ಭೋವಿ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು: ಸಂಸದ ಎಂ.ಮಲ್ಲೇಶ್ ಬಾಬು

Date:

ಕೋಲಾರ: ಭೋವಿ ಜನಾಂಗವು ಹಿಂದಿನಿಂದಲೂ ವಿದ್ಯಾಭ್ಯಾಸದ ಕಡೆ ಗಮನ ಹರಿಸದೆ ಕಲ್ಲು, ಮಣ್ಣು, ಕೆರೆ ಕಟ್ಟೆಗಳನ್ನು ಕಟ್ಟುವ ಕೆಲಸವನ್ನು ಮಾಡಿಕೊಂಡು ಜೀವನ ಮಾಡಿಕೊಂಡು ಬಂದವರರು ಯಾರು ಕೂಡ ದೊಡ್ಡ ಅಧಿಕಾರಿಗಳಾಗಲಿಲ್ಲ ಜನಾಂಗವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ‌ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಭೋವಿ ಸಮುದಾಯಕ್ಕೆ ಎಲ್ಲಾ ರೀತಿಯ ಸಹಾಯ ಮಾಡಬೇಕು ಸಮುದಾಯವು ಮೈಸೂರಿನ ಕೆಆರ್‌ಎಸ್‌ ಜಲಾಶಯ ಕಟ್ಟಿದ್ದಾರೆ ಅಂತಹ ಶಾಶ್ವತವಾಗಿ ಉಳಿಯುವಂತಾ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದರು.

ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ನರಸಾಪುರ ಬಳಿ ಕಲ್ಲಿನ ಬ್ಲಾಕ್ ಗಳನ್ನು ಭೋವಿ ಸಮುದಾಯಕ್ಕೆ ಕೊಡಲು ಸೂಚನೆ ‌ಕೊಡಬೇಕು. ಸಮುದಾಯದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಎರಡನೇ ಹಾಗೂ ನಾಲ್ಕನೆಯ ಶನಿವಾರ ಅರ್ಧ ದಿವಸ ಮಾತ್ರ ಕೆಲಸ‌ ಮಾಡಿಸಬೇಕು ಪೌರಕಾರ್ಮಿಕರ ಮಕ್ಕಳಿಗೆ‌ ನೆರವು ನೀಡಲು ಸಿಎಸ್ ಆರ್‌ ಅನುದಾನವನ್ನು ಆರೋಗ್ಯ, ಶಿಕ್ಷಣಕ್ಕೆ ‌ಬಳಸಿಕೊಳ್ಳುವಂತೆ ಸಲಹೆ ನೀಡಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ‌ಮಂಜುನಾಥ್ ಮಾತನಾಡಿ ಕೆಲವರು ನನ್ನ ಮತ್ತು ಎಂಎಲ್ಸಿ ಅನಿಲ್ ಕುಮಾರ್ ಅವರನ್ನು ಜೋಡೆತ್ತೂ, ಲವಕುಶ, ಅಂತಾರೆ ಆದರೆ ನಾವು ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು ಆದರೆ ವ್ಯತ್ಯಾಸವಾಗಿ ಬೇರೆ ಬೇರೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೇವೆ ನನಗೆ ಜಾತಿ ಇಲ್ಲ ೭೦೦ ವೋಟು ಇಟ್ಟುಕೊಂಡು ಏನು ‌ಮಾಡುವುದು ಆದರೂ ಕೋಲಾರ ಕ್ಷೇತ್ರದಲ್ಲಿ ‌ಗೆದ್ದಿದ್ದೇನೆ ನಿಮ್ಮಷ್ಟು ಸಮುದಾಯದಷ್ಟು ಬಲ ನನಗೆ ಇದ್ದಿದ್ದರೆ ಏನು ಬೇಕಾದರೂ ಮಾಡಬಹುದು ಎಂದರು.

ಇವತ್ತು ಕೆಲವು ಹಿರಿಯ ನಾಯಕರು ಈ ಕಾರ್ಯಕ್ರಮಕ್ಕೆ ಬಂದಿಲ್ಲ ಚುನಾವಣೆ ಬಂದಾಗ ಹೊಡೆದಾಡೋಣ. ಆದರೆ ‌ಸಮಾಜ‌ದ ಕಾರ್ಯಕ್ರಮದಲ್ಲಿ ಒಂದಾಗಿ ಒಗ್ಗಟ್ಟನ್ನು ಪ್ರದರ್ಶಿಸಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ‌ಮಾತನಾಡಿ ಸಮಾಜದ ಕುರಿತು ಜಾಗೃತಿ ‌ಮೂಡಿಸಬೇಕು. ವಿವಿಧ ಒಗ್ಗಟ್ಟಿನ ಕೊರತೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು‌ ಕುಲ ಕಸುಬು ಬಿಟ್ಟು ಬೇರೆ ದಿಕ್ಕಿನಲ್ಲಿ ‌ಆಲೋಚಿಸುವ ಅಗತ್ಯ‌ವಿದೆ ಆದರೆ‌, ಈ ದೇಶದಲ್ಲಿ ಮಾನಸಿಕ ಗುಲಾಮಿಗಿರಿ ನೆಲೆಸಿದೆ‌ ಅದರಿಂದ ‌ಹೊರಬರಬೇಕಿದೆ. ಇದಕ್ಕೆ ಶಿಕ್ಷಣ ಅಗತ್ಯ ಕೌಶಲ್ಯ ಕಲಿಸಬೇಕು ಇದು ವ್ಯವಸ್ಥೆಯ ಜವಾಬ್ದಾರಿಯಾಗಬೇಕು ಎಂದರು.

ಭೋವಿ ಸಮಾಜವು ಶ್ರಮ ಸಂಸ್ಕೃತಿಯಡಿ ಬರುವ ಸಮುದಾಯವಿದು. ಮನೆ ಕಟ್ಟುವ ಈ ಸಮುದಾಯದ ಆ ಮನೆಯೊಳಗೆ ಹೋಗಲು ಬಿಡಲ್ಲ. ನೀತಿ ರೂಪಿಸುವ ಮಟ್ಟಕ್ಕೆ ಈ ಸಮುದಾಯದವರು ಬೆಳೆದಿಲ್ಲ. ಮಾನವ ವಿರೋಧಿ ಸಂಸ್ಕೃತಿಯಲ್ಲಿ ಯಾವುದೇ ಬೆಳವಣಿಗೆ, ಪ್ರಗತಿ ಕಾಣುವುದಿಲ್ಲ ಜಾತಿ ಎನ್ನುವದು ನಮ್ಮ ಸಾಮರ್ಥ್ಯ, ಯೋಗ್ಯತೆಯ ಅಳೆಯುವ ಮಾನದಂಡ ಅಲ್ಲ. ಅದಕ್ಕೆ ಆತ್ಮವಿಶ್ವಾಸ ಇರಬೇಕು ದಮನಿತ ಸಮಾಜದ ಮುಖ್ಯ ಸಮಸ್ಯೆ ಎಂದರೆ ತಾವು, ತಮ್ಮ ಕುಟುಂಬ ಮಾತ್ರ ಬೆಳೆಯಬೇಕು. ಉಳಿದವರ ಬಗ್ಗೆ ಕಾಳಜಿ ಇಲ್ಲ. ತಮ್ಮ ಜೊತೆಗೆ ಕರೆದುಕೊಂಡು ಹೋಗುವ ಇಚ್ಛಾಶಕ್ತಿ ಕಳೆದು ಕೊಳ್ಳುತ್ತಿದ್ದೇವೆ. ಸ್ವಾರ್ಥ ಬಿಡಬೇಕು ಎಂದು ಸಲಹೆ‌‌ ನೀಡಿದರು.

ವಿಧಾನ ಪರಿಷತ್ ‌ಸದಸ್ಯ ಎಂ.ಎಲ್.ಅನಿಲ್ ‌ಕುಮಾರ್ ಮಾತನಾಡಿ, ಭೋವಿ ಸಮುದಾಯ ಎಂದರೆ ಶ್ರಮಿಕ ಸಮಾಜ. ಹೆಚ್ಚು ಕೆರೆ ಇರುವ ಜಿಲ್ಲೆ. ಅದಕ್ಕೆ‌ ಕಾರಣ ಭೋವಿ ‌ಸಮಾಜ ಈಗ ಯಂತ್ರೋಪಕರಣಗಳು ಇದ್ದರೂ ಹೊಸದಾಗಿ ಯಾವುದೇ ಕೆರೆ ನಿರ್ಮಾಣ ‌ಮಾಡಲು ಸಾಧ್ಯವಾಗಿಲ್ಲ ಬೇರೆ ರಾಜ್ಯಗಳಲ್ಲಿ ‌ಭೋವಿ‌ ಸಮಾಜಕ್ಕೆ ಮೀಸಲಾತಿ ‌ಇಲ್ಲ ಕರ್ನಾಟಕದಲ್ಲಿ ಸಮಾಜಕ್ಕೆ ಮೀಸಲಾತಿ ಇದೆ ಎಂದರು.

ಇದನ್ನು ಓದಿದ್ದೀರಾ..? ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ: ರೈತ ಸಂಘಟನೆ ಆಗ್ರಹ

ಈ ಸಂದರ್ಭದಲ್ಲಿ ಮಾಜಿ‌ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿದರು, ಉಪನ್ಯಾಸಕ ಡಾ.ಅನಿಲ್ ಕುಮಾರ್ ಸಿದ್ದರಾಮೇಶ್ವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ‌ಮೊದಲು ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು ಜಿಲ್ಲಾ ಪಂಚಾಯಿತಿ‌‌ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಸದಸ್ಯ ಗಣೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎ.ಅಜಯ್ ಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಸಮುದಾಯದ ಮುಖಂಡರಾದ ಎಸ್.ವಿ ಲೋಕೇಶ್, ಎಸ್.ಚೌಡಪ್ಪ, ನುಕ್ಕನಹಳ್ಳಿ ಶ್ರೀನಿವಾಸ್ ಸೇರಿದಂತೆ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...