ರಾಯಚೂರು | ಜ.30ರಂದು ಫ್ಯಾಸಿಸ್ಟ್ ವಿರೋಧಿ ಸಮಾವೇಶ: ಆರ್ ಮಾನಸಯ್ಯ

Date:

ಸಂವಿಧಾನ ರಕ್ಷಣೆಗೆ ಒಗ್ಗಟ್ಟು ಅಗತ್ಯ. ಹಾಗಾಗಿ ಪ್ರಜಾಪ್ರಭುತ್ವ, ಜಾತ್ಯಾತಿತತೆ ಹಾಗೂ ಗಣತಂತ್ರ ವ್ಯವಸ್ಥೆ ಉಳಿಯುವ ಎಲ್ಲರೂ ಒಂದಾಗಬೇಕು. ಈ ಹಿನ್ನೆಲೆಯಲ್ಲಿ ಜನವರಿ 30ರಂದು ಫ್ಯಾಸಿಸ್ಟ್ ವಿರೋಧಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾ ರಂಗದ‌ ಸಹ ಸಂಚಾಲಕ ಆರ್ ಮಾನಸಯ್ಯ ತಿಳಿಸಿದರು.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, “ನಾಗರಿಕರಲ್ಲಿ‌ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನುವಾದಿ-ಫ್ಯಾಸಿಸ್ಟ್‌ ವಿರೋದಿ ಜನತಾ ರಂಗದಿಂದ ಜನವರಿ 30ರಂದು ಲಿಂಗಸೂಗೂರಿನ ಆಯ್ದಕ್ಕಿ ಲಕ್ಕಮ ಮೈದಾನದ ಜಗದ್ಗುರು ತಿಂಥಿಣಿ ಮೌನೇಶ್ವರ ಗುರು ಖಾದರಿಪೀರ ವೇದಿಕೆಯಲ್ಲಿ ಸಮಾವೇಶ ಅಯೋಜಿಸಲಾಗಿದೆ‌” ಎಂಸು ತಿಳಿಸಿದರು.

ಲಿಂಸೂಗೂರು ಬಿಜೆಪಿ ಬೆಂಬಲಿತ ಆರ್‌ಎಎಸ್‌ಎಸ್ ಸಂಘಟನೆಯ 100 ವರ್ಷ ಪೂರ್ಣಗೊಳ್ಳುವ ಭಾಗವಾಗಿ ಅನೇಕ‌ ಕಾರ್ಯಕ್ರಮಗಳನ್ನು‌ ಆಯೋಜಿಸಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಆರ್‌ಎಸ್‌ಎಸ್‌ ನಾಯಕರು ಸಂವಿಧಾನವನ್ನು ಸ್ಮಾರಕ ಭವನದಲ್ಲಿಟ್ಟು ಪೂಜಿಸುವುದಕ್ಕಷ್ಟೇ ಸೀಮಿತಗೊಳಿಸಲಿದ್ದಾರೆ.‌ ಸಂವಿಧಾನ‌ರದ್ದು ಮಾಡಿ ಅದರ ಜಾಗದಲ್ಲಿ ಬ್ರಾಹ್ಮಣವಾದಿ ಧರ್ಮಶಾಸ್ತ್ರವಾದ ಮನುಸೃತಿಯನ್ನು ಜಾರಿಗೆ ತರಲು ಹೊರಟಿದೆ. ಭಾರತವನ್ನು ಹಿಂದೂರಾಷ್ಟ್ರ(ವೈದಿಕ ಧರ್ಮದೇಶ)ವೆಂದು ಘೋಷಿಸಲು ಸಜ್ಜಾಗಿದೆ” ಎಂದರು.

“ಉತ್ತರ ಪ್ರದೇಶ, ಮಧ್ಯಪ್ರದೇಶ, ಮಣಿಪುರ ಹಾಗೂ ಛತ್ತೀಸ್‌ಗಡ ರಾಜ್ಯದಲ್ಲಿ ಈಗಾಗಲೇ ಹಿಂದೂರಾಷ್ಟ್ರ ತಾಲೀಮು ಶುರುವಾಗಿದ್ದು, ಈ ವರ್ಷದುದ್ದಕ್ಕೂ ಆರ್‌ಎಸ್‌ಎಸ್ ಶತ ಜಯಂತಿ ಆಚರಿಸಲು ಮುಂದಾಗಿದೆ. ಇದು ಕೇವಲ ಸಂಘದ ಆಚರಣೆಯಾಗಿ ಇರುವುದಿಲ್ಲ, ಇಡೀ ಸರ್ಕಾರವೇ ಈ ಆಚರಣೆಗೆ ಮುಂದಾಗಿದೆ” ಎಂದು ಹೇಳಿದರು.

“ನರೇಂದ್ರ ಮೋದಿ-3 ಮತ್ತು ಬಿಜೆಪಿಯನ್ನು ಮುಂದಿಟ್ಟಿಕೊಂಡು ಆರ್‌ಎಸ್‌ಎಸ್ ಸಂಘ ಪರಿವಾರವೇ ಕೇಂದ್ರ ಸರ್ಕಾರವನ್ನು ಮುನ್ನೆಡೆಸುತ್ತಿದೆ. ಸನಾತನ ಸಂಸ್ಕೃತಿ-ಧರ್ಮವು ದೇಶದ ಧರ್ಮವಾದರೆ, ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ ಮೀಸಲಾತಿ ಹಾಗೂ ಆಸ್ತಿ ಅಧಿಕಾರ ಮತ್ತು ಸಾಮಾಜಿಕ ಸಮಾನತೆ ನಿಷೇಧಿಸಲ್ಪಡುತ್ತವೆ. ಮಹಿಳೆಯರನ್ನು ಅಡುಗೆಮನೆ ಬಂಧಿಖಾನೆಗೆ ತಳ್ಳಲಾಗುತ್ತದೆ. ಈ ಫ್ಯಾಸಿಸ್ಟ್ ದಾಳಿಯನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಸೋಲಿಸಲು-ನಿರ್ಮೂಲನೆಗೊಳಿಸಲು ನಾವು ಎದ್ದು ನಿಲ್ಲಬೇಕಾಗಿದೆ. ಈ ಮಹತ್ವದ ಉದ್ದೇಶದಿಂದ 20ಕ್ಕೂ ಅಧಿಕ ಸಂಘಟನೆಗಳು ಒಗ್ಗೂಡಿ ‌ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾ ರಂಗವನ್ನು ಕಟ್ಟಿಕೊಂಡು ಸಮಾವೇಶ ನಡೆಸಲಿದ್ದೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಬಾಣಂತಿ, ಹಸುಗೂಸನ್ನು ಹೊರ ಹಾಕಿ ಮನೆ ಜಪ್ತಿ ಮಾಡಿದ ಫೈನಾನ್ಸ್ ಕಂಪನಿ!

“ಆರ್‌ಎಸ್‌ಎಸ್ ದಾಳಿಗೆ ಪ್ರಾಣ ಬಲಿಕೊಟ್ಟ ಎಂ ಎಂ ಕಲಬುರ್ಗಿ, ಗೌರಿಲಂಕೇಶ್, ದಾಬೋಲ್ಕರ, ಪನ್ಸಾರೆ ಹಾಗೂ ಗುಜರಾತ, ದೆಹಲಿ ಮಣಿಪುರದಲ್ಲಿ ಕಗ್ಗೊಲೆಗೀಡಾದ ಸಾವಿರಾರು ಜನರ ಶೋಕ ದಿನವೆಂದು ನಾವು ಆಚರರಿಸಲ್ಲಿದ್ದೇವೆ.‌ ಜತೆಗೆ ದಲಿತ, ಹಿಂದುಳಿದ, ಆದಿವಾಸಿ ಯುವಕರು, ಬುದ್ದಿ ಜೀವಿಗಳು, ಜಾತಿವಾದಿ-ಜನಾಂಗ ದ್ವೇಷಿ ಭಯೋತ್ಪಾದಕ ಆರ್‌ಎಸ್‌ಎಸ್ ತೊರೆದು ಬುದ್ಧ, ಬಸವ ಬಾಬಾಸಾಹೇಬ ಹಾಗೂ ಭಗತ್‌ಸಿಂಗರ ಭಾರತ ಕಟ್ಟಲು ಮುಂದೆ ಬರಬೇಕೆಂದು ಶಪತಮಾಡಲಿದ್ದೇವೆ. ಸಮಾವೇಶದಲ್ಲಿ ನಾಡಿನ ಹೆಸರಾಂತ ಚಳವಳಿಗಾರರು, ಧಾರ್ಮಿಕ ಮುಖಂಡರು, ವಿವಿಧ ಮಠಗಳ ಧರ್ಮ ಗುರುಗಳು ಭಾಗವಹಿಸಲಿದ್ದು, ಬಹುಜನರು ಬಹುಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾವೇಶದ ಸಂಯೋಜಕ ಸಿ ದಾನಪ್ಪ ಮಸ್ಕಿ, ಸಮಾವೇಶದ ಸಂಯೋಜಕ ಎಂ ಗಂಗಾಧರ, ಎಂ ಡಿ ಅಮೀರ್ ಅಲಿ, ವಿಜಯರಾಣ ಸಿರವಾರ, ಆದೇಶ ನಗನೂರು, ಎಂ ನಿಸರ್ಗ, ಬಸವರಾಜ ಬಡಿಗೇರ, ಗಂಗಾಧರ ನಾಯಕ, ಖಾಲಿದ್ ಚಾವುಸ್, ಗುಡದಪ್ಪ ಭಂಡಾರಿ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...