ಕೋಲಾರ: ತಾಲೂಕಿನ ಚಂಜಿಮಲೆ ಗ್ರಾಮದ ಸಿ.ವಿ.ನಾಗರಾಜ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಶಾಸಕ ಕೊತ್ತೂರು ಮಂಜುನಾಥ್ ಅವರು ೫೦ ಸಾವಿರ ರೂ.ಗಳನ್ನು ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಅವರ ಮುಖಾಂತರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂಜಿಮಲೆ ರಮೇಶ್ ಗ್ರಾಮದ ನಾಗರಾಜ್ಗೆ ಕಿಡ್ನಿ ಆಪರೇಷನ್ ಆಗಬೇಕಿದ್ದು ಶಾಸಕರು ಪ್ರಸ್ತುತ ೫೦ ಸಾವಿರ ರೂ ಧನಸಹಾಯ ಒದಗಿಸಿದ್ದು ರೋಗಿ ಡಿಸ್ಚಾರ್ಜ್ ಸಂದರ್ಭದಲ್ಲಿ ಮತ್ತೆ ೫೦ ಸಾವಿರ ರೂ. ಕೊಡಲಿದ್ದಾರೆಂದು ಹೇಳಿ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ಹಿಂತಿರುಗುವಂತೆ ಹಾರೈಸಿದರು.
ಇದನ್ನು ಓದಿದ್ದೀರಾ..? ಬೈಕ್ ರ್ಯಾಲಿ ಮೂಲಕ ನಾಳೆ ಕೋಲಾರ ಬಂದ್ ಗೆ ಪ್ರಗತಿಪರ ಸಂಘಟನೆಗಳಿಂದ ಕರೆ
ಈ ಸಂದರ್ಭದಲ್ಲಿಮುಖಂಡರಾದ ಎಂ.ವೆಂಕಟೇಶ್, ಬಿ.ದೇವರಾಜ್, ಗೋಪಾಲಕೃಷ್ಣ,ಬಿ.ರಾಜಪ್ಪ, ಪಂಚಾಯತಿ ಸದಸ್ಯ ದೇವರಾಜು, ಗೋಪಾಲ್, ಮುರಳಿ, ಮಂಜುನಾಥ್, ಸಂತೋಷ್, ಬಾಟಲ್ಶ್ರೀನಿವಾಸ್, ವಿಜಯಕುಮಾರ್, ಜಯರಾಂ ಇದ್ದರು.





