ಬಾಗೇಪಲ್ಲಿ: ಕ್ಷುಲ್ಲಕ ಕಾರಣಕ್ಕಾಗಿ ಹಳೇ ಧ್ವೇಷದ ಹಿನ್ನಲೆಯಲ್ಲಿ ಆಹಾರಕ್ಕೆ ವಿಷ ಬೆರೆಸಿ ಸಾಮೂಹಿಕವಾಗಿ ಕೊಲೆ ಮಾಡುವ
ಅಮಾನುಷವಾದ ಘಟನೆ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದ್ದು 8 ಜನರು ಅಸ್ವಸ್ಥಗೊಂಡಿದ್ದ
ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಅಸ್ವಸ್ಥಗೊಂಡವರನ್ನು ಬಾಗೇಪಲ್ಲಿ ತಾಲೂಕು ಪರಗೋಡು ಪಂಚಾಯಿತಿ ವ್ಯಾಪ್ತಿಯ
ದೇವಿರೆಡ್ಡಿಪಲ್ಲಿ ಗ್ರಾಮದ ಮದ್ದರೆಡ್ಡಿ, ಭಾಗ್ಯಮ್ಮ, ಮಂಜುನಾಥ. ಈಶ್ವರಮ್ಮ, ಸುಬ್ರಮಣಿ, ಮಣಿ, ಭಾನು ಎಂದು
ಗುರುತಿಸಲಾಗಿದ್ದು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು
ಇವರಲ್ಲಿ ಮಂಜುನಾಥ, ಮುದ್ದರೆಡ್ಡಿ ಎಂದು ತಿಳಿದು ಬಂದಿದ್ದು ಬ್ರಮಣಿ ಎಂಬುವವರ ಪರಿಸ್ಥಿತಿ ಚಿಂತಾಜನಕ
ಸ್ಥಿತಿ ತಲುಪಿದ್ದು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ.
ಗುರುವಾರ ಮನೆಯಲ್ಲಿಯೇ ತಯಾರು ಮಾಡಿದ್ದ ಅನ್ನ-ಸಾಂಬಾರು ಊಟವನ್ನು ಬೆಳಿಗ್ಗೆ 10 ಗಂಟೆಗೆ
ಮನೆಯವರೆಲ್ಲಾ ಕೂಲಿಯವರ ಜೊತೆಯಲ್ಲಿಯೇ ಹೊಲದ ಹತ್ತಿರ ಸೇವನೆ ಮಾಡಿದ್ದಾರೆ. ನಂತರ ಕೃಷಿ
ಕೆಲಸದಿಂದ ಮನೆಗೆ ವಾಪಸ್ಸಾಗಿರುವ 8 ಜನರು ಮದ್ಯಾಹ್ನ 3 ಗಂಟೆಗೆ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಸುಮಾರು
ಒಂದು ಗಂಟೆ ನಂತರ ಒಬ್ಬೊಬ್ಬರಾಗಿಯೇ ತೀವ್ರವಾಗಿ ಅಸ್ವಸ್ಥಗೊಂಡು ಕಿರುಚಾಡಿದ್ದು ಗ್ರಾಮಸ್ಥರು ಮತ್ತು
ಸಂಬಂಧಿಕರು ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಥಮ ತುರ್ತು ಚಿಕಿತ್ಸೆ
ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು 3 ಜನರಿಗೆ ತುರ್ತು
ವೆಂಟಿಲೇಟರ್ ಅಗತ್ಯವಾದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಮೂವರ ಪರಿಸ್ಥಿತಿ
ಇನ್ನೂ ವಿಷಯಮವಾಗಿಯೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಫುಡ್ ಪಾಯಿಸನ್ ಎಂಬು ಎಲ್ಲರೂ ಭಾವಿಸಿದ್ದರಾದರೂ ಈ ಘಟನೆಯಲ್ಲಿ ಅಸ್ವಸ್ಥಗೊಂಡು
ಚೇತರಿಕೆಯಾಗಿದ್ದ ಭಾನು ಯುವತಿ ಮದ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ದೇವರೆಡ್ಡಿಪಲ್ಲಿ
ಗ್ರಾಮದ ಪರಿಚಿತ ವ್ಯಕ್ತ ಚೌಡರೆಡ್ಡಿ ಎಂಬಾತ ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆ ಪ್ರವೇಶ ಮಾಡಿದ್ದ
ಎಂಬ ಮಾಹಿತಿ ಇಡೀ ಘಟನೆಯ ಚಿತ್ರಣವನ್ನೇ ಬದಲಾಯಿಸಿದ್ದು ನಂತರ ಹೊರಗೆ ಬಂದ ಸತ್ಯ ಎಲ್ಲರನ್ನೂ ಬೆಚ್ಚಿ
ಬೀಳಿಸುವಂತೆ ಮಾಡಿದೆ. ಆಹಾರಕ್ಕೆ ವಿಷ ಪ್ರಾಶನ ಮಾಡಿ ಒಂದೇ ಕುಟುಂಬದ ಎಲ್ಲರನ್ನೂ ಸಾಮೂಹಿಕವಾಗಿ ಕೊಲ್ಲುವ ಪಿತೂರಿ ಬೆಳಕಿಗೆ ಬಂದಿದೆ. ಪರಿಚಿತ ವ್ಯಕ್ತಿ ಇಂತಹ ಅಮಾನುಷ ಕೃತ್ಯಕ್ಕೆ ಮುಂದಾಗುತ್ತಾನೆಂದು ಯಾರೂ ಊಹಿಸಿರಲಿಲ್ಲ.
ಯುವತಿಯ ಮಾಹಿತಿಯ ಬೆನ್ನುಹತ್ತಿದ ಪೊಲೀಸರು ಸಾಮೂಹಿಕ ಕೊಲೆಗೆ ಯತ್ನಿಸಿದ್ದ ಚೌಡರೆಡ್ಡಿ ಮತ್ತು
ಆತನಿಗೆ ಮಾರ್ಗದರ್ಶನ ನೀಡಿದ್ದೇ ಅಲ್ಲದೆ ಘಟನೆಯ ಸಂಪೂರ್ಣ ಸೂತ್ರದಾರ ಎನ್ನಲಾಗುತ್ತಿರುವ ಅದೇ
ಗ್ರಾಮದ ಪಾಪಿರೆಡ್ಡಿ ಎಂಬ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿವಿದ ಆಯಾಮಗಳಲ್ಲಿ ತನಿಖೆಯನ್ನು
ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಳೇ ಧ್ವೇಷ ಕೊಲೆ ಯತ್ನಕ್ಕೆ ಕಾರಣ?
ಘಟನೆಯಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಮುದ್ದರೆಡ್ಡಿ ಮತ್ತು
ಅವರ ಪಕ್ಕದ ಮನೆಯ ಪಾಪಿರೆಡ್ಡಿ ಎಂಬುವವರ ನಡುವೆ ಕೆಲವು ತಿಂಗಳ ಹಿಂದೆ ಹೊಡೆದಾಟವಾಗಿದ್ದು ಬಾಗೇಪಲ್ಲಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆ ಪಕ್ಕದ ಒಂದು ಅಡಿ ಜಾಗ ಬಿಡುವ ವಿಚಾರದಲ್ಲಿ
ಮನಸ್ಥಾಪವಾಗಿತ್ತು. ಇದಕ್ಕೆ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಎನ್ನಲಾಗುತ್ತಿರುವ ಆರೋಪಿ ಪಾಪಿರೆಡ್ಡಿ ಹಳೇ ಧ್ವೇಷದ ಹಿನ್ನಲೆಯಲ್ಲಿ ಇಡೀ ಕುಟುಂಬದವರನ್ನು ಸಾಮೂಹಿಕವಾಗಿ ಕೊಲೆ ಮಾಡಲು ಪ್ರಯತ್ನಿಸಿದ್ದನೆ ಎಂಬ ಅನುಮಾನ
ಪೊಲೀಸರಲ್ಲಿಯೂ ವ್ಯಕ್ತವಾಗಿದ್ದು ತನಿಖೆ ತೀವ್ರಗೊಂಡಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ..? ನೂತನ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕಿ ರೂಪಕಲಾ
ದೇವರೆಡ್ಡಿಪಲ್ಲಿ ಗ್ರಾಮದ ಒಂದೇ ಕುಟುಂಬದ ಎಲ್ಲರನ್ನೂ ಸಾಮೂಹಿಕವಾಗಿ ಕೊಲೆ ಮಾಡಲು ಆಹಾರದಲ್ಲಿ
ವಿಷ ಬೆರೆಸಿ ಪ್ರಯತ್ನಿಸಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕುಶಲ್ ಚೌಕ್ಸಿ, ಎಎಸ್ಪಿ ಜಗನ್ನಾಥರೈ, ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಅಲರ್ಟ ಆಗಿರುವ ಪೊಲೀಸರು ಸಾಮೂಹಿಕ ಕೊಲೆಗೆ ಆಹಾರದಲ್ಲಿ ವಿಷ ಬೆರೆಸಿದ ಆರೋಪಿಗಳಾದ ಚೌಡರೆಡ್ಡಿ ವiತ್ತು ಘಟನೆಯ ಪ್ರಮುಖ ಸೂತ್ರದಾರ ಪಾಪಿರೆಡ್ಡಿ ಎಂಬುವವರನ್ನು ಅರೆಸ್ಟ್ ಮಾಡಿದು. ದೇವರೆಡ್ಡಿಪಲ್ಲಿ ಗ್ರಾಮಕ್ಕೆ ಎಸ್ಪಿ ಕುಶಲ್ ಚೌಕ್ಸಿ, ಎಎಸ್ಪಿ ಜಗನ್ನಾಥ ರೈ, ಡಿವೈಎಸ್ಪಿ ಶಿವಕುಮಾರ್ ಬೇಟಿ ನೀಡಿ ಸ್ಥಳ
ಪರಿಶೀಲನೆಯನ್ನು ನಡೆಸಿದರಲ್ಲದೆ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಆಹಾರದಲ್ಲಿ ವಿಷ ಬೆರೆಸಿದ ಕಾರಣ 8 ಜನರು ಅಸ್ವಸ್ಥ
ಪೋಸ್ಟ್ ಹಂಚಿಕೊಳ್ಳಿ:




