ಬೇತಮಂಗಲ : ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ನಲ್ಲೂರು ಗ್ರಾಮದ ಬಳಿ ಬೇತಮಂಗಲ ಕೆರೆಗೆ ನೀರು ಹರಿಯುವ ಪಾಲಾರ್ ಹೊಳೆಗೆ ಹೊಸದಾಗಿ ನಿರ್ಮಾಣವಾಗಿರುವ ಸೇತುವೆಯ ಕಾಮಗಾರಿಗಳ ಲೋಕಾರ್ಪಣೆಯ ಸಿದ್ಧತೆಯನ್ನು ಶಾಸಕಿ ಎಂ.ರೂಪಕಲಾ ರವರು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಲ್ಲೂರು- ನಿತ್ಯ ಗ್ರಾಮಗಳ ನಡುವೆ ಬೇತಮಂಗಲ ಕೆರೆಗೆ ನೀರು ಹರಿಯುವ ಹೊಳೆಗೆ ಹಾಲಿ ಇರುವ ಸೇತುವೆಯು ತೀರಾ ಕೆಳ ಮಟ್ಟದಲ್ಲಿದ್ದು ಮಳೆಗಾಲದಲ್ಲಿ ಸೇತುವೆಯ ಮೇಲೆ ನೀರು ಹರಿಯುವುದರಿಂದ ಹಳ್ಳಿಗಳಿಗೆ ಸಂಪರ್ಕ ಕಡಿತಗೊಳ್ಳುತ್ತಿರುತ್ತದೆ. ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ ತೀರಾ ತೊಂದರೆಯಾಗುತ್ತಿತ್ತು.
ಇಲ್ಲಿನ ಸ್ಥಳೀಯರು ಸೇತುವೆ ಎತ್ತರಿಸಲು ಮನವಿ ಮಾಡಿದ್ದು ಹೊಸದಾಗಿ ಎರಡು ಸೇತುವೆ ನಿರ್ಮಾಣ ಮಾಡಲು ರೂ.6.00 ಕೋಟಿ, ಬಡಮಾಕನಹಳ್ಳಿ ಬಳಿ ಒಂದು ಸೇತುವೆ ಹಾಗೂ ಸಂಪರ್ಕ ರಸ್ತೆಗೆ 4 ಕೋಟಿ ರೂ ಸೇರಿ ಒಟ್ಟು 10 ಕೋಟಿ ರೂಪಾಯಿ ಅನುದಾನವನ್ನು ಲೋಕೋಪಯೋಗಿ ಸಚಿವರನ್ನು ಕೋರಿ ಮಂಜೂರು ಮಂಡಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡಿದ್ದು ಬುಧವಾರ ಲೋಕಾರ್ಪಣೆಗೊಳ್ಳಲಿದೆ ಎಂದರು.
ಇಲ್ಲಿ ಸೇತುವೆ ನಿರ್ಮಾಣದಿಂದ ತಾಲೂಕಿನ ಹಲವು ಗ್ರಾಮಗಳು ಹಾಗೂ ಆವಣಿ ವರೆಗೆ ಸುಮಾರು 20 ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಲೋಕಾರ್ಪಣೆ ಸಿದ್ದತೆ ನಡೆಯುತ್ತಿದೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ರವರ ಅಮೃತ ಹಸ್ತದಿಂದ ನಾಳೆ ಲೋಕಾರ್ಪಣೆಗೊಳಿಸಲಿದ್ದು ಇಡೀ ಕ್ಷೇತ್ರ ಜನತೆ ವಿಶೇಷವಾಗಿ ಸ್ಥಳೀಯ ಗ್ರಾಮಗಳ ಸಾರ್ವಜನಿಕರು ಈ ಶುಭ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಇದನ್ನು ಓದಿದ್ದೀರಾ..?ವಾಲ್ಮೀಕಿ ಜಯಂತಿ ಪ್ರಯುಕ್ತ ಪ್ರತಿಭಾ ಪುರಸ್ಕಾರ
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಇನಾಯತ್ ವುಲ್ಲಾ, ನಾರಾಯಣ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಗೊಲ್ಲಹಳ್ಳಿ ಮಂಜುನಾಥ್ ,ಬೇತಮಂಗಲ ವಿನೂ ಕಾರ್ತಿಕ್, ಹುಲ್ಕೂರು ಸೊಣಮ್ಮ ರಮೇಶ್, ಕಮ್ಮಸಂದ್ರ ಮಾಜಿ ನಾಗರಾಜ್, ಕಾರಿ ಪ್ರಸನ್ನ, ದುರ್ಗಾಪ್ರಸಾದ್ ,ಸೊಸೈಟಿ ಅಧ್ಯಕ್ಷ ಕಳ್ಳಿಕುಪ್ಪ ವೆಂಕಟಾಚಲಪತಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ಸದಸ್ಯ ವೇಣುಗೋಪಾಲ್, ಇಇ ರಾಮಮೂರ್ತಿ ,ಎಇಇ ರಾಜಶೇಖರ್, ಗುತ್ತಿಗೆದಾರರಾದ ವೆಂಕಟರಮಣ ಗೌಡ, ಮುಖಂಡರಾದ ಸುರೇಂದ್ರ ಗೌಡ, ಶಂಕರ್, ಬ್ಯೌಟೇಗೌಡ, ವಕೀಲ ಪದ್ಮನಾಭ ರೆಡ್ಡಿ, ರಾಜಣ್ಣ , ನಿವೃತ್ತ ಶಿಕ್ಷಕ ವೆಂಕಟರಮಣ, ಸೂರಹಳ್ಳಿ ಪ್ರಸಾದ್ ರೆಡ್ಡಿ, ಬ್ಯಾಟರಾಯನಹಳ್ಳಿ ರಮೇಶ್, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.





