ಬಾಗೇಪಲ್ಲಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ಬಾಗೇಪಲ್ಲಿ 07-12-2025 ರಂದು ನಡೆದ ಆಡಳಿತ ಮಂಡಲಿ ನಿರ್ದೇಶಕರ ಚುನಾವಣೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಲಿಯಲ್ಲಿ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಮಹಿಳಾ ಮೀಸಲು ಕ್ಷೇತ್ರದಿಂದ ಪದ್ಮ, ಶಿವಮ್ಮ, ಸಾಮಾನ್ಯ ಕ್ಷೇತ್ರದಿಂದ ಸುಪ್ರಿತ್, ಜಿ. ರಾಮಕೃಷ್ಣಪ್ಪ ಚುನಾಯಿತರಾಗಿದ್ದಾರೆಂದು ಚುನಾವಣಾ ಅಧಿಕಾರಿ ವನಿತಾ ರವರು ಘೋಷಿಸಿದರು.
ಬಾಗೇಪಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ಒಟ್ಟು 14 ನಿರ್ದೇಶಕರ ಸ್ಥಾನಗಳ ಇದ್ದು ಎ ವರ್ಗ ದಿಂದ ವಿ.ಸುಜಾತ ಗೂಳೂರು,ಕೆ.ನಾರಾಯಣ ಸ್ವಾಮಿ ದೇವರಗುಡಿಪಲ್ಲಿ, ನಾರಾಯಣಪ್ಪ ಆಚೇಪಲ್ಲಿ,ವಿ.ಚಂದ್ರಶೇಖರ ರೆಡ್ಡಿ ಪುಟ್ಟಪರ್ತಿ, ವಿ.ಗೋಪಾಲ ಕೃಷ್ಣ ಪರಗೋಡು ,ಹಾಗೂ ಬಿ.ವರ್ಗದಿಂದ
ಅಂಜನಪ್ಪ ವಡ್ಡರಪಾಳ್ಯ,ಮರಿಯಪ್ಪ ಬಾಗೇಪಲ್ಲಿ, ಆದಿಮೂರ್ತಿ ಬಾಗೇಪಲ್ಲಿ, ಎ.ಶ್ರೀನಿವಾಸ್ ಅಪ್ಪಯ್ಯ ಬಾಬು,ಬಾಗೇಪಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಇಂದು ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಮಹಿಳಾ ಮೀಸಲು ಕ್ಷೇತ್ರದಿಂದ ಪದ್ಮ, ಶಿವಮ್ಮ, ಸಾಮಾನ್ಯ ಕ್ಷೇತ್ರದಿಂದ ಸುಪ್ರಿತ್, ಜಿ. ರಾಮಕೃಷ್ಣಪ್ಪ ಚುನಾಯಿತರಾಗಿದ್ದಾರೆಂದು ಚುನಾವಣಾ ಅಧಿಕಾರಿ ವನಿತಾ ರವರು ಘೋಷಿಸಿದರು.
ಈ ಸಂದರ್ಭದಲ್ಲಿ ಗೆದ್ದ ಅಭ್ಯರ್ಥಿಗಳು ಸಿಹಿ ಹಂಚಿ ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನು ಓದಿದ್ದೀರಾ..? ಅನ್ಯ ಭಾಷಿಕರ ಹಾವಳಿ, ಕನ್ನಡ ಮೊದಲ ಆಧ್ಯತೆಯಾಗಲಿ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಸ್. ಮಂಜುನಾಥ್, ಕೆ. ನಾರಾಯಣಸ್ವಾಮಿ, ಎನ್. ನಾಗರಾಜ್, ಮಾರಾಟಗುಮಾಸ್ತರು ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು.




