಉತ್ತಮ ಸಂಬಂಧವಿದೆ. ರೈಲ್ವೆ ಕೋಚ್ ಕಾರ್ಖಾನೆಯ ಯೋಜನೆಯನ್ನು ಕಾಲಕಾಲಕ್ಕೆ ನವೀಕರಣ ಮಾಡಲಾಗುತ್ತಿತ್ತು ಎಂದ ಅವರು ರೈಲ್ವೆ ಕೋಚ್ ಕಾರ್ಖಾನೆಗೆ ೧೨೦೦
ಎಕರೆ ಭೂಮಿಯನ್ನು ಕೋಲಾರ ಶ್ರೀನಿವಾಸಪುರ ನಡುವೆ ಜಾಗವನ್ನು ಗುರುತಿಸಲಾಗಿದೆ. ಈಗಾಗಲೇ ೭೦೦ ಎಕರೆ ಸರ್ಕಾರದ ಮತ್ತು ಇತರರ ಬಳಿ ಇದೆ ಉಳಿದ ಜಮೀನು ರೈತರಿಂದ ಖರೀದಿಸಿ ರೈಲ್ವೆ ಇಲಾಖೆಗೆ ನೀಡಲು ರಾಜ್ಯ ಸರ್ಕಾರ
ಸಿದ್ದವಿದೆ. ಇದು ಮುಖ್ಯ ಮಂತ್ರಿ ಸದಾನಂದಗೌಡರ ಆಡಳಿತದ ಅವಧಿಯಲ್ಲಿ ರೂಪಿಸಿದ್ದ ಯೋಜನೆಯಾಗಿದೆ. ಈ ಸಂಬಂಧವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರು ಸೇರಿದಂತೆ ಇತರೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಜನವರಿ ಕೊನೆ ವಾರ ಅಥವ ಫೆಬ್ರವರಿ ಮೊದಲ ವಾರದಲ್ಲಿ ಸಭೆ ಸೇರಿ ಈ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುವುದು ಇದರ ಜೂತೆಗೆ ರೈಲ್ವೆ ಮಾರ್ಗದ ೧೨ ಯೋಜನೆಗಳು ಇದ್ದು ಸಚಿವ ಸೋಮಣ್ಣನವರೊಂದಿಗೆ ಚರ್ಚಿಸುವುದಾಗಿ ವಿವರಿಸಿದರು.

ಇದನ್ನು ಓದಿದ್ದೀರಾ..? ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಲು ಬಲಗೈ ಜಾತಿಗಳ ಒಕ್ಕೂಟ ಆಗ್ರಹ

ಸುದ್ಧಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೇಸ್ ಮುಖಂಡ ಮುಳಬಾಗಿಲಿನ ರಾಮಪ್ರಸಾದ್, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಮುಖಂಡರಾದ ಪ್ರಸಾದ್ ಬಾಬು, ಜಯದೇವ್, ಸೀತಿ ಮುರಳಿ, ಮುರಳಿಗೌಡ, ನಾಗರಾಜ್, ಲಾಲ್ ಬಹುದ್ದೂರ್ ಶಾಸ್ತಿ, ಹಾರೋಹಳ್ಳಿ ರವಿ. ಖಲೀಲ್ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...