ಬೇತಮಂಗಲ: ಕರ್ನಾಟಕ ರಾಜ್ಯದಲ್ಲಿ 1 ಲಕ್ಷ ಕಿಲೋಮಿಟರ್ ರಸ್ತೆಗಳ ವ್ಯಾಪ್ತಿ ಇದ್ದು ರಾಜ್ಯದಲ್ಲಿ ಅನೇಕ ಬ್ರಿಡ್ಜ್ ಗಳು ರಸ್ತೆಗಳು ಇವೆ ಅವುಗಳಲ್ಲಿ ಶಿಥಿಲಗೊಂಡಿರುವ ಬ್ರಿಡ್ಜ್ಗಳ ನಿರ್ಮಾಣಕ್ಕೆ ಮತ್ತು ಅಗತ್ಯವಿರುವ ಕಡೆ ಬ್ರಿಡ್ಜ್ಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರವು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೋಳಿ ಹೇಳಿದರು.
ಕೋಲಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಲೋಕೋಪಯೋಗಿ ಇಲಾಖೆ ಸಂಯುಕ್ತಶ್ರಯದಲ್ಲಿ ನಲ್ಲೂರು ಮತ್ತು ನತ್ತ ಗ್ರಾಮಗಳ ನಡುವೆ ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮೀಸಿರುವ ಸೇತುವೆಗಳ ಉದ್ಘಾಟನಾ ಸಮಾರಂಭದಲ್ಲಿ ಸೇತುವೆಯನ್ನು ಉದ್ಘಾಟಿಸಿದ ಸಚಿವ ಸತೀಶ್ಜಾರಕಿಹೋಳಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಉತ್ತಮವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ನನ್ನ ಇಲಾಖೆವತಿಯಿಂದ ಸಾವಿರಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಈ ಭಾಗದ ಜನರು ಎದುರಿಸುತ್ತಿದ್ದ ಸಮಸ್ಯೆಯನ್ನು ಶಾಸಕಿ ರೂಪಕಲಾಶಶಿಧರ್ ಏಳೆ ಏಳೆಯಾಗಿ ನನ್ನ ಮುಂದೆ ವಿವರಿಸದ ಹಿನ್ನಲೆಯಲ್ಲಿ ಈ ಕಾಮಗಾರಿಗೆ 10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದೇ ಆದರೆ ನಾವು ಬಿಡುಗಡೆ ಮಾಡಿರುವ ಅನುದಾನದಲ್ಲಿ ಯಾವ ರೀತಿ ಬ್ರಿಡ್ಜ್ ನಿರ್ಮಾಣವಾಗಲಿದೆ ಎಂಬ ಆತಂಕವನ್ನು ನನ್ನನ್ನು ಕಾಡುತ್ತಿತ್ತು ಆದರೆ ಇಂದು ಸ್ಥಳಕ್ಕೆ ಬಂದು ನೋಡಿದಾಗ ನನಗೆ ತೃಪ್ತಿ ತಂದಿದೆ ಈ ಕ್ಷೇತ್ರದಲ್ಲಿ ಭಾಕಿ ಉಳಿದಿರುವ ಕಾಮಗಾರಿಗಳಿಗೆ ವಿಶೇಷ ಅನುದಾನವನ್ನು ಸಹ ಬಿಡುಗಡೆ ಮಾಡಲಾಗುವುದು ಸರ್ಮಪಕವಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ ಶಾಸಕಿ ರೂಪಕಲಾಶಶಿಧರ್ ಕ್ಷೇತ್ರದಲ್ಲಿ ಉತ್ತಮವಾದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ನಾನು ಸಂಸದ ಸಚಿವನಾಗಿದ್ದ ಸಂದರ್ಭದಲ್ಲಿ ಮಾರಿಕುಪ್ಪಂ ಕುಪ್ಪಂ ರೈಲ್ವೆ ಸಂರ್ಪಕ ಮಾರ್ಗಕ್ಕಾಗಿ ಅನುದಾನ ಬಿಡುಗಡೆಗೊಳಿಸಿದ್ದೇ ರೈಲ್ವೆ ಕೋಚ್ ಕಾರ್ಖಾನೆ ಪ್ರಾರಂಭಿಸಲು ಎಲ್ಲವನ್ನು ಸಿದ್ದಗೊಳಿಸಿದ್ದೇ ಆದ್ದರಿಂದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಸಂಸದ ಮಲ್ಲೇಶಬಾಬು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಶಾಸಕಿ ರೂಪಕಲಾಶಶಿಧರ್ ಮಾತನಾಡಿ ಕ್ಷೇತ್ರದಲ್ಲಿ ಸುರ್ವಣ ಅಕ್ಷರಗಳಲ್ಲಿ ಬರೆಯುವ ನಿಟ್ಟಿನಲ್ಲಿ ನಲ್ಲೂರು ಹಾಗೂ ನತ್ತ ಗ್ರಾಮಗಳ ನಡುವೆ ಇರುವ ಸಣ್ಣ ಬ್ರಿಡ್ಜ್ ನಿರ್ಮಾಣ ಮಾಡಲಾಗಿದ್ದು ಕಳೆದ 100 ವರ್ಷಗಳಿಂದ ಈ ಭಾಗದ ಜನರು ಮಳೆ ಬಂದರೆ ಬೇತಮಂಗಲ ಗ್ರಾಮಕ್ಕೆ ಬರಲು ಸುತ್ತುಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಹಿಂದಿನ ಯಾವ ಶಾಸಕರ ಕೈಯಲ್ಲಿ ಮಾಡಲಾಗದ ಕೆಲಸವನ್ನು ನಾನು ಲೋಕೋಪಯೋಗಿ ಸಚಿವರಾಗಿರುವ ಸತೀಶ್ಜಾರಕಿಹೋಳಿ ರವರ ಗಮನಕ್ಕೆ ತರುವ ನಿಟ್ಟಿನಲ್ಲಿ ಸಧನದಲ್ಲಿ ಮಾತನಾಡಿದ್ದೇ ಆದರೆ ಅವರು ಆಗ ಸರಿಯಾಗಿ ಸ್ಪಂದಿಸರಲಿಲ್ಲ ಆದ್ದರಿಂದ ಅವರನ್ನು ಖುದ್ದು ಭೇಟಿಯಾಗಿ ಬ್ರಿಡ್ಜ್ ಅವಶ್ಯಕತೆ ಇಷ್ಟು ಇದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಅವರ ಸರಳ ಸಜ್ಜನಿಕೆ ಯಾಗಿದ್ದಾರೆ ಇಂದಿಗೂ ಅವರು ಒಬ್ಬ ಗನ್ ಮ್ಯಾನ್ ಪಿಎ ಹೊಂದಿಲ್ಲ ಅಷ್ಟರಮಟ್ಟಿಗೆ ಸರಳತೆಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ನಮ್ಮ ತಂದೆ ಅಪಾರ ದೈವ ಭಕ್ತರಾಗಿದ್ದು ರಾತ್ರಿ ಮಲಗುವ ಮುನ್ನ ರಾಮಾಯಾಣ ಮಹಾಭಾರತವನ್ನು ಓದಿ ನಿದ್ರೆ ಮಾಡುವುದು ಅವರು ನನಗೆ ಜೀವನದ ಪಾಠವನ್ನು ಮತ್ತು ರಾಜಕೀಯವನ್ನು ಹೇಳಿಕೊಟ್ಟರು ರಾಜಕೀಯ ಕ್ಷೇತ್ರದಲ್ಲಿ ಬಡವರಿಗೆ ಸಹಾಯ ಮಾಡುವಂತೆ ನನಗೆ ಭೋದನೆ ಮಾಡಿದ್ದಾರೆ ಅದರಂತೆ ನಾನು ಮುಂದುವರೆಯುತ್ತಿದ್ದೇನೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವಗಳು ಮುಂದಿನ ಪೀಳಿಗೆಗೂ ತಲುಪಬೇಕು: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್
ಈ ವೇಳೆ ಬಂಗಾರಪೇಟೆ ಶಾಸಕ ಎಸ್,ಎನ್.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಮಾಜಿ ಕೋಲಾರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರರೆಡ್ಡಿ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ, ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದಬಾಬು, ಜಯದೇವ್, ಟಿ.ಗೋಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ್, ಬೇತಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀನುಕಾರ್ಥಿಕ್, ಶಂಕರ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ,ಸ ಸೊಸೈಟಿ ಅಧ್ಯಕ್ಷ ವೆಂಕಟಾಚಲಪತಿ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ್, ಕೆಪಿಸಿಸಿ ಸದಸ್ಯ ದುರ್ಗಪ್ರಸಾದ ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿ,ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ಮುನಿಸ್ವಾಮಿ ಇಇ ರಾಮಮೂರ್ತಿ, ಎಇಇ ರಾಜಶೇಖರ್, ಗುತ್ತಿಗೆದಾರ ವೆಂಕಟರಮಣ ಗೌಡ, ನಾರಾಯಣ ಗೌಡ ಹಾಗೂ ಇತರರು ಹಾಜರಿದ್ದರು .





