ಕೆಜಿಎಫ್ : ಅನೇಕ ದಶಕಗಳಿಂದ ಸುಗಮ ರಸ್ತೆ ಇಲ್ಲದೆ ಪರಿತಪಿಸುತ್ತಿದ್ದ ಗ್ರಾಮೀಣ ಗಡಿಭಾಗದ ಭಟ್ರಕುಪ್ಪ, ಮಾರಸಂದ್ರ, ನಾಯನಹಳ್ಳಿ ಗ್ರಾಮಗಳಿಗೆ 4 ಕೋಟಿ ರೂ., ವೆಚ್ಚದಲ್ಲಿ ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಶಾಸಕಿ ಎಂ ರೂಪಕಲಾ ಹೇಳಿದರು.
ಪಟ್ಟಣದ ಬಳಿಯ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಸಂದ್ರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನದಡಿ 12 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಗ್ರಾಮೀಣ ಜನತೆಗೂ ಶುದ್ಧ ಕುಡಿಯುವ ನೀರು ದೊರೆಯಬೇಕೆಂಬ ದೃಷ್ಟಿಯಿಂದ ಕೆ ಜಿ ಎಫ್ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲೂ ಸೂಕ್ತ ಸ್ಥಳ ಗುರುತಿಸಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಅನೇಕ ವರ್ಷಗಳಿಂದ ಈ ಭಾಗದ ಗ್ರಾಮಗಳಿಗೆ ಸೂಕ್ತ ಸಂಪರ್ಕ ರಸ್ತೆ ಸಮಸ್ಯೆ ಇತ್ತು ಇದೀಗ ಪಿಆರ್ಡಿ ಇಲಾಖೆ ಮೂಲಕ ಸರ್ಕಾರದಿಂದ 4 ಕೋಟಿ ವೆಚ್ಚ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಅತಿ ಶೀಘ್ರದಲ್ಲೇ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗುವುದು ಎಂದರು.
ಗ್ರಾಮಕ್ಕೆ ನೂತನ ಅಂಗನವಾಡಿ ಸಹ ಮಂಜೂರಾಗಿದ್ದು ವಾರದಲ್ಲೇ ಅಂಗನವಾಡಿ ಕಟ್ಟಡ ಸಹ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಹಾಗೂ ಗ್ರಾಮದಲ್ಲಿ ಅವಶ್ಯವಿರುವ ಕಡೆ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನು ಓದಿದ್ದೀರಾ..? ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಣ್ಣಮ್ಮ ರಮೇಶ್, ತಾಲೂಕು ಪಂಚಾಯಿತಿ ವೆಂಕಟೇಶಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆ.ಮು ಲಕ್ಷ್ಮೀನಾರಾಯಣ್, ಪಿಎಸ್ಐ ಗುರುರಾಜ್, ಕಾರ್ಯದರ್ಶಿ ಕೃಷ್ಣಮೂರ್ತಿ, ಸದಸ್ಯರಾದ ವೆಂಕಟೇಶಪ್ಪ, ವೀರಭದ್ರ, ಮುಖಂಡರಾದ ಕೃಷ್ಣಾರೆಡ್ಡಿ, ಮಂಜುನಾಥ್ ರೆಡ್ಡಿ, ಗುತ್ತಿಗೆದಾರ ಆಂಜಪ್ಪ ಮುನೇಗೌಡ, ರಾಮಕೃಷ್ಣಪ್ಪ , ವಿಶ್ವನಾಥ್ , ಹಾಗೂ ಅನೇಕ ಮುಖಂಡರು ಗ್ರಾಮಸ್ಥರು ಮಹಿಳೆಯರು ಉಪಸ್ಥಿತರಿದ್ದರು.





