ಬೇತಮಂಗಲ: ದೇಶದ ಸರ್ವೋಚ್ಚ ನ್ಯಾಯಾಲಯದ ಪೀಠಾಧಿಪತಿ ಆರ್ ಗವಾಯಿ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿರುವುದನ್ನು ಖಂಡಿಸಿ ದಲಿತ ಪರ ಸಂಘಟನೆಗಳು ಕರೆ ನೀಡಿದ್ದ ಕೋಲಾರ ಬಂದ್ ಗೆ ಬೇತಮಂಗಲ , ಕ್ಯಾಸಂಬಳ್ಳಿ ಹೋಬಳಿಗಳಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಯಶಸ್ವಿಯಾಯಿತು.
ಬೇತಮಂಗಲದಲ್ಲಿ ತುರ್ತು ಅವಶ್ಯಕವಾದ ಹಾಲು, ಮೆಡಿಕಲ್, ಆಸ್ಪತ್ರೆ ಹೊರತುಪಡಿಸಿ, ಸ್ವಯಂ ಪ್ರೇರಿತರಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದರು.
ಕ್ಯಾಸಂಬಳ್ಳಿ ಗ್ರಾಮದಲ್ಲಿ ಎಲ್ಲಾ ಅಂಗಡಿ ಮುಖಂಡರು ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬೆಂಬಲ ಸೂಚಿಸಿದರು ಆದರೆ ಗ್ರಾಮ ಪಂಚಾಯಿತಿ ಕಚೇರಿ ಪೆಟ್ರೋಲ್ ಬಂಕ್ ಗಳು ತೆರೆದಿದ್ದವು ನಂತರ ದಲಿತ ಪರ ಸಂಘಟಕರು ಕಚೇರಿಗಳನ್ನು ಮುಚ್ಚಿಸಿ ಬಂದ್ ಗೆ ಸಹಕರಿಸಲು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ಕಿಡ್ನಿ ಸಮಸ್ಯೆ ರೋಗಿಗೆ ಶಾಸಕ ಕೊತ್ತೂರು ಮಂಜುನಾಥ್ ೫೦ ಸಾವಿರ ನೆರವು
ಈ ಸಂದರ್ಭದಲ್ಲಿ ದಲಿತ ಪರ ಸಂಘಟಕರಾದ ಶ್ರೀನಾಥ್ , ಕಂಗಾಡ್ಲಹಳ್ಳಿ ಎಸ್.ಗಂಗಪ್ಪ, ಏತೂರು ಚಂದ್ರಶೇಖರ್, ತಂಬಾರಹಳ್ಳಿ ರಾಮಪ್ಪ, ಕೆಂಚಪ್ಪ, ಕಾರಿ ರಾಧಾಕೃಷ್ಣ , ಕ್ಯಾಸಂಬಳ್ಳಿ ಗೋಪಾಲ್, ಕೆ.ವಿ ಆನಂದ್, ಕೆ.ವಿ ಶ್ರೀನಿವಾಸ್, ವೆಂಕಟೇಶ್, ವೆಂಕಟನಿರತ್ನಂ, ಗೋಪಿ, ಕಳ್ಳಿಕುಪ್ಪ ಮುನಿವೆಂಕಟಪ್ಪ, ಕಣ್ಣಪ್ಪ, ವಿಕ್ಕಿ ರೆಡ್ಡಿ, ಜಯರಾಮ್,ಕಣ್ಣೂರು ರಾಜೇಶ್, ರಾಮಸಾಗರ ಮಂಜುನಾಥ್, ವೆಂಕಟಮುನಿ, ಕೃಷ್ಣಮೂರ್ತಿ, ಸುರೇಶ್, ದೀಪಕ್, ಹಾಗೂ ಅನೇಕ ದಲಿತ ಪರ ಹೋರಾಟಗಾರರು, ಮುಖಂಡರು ಉಪಸ್ಥಿತರಿದ್ದರು.





