ಮುಂಬರುವ ಜಿಪಂ-ತಾಪಂ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಫರ್ಧೆ:ವಿ.ಮೋಹನ್

Date:

ಬೇತಮಂಗಲ: ಮುಂಬರುವ ಜಿಲ್ಲಾ ಮತ್ತು ತಾಪಂ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದೇನೆ. ಜತೆಗೆ ಉಳಿದ ತಾಲೂಕಿನ ಎಲ್ಲಾ ಕ್ಷೇತ್ರಗಳಲ್ಲಿ ಯುವ ಮುಖಂಡ ಅಭಿಲಾಷ್ ರೆಡ್ಡಿ ಹಾಗೂ ಇತರೆ ಯುವಕರಿಗೆ ಆದ್ಯತೆ ನೀಡಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಂಡು ಭ್ರಷ್ಟಾಚಾರ ರಹಿತ, ಬಡವರ, ಕೂಲಿ ಕಾರ್ಮಿಕರ, ರೈತರ, ಶ್ರಮಿಕರ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಸವಲತ್ತು ದೊರಕಿಸುತ್ತೇನೆ ಎಂದು ಆರ್.ಕೆ ಪೌಂಡೇಶನ್ ಸ್ಥಾಪಕ, ಸಮಾಜ ಸೇವಕ ವಿ.ಮೋಹನ್ ಕೃಷ್ಣ ಹೇಳಿದರು.

ಪಟ್ಟಣದ ಬಳಿಯ ಶ್ರೀನಿವಾಸಂದ್ರ ಗ್ರಾಪಂಯ ಕರಡಗೂರು ಹಾಲು ಉತ್ಪಾದಕರ ಸಂಘದ 120ಕ್ಕೂ ಅಧಿಕ ಹಾಲು ಉತ್ಪಾದಕರಿಗೆ ದಿಪಾವಳಿ ಉಡುಗಡೆಯಾಗಿ ಕುಕ್ಕರ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ನಾನು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಯಲ್ಲ, ಕ್ಷೇತ್ರದ ಮಣ್ಣಿನ ಮಗನಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಫರ್ಧಿಸಲಿದ್ದೇನೆ ವಿಧಾನ ಸಭಾ ಚುನಾವಣೆಗೆ 2 ವರ್ಷಗಳ ಅವಧಿಯಿದ್ದು, ಮುಂಬರುವ ಜಿಪಂ ಚುನಾವಣೆಯಲ್ಲಿ ಸ್ಫರ್ಧಿಸಲಿದ್ದೇನೆ ಎಲ್ಲರೂ ಆಶೀರ್ವಾದಿಸಬೇಕೆಂದು ಮನವಿ ಮಾಡಿದರು.

ಕರಡಗೂರು ಗ್ರಾಮವು ನನಗೆ ರಾಜಕೀಯ ಜನ್ಮ ನೀಡಿದ ಪುಣ್ಯ ಭೂಮಿಯಾಗಿದೆ, ಹಿಂದೆ ಗ್ರಾಪಂ ಚುನಾವಣೆಯಲ್ಲಿ ನಮ್ಮ ಅಭಿಮಾನಿಗಳು ಸದಸ್ಯರಾಗಿದ್ದು, ನನ್ನನ್ನು ರಾಜಕೀಯವಾಗಿ ಗುರುತಿಸಲು ಬಿಜೆಪಿ ಪಕ್ಷದ ಹಿತದೃಷ್ಠಿಯಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಹಕಾರ ನೀಡಿದೆವು ಆದರೆ ಪಕ್ಷದಲ್ಲಿನ ಕೆಲವರು ನಮ್ಮನ್ನು ಬಳಸಿಕೊಂಡು ಕಡೆಗಣಿಸಿದ್ದು, ಕ್ಷೇತ್ರದ ಯುವಕರ, ಹಿರಿಯರ ಸಲಹೆಯಂತೆ ಅವರ ಆಶೀರ್ವಾದದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿಯೇ ಮುನ್ನೆಡೆಯುತ್ತೇನೆ ಎಂದರು.
ಕರಡಗೂರು ಡೇರಿ ಚುನಾವಣೆ: ವಾಮಮಾರ್ಗದಲ್ಲಿ ಹಣ ಬಲ ತೊಲ್ಬಳಗಳ ಶಾಸಕರ ಹಿಂಬಾಲಕರು ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದ್ದರು, ಆದರೆ ಈ ಗ್ರಾಮದ ಹಾಲು ಉತ್ಪಾದಕರು, ರೈತರ ಸ್ವಾಭಿಮಾನ, ಗ್ರಾಮದ ಹಿರಿಯರ ಆಶೀರ್ವಾದದಿಂದ ಯುವಕ ಅಭಿಲಾಷ್ ರೆಡ್ಡಿ ಅವರ ಬೆನ್ನಿಗೆ ನಿಂದು ಹಾಲಿನ ಡೇರಿ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು, ಇತಿಹಾಸ ಸೃಷ್ಠಿಸಿದ್ದಾರೆ ಅದೇ ರೀತಿಯಲ್ಲಿ ನಿತ್ಯ 3 ಸಾವಿರ ಲೀ.ಹಾಲು ಸಂಗ್ರಹವಾಗುತ್ತಿದ್ದು, ನಿತ್ಯ 5 ಸಾವಿರ ಲೀ ಹಾಲು ಉತ್ಪಾದಿಸುವ ಗುರಿ ಹೊಂದಿರುವುದು ನಿಜಕ್ಕೂ ಖುಷಿ ವಿಷಯವೆಂದು ಶ್ಲಾಘಿಸಿದರು. ಗ್ರಾಪಂ ಮತ್ತು ಡೇರಿ ಚುನಾವಣೆಯಿಂದ ನಮಗೆ ಮತ್ತಷ್ಟು ರಾಜಕೀಯ ಶಕ್ತಿ ಬಂದಿದೆ, ಇದು ನಮಗೆ ದಿಪಾವಳಿ ಬಂಪರ್ ಗಿಫ್ಟ್ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹೈನುಗಾರಿಕೆ ಪಿತಾಮಹ ಸಚಿವ ಎಂ.ವಿ ಕೃಷ್ಣಪ್ಪ ಅವರ ಪುತ್ರ ಸೋಲಿಲ್ಲದ ಸರದಾರ ಜಯಸಿಂಹ ಕೃಷ್ಣಪ್ಪ ಅವರ ವಿರುದ್ಧ ಸಹ ಚುನಾವಣೆ ನಡೆಸಿದರು, ಆದರೆ ರೈತರು, ರಾಜಕೀಯ ಹೈಡ್ರಾಮಗಳಲ್ಲಿಯೂ ಅತ್ಯಧಿಕ ಮತ ನೀಡಿ ಗೆಲ್ಲಿಸಿದರು, ಅದೇ ರೀತಿಯಲ್ಲಿ ಕೆಜಿಎಫ್‍ನ ಮುಂಬರುವ ಚುನಾವಣೆಗಳು ಸ್ವಕ್ಷೇತ್ರದ ಮಣ್ಣಿನ ಮಕ್ಕಳಿಗೆ ಅಧಿಕಾರ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯುವ ಮುಖಂಡ ಅಭಿಲಾಷ್ ರೆಡ್ಡಿ ಮಾತನಾಡಿ, ಸಮಾಜ ಸೇವಕ ವಿ.ಮೋಹನ್ ಕೃಷ್ಣ, ಅವರ ಕುಟುಂಭದಲ್ಲಿ ಶಾಸಕರು-ಸಂಸದರಿಲ್ಲದಿದ್ದರೂ, ಕೆಜಿಎಫ್ ಕ್ಷೇತ್ರದ ಜನರ ನಾಡಿ ಮಿಡಿತ ಅರಿತು, ಮಕ್ಕಳಿಗೆ ಪುಸ್ತಕ, ಗುಡಿ-ಗೋಪುರಗಳಿಗೆ ಅನುದಾನ, ಬಡ ಕೂಲಿ ಕಾರ್ಮಿಕರಿಗೆ ನೆರವು, ಹಬ್ಬ ಹರಿದಿನಗಳಲ್ಲಿ ಗಣೇಶ ಮೂರ್ತಿ, ದಿಪಾವಳಿಗೆ ಪಟಾಗಿ, ನೊಂದವರಿಗೆ ಸಹಕಾರ ನೀಡುತ್ತಾ ಸಮಾಶಜ ಮುಖಿ ಸೇವೆ ಮಾಡುತ್ತಿದ್ದಾರೆ. ರೈತರಿಗಾಗಿ ನಮ್ಮ ಡೇರಿಯ 130 ಮಂದಿ ದೀಪಾವಳಿ ಉಡುಗರೆಯಾಗಿ ಕುಕ್ಕರ್, ಸಿಹಿ ವಿತರಿಸಿದ್ದು, ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಾ ರಾಜಕೀಯವಾಗಿಉ ಶಕ್ತಿ ತುಂಬುತ್ತೇವೆ ಎಂದರು.

ಇದನ್ನು ಓದಿದ್ದೀರಾ..? ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ, ಸೌಹಾರ್ದ ಸಾಮರಸ್ಯಕ್ಕೆ ಜಿಲ್ಲಾ ಮಟ್ಟದ ಸಮಾವೇಶ

ಈ ಸಂದರ್ಭದಲ್ಲಿ ಡೇರಿ ಅಧ್ಯಕ್ಷ ಅಶೋಕ್ ರೆಡ್ಡಿ, ಉಪಾಧ್ಯಕ್ಷ ಮಂಜುನಾಥ್ ರೆಡ್ಡಿ, ನಿರ್ದೇಶಕರಾದ ಶ್ರೀರಾಮರೆಡ್ಡಿ, ಪುಣ್ಯವತಿ,ಹಂಸವೇಣಭಿ, ಪ್ರಕಾಶ್,ವೆಂಕಟರಾಮಪ್ಪ,ಜಯರಾಮರೆಡ್ಡಿ, ಆಚಿಜಪ್ಪ,ನಾರಾಯಣಪ್ಪ, ಅನುಸೂಯಮ್ಮ,ಸುಹಾಸಿನಿ, ಸಿಇಒ ನಾರಾಯಣಚಾರಿ, ಪರೀಕ್ಷಕ ಆಚಿಜಪ್ಪ, ಸಹಾಯಕಿ ಲಕ್ಷ್ಮೀ, ಲಕ್ಷೀನಾರಾಯಣಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ಗಂಗಿರೆಡ್ಡಿ, ಗ್ರಾಪಂ ಸದಸ್ಯ ಶ್ರೀನಿವಾಸ್, ಮುಖಂಡರಾದ ಬಲರಾಮ್, ಬಾಬುರೆಡ್ಡಿ, ಗುತ್ತಿಗೆದಾರ ಕೃಷ್ಣಪ್ಪ ಹಾಗೂ ಹಾಲು ಉತ್ಪಾದಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...