ಬಾಗೇಪಲ್ಲಿ: ತಾಲ್ಲೂಕು ಮಿಟ್ಟೇಮರಿ ಹೋಬಳಿ ಕೇಂದ್ರದ ವ್ಯಾಪ್ತಿಯ ಪುವಾಡಮ್ಮ ಕೆರೆ ಕೋಡಿ ಹೋದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ಹಾಗೂ ಉಪಾದ್ಯಕ್ಷ ಕೆರೆಗೆ ಬಾಗಿನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿದರು.ಬಳಿಕ ಉಪಾದ್ಯಕ್ಷ ಗೌತಮಿ ವಿಜಯ್ ಗೋಪಾಲ ರೆಡ್ಡಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ತುಂಬಿರಲಿಲ್ಲ ಪುವಾಡಮ್ಮ ಕೆರೆ ತುಂಬಿ ಬಂದಿದ್ದು ಕೋಡಿ ಹರಿದ ಶುಭ ಸಂಕೇತವಾಗಿ ಇಂದು ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಲಾಯಿತು.
ಇದನ್ನು ಓದಿದ್ದೀರಾ..? ಸರ್ಕಾರಿ ಗೋಮಾಳದಲ್ಲಿ ಅಕ್ರಮ ಸೋಲಾರ್ ಪ್ಲಾಟ್ ವಿರುದ್ಧ ಕ್ರಮಕ್ಕೆ ಒತ್ತಾಯ: ಸಂದಾ ಮುನಿಸ್ವಾಮಿ
ಕಳೆದ ಎರಡು ದಿನಗಳಿಂದ ಬರದ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ, ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ. ಇದರಿಂದಾಗಿ ರೈತರಲ್ಲಿ ಹರ್ಷ ತಂದಿದೆ, ರೈತರ ಕ್ಷೇಮವೇ ನಾಡಿನ ಕ್ಷೇಮ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷೆ ಸೀತಮ್ಮ,ಸದಸ್ಯರಾದ ಎಂ.ಬಿ.ಲಕ್ಷ್ಮೀನರಸಿಂಹಯ್ಯ,ನಾರಾಯಣ ಸ್ವಾಮಿ ,ವೆಂಕಟೇಶ್, ಮುಖಂಡರಾದ ಕಾಮರೆಡ್ಡಿ ಮಂಜುನಾಥ, ಶ್ರೀನಿವಾಸ್ ರಘು ,ಪಿಡಿಓ ವೆಂಕಟೇಶ್, ಸಿಬ್ಬಂದಿ ವರ್ಗ ಜಲಗಾರರು ಹಾಜರಿದ್ದರು.
ಮಿಟ್ಟೇಮರಿ ಪುವಾಡಮ್ಮ ಕೆರೆ ಕೋಡಿ:ಗ್ರಾಮ ಪಂಚಾಯತಿ ವತಿಯಿಂದ ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ
ಪೋಸ್ಟ್ ಹಂಚಿಕೊಳ್ಳಿ:




