ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯ ವಲಯದಲ್ಲಿ ಸದ್ಯ ಮುಖ್ಯಮಂತ್ರಿಗಳ ಕುರ್ಚಿ ಬದಲಾವಣೆಯ ಚರ್ಚೆ ತಾರಕಕ್ಕೇರಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಹೆಸರು ಕೂಡ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುನ್ನೆಲೆಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಆದಿ ಜಾಂಬವ ಮಠದ ಶ್ರೀ ಕ್ಷಡಕ್ಷರಿ ಸ್ವಾಮೀಜಿ ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಲ್ಲಿಯವರೆಗೆ ದಲಿತರಿಗೆ ಸಚಿವ ಸ್ಥಾನ,ಉಪ ಮುಖ್ಯಮಂತ್ರಿ ಹುದ್ದೆಗಳು ದೊರೆತಿವೆ.ಈಗ ಮುಖ್ಯಮಂತ್ರಿಯ ಸ್ಥಾನ ನೀಡಲು ಸೂಕ್ತ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟರು.
ರಾಜಕೀಯದಲ್ಲಿ ನಾಯಕ ಬದಲಾವಣೆಯ ಮಾತು ಬಂದಾಗ ಹಲವು ಸಮುದಾಯಗಳು ತಮ್ಮವರಿಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸುವುದು ಸಹಜ ಪ್ರಸ್ತುತ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ,ದಲಿತರಿಗೆ ಸಿಎಂ ಅವಕಾಶ ನೀಡುವ ವಿಷಯ ಮುನ್ನೆಲೆಗೆ ಬಂದರೆ ಪರಿಶಿಷ್ಟ ಜಾತಿಯಲ್ಲಿನ ಮಾದಿಗ ಸಮುದಾಯದವರನ್ನು ಪರಿಗಣಿಸಬೇಕು.
ಹಿರಿಯ ರಾಜಕಾರಣಿ ಕೆ.ಹೆಚ್. ಮುನಿಯಪ್ಪರಿಗೆ ಸಿಎಂ ಸ್ಥಾನ ನೀಡಬೇಕು ಎಂದರು. ಏಳು ಬಾರಿ ಸಂಸದರಾಗಿ ಈಗ ಸಚಿವರಾಗಿ ಜನರ ವಿಶ್ವಾಸ ಗೆದ್ದು ಸೇವೆ ಸಲ್ಲಿಸಿರುವ ಮುನಿಯಪ್ಪ ಅವರು ಪ್ರಾಮಾಣಿಕ,ಹಿರಿಯ ಹಾಗೂ ಸಜ್ಜನ ರಾಜಕಾರಣಿ.ಎಲ್ಲಾ ಸಮುದಾಯದವರನ್ನೂ ಜೊತೆಗೂಡಿಸಿಕೊಂಡು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮುನಿಯಪ್ಪ ಅವರು ಸಿಎಂ ಆದರೆ ರಾಜ್ಯದ ಎಲ್ಲ ವರ್ಗಗಳಿಗೂ ಪ್ರಗತಿ ಖಚಿತ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಕ್ಷದ ನಾಯಕರು ಕೆ.ಹೆಚ್.ಮುನಿಯಪ್ಪರಿಗೆ ಬೆಂಬಲ ಸೂಚಿಸಬೇಕು.ಇದರಿಂದ ಅವರಿಗೆ ರಾಜಕೀಯ ನ್ಯಾಯ ದೊರಕುತ್ತದೆ ಸಿಎಂ ಸ್ಥಾನ ಸಾಧ್ಯವಾಗದಿದ್ದರೆ ಕನಿಷ್ಠ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು,ಎಂದು ಸಮುದಾಯದ ಪರವಾಗಿ ಶ್ರೀ ಕ್ಷಡಕ್ಷರಿ ಸ್ವಾಮೀಜಿ ಒತ್ತಾಯ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ಡಿ.13ಕ್ಕೆ ಬೃಹತ್ ಲೋಕ ಅದಾಲತ್
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಅನ್ಸುಯಮ್ಮ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ,ಕಣಿತಹಳ್ಳಿ ವೆಂಕಟೇಶ್,
ತಿರುಮಳ್ಳಪ್ಪ,ಶಿವಪ್ಪ,ಪೆದ್ದಣ್ಣ, ವಿ.ಶ್ರೀನಿವಾಸ್,ಅಣ್ಣಮ್ಮ,ಮುರಳಿ ಮೋಹನ್ ಮತ್ತು ಇತರರು ಉಪಸ್ಥಿತರಿದ್ದರು.
ಕೆ.ಹೆಚ್ ಮುನಿಯಪ್ಪ ಅವರಿಗೆ ಸಿ ಎಂ ಸ್ಥಾನ ನೀಡಿ:ಆದಿ ಜಾಂಬವ ಮಠದ ಶ್ರೀ ಕ್ಷಡಕ್ಷರಿ ಸ್ವಾಮೀಜಿ
Date:
ಪೋಸ್ಟ್ ಹಂಚಿಕೊಳ್ಳಿ:




