ಬಾಗೇಪಲ್ಲಿ: ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ನಡೆಯುತ್ತಿರುವ ಕೆಲ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಕಲಿಯುವ ಹಂತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಶಾಲೆಗಳಲ್ಲಿ ಹೆಣ್ಣು ಮಕ್ಕಳ ರಕ್ಷಣಾ ಸಮಿತಿ ವೈದ್ಯಕೀಯ ಮತ್ತು ಸಮಾಲೋಚನಾ ಸೌಲಭ್ಯ ದೂರು ಪೆಟ್ಟಿಗೆ ಪೊಲೀಸ್ ಠಾಣೆಗಳಲ್ಲಿ ಶಾಲೆಯ ಶಿಕ್ಷಕರ ಮಕ್ಕಳ ಹೆಸರುಗಳನ್ನು ನೋಂದಾಯಿಸುವುದು ಸಿಸಿ ಕ್ಯಾಮರಾ ಅಳವಡಿಸುವುದು ಮುಂತಾದ ಕ್ರಮಗಳನ್ನು ಕೈಗೊಂಡಿದೆ ಅದರೆ ಈಗ ಶಾಲಾ ಶಿಕ್ಷಣ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ಶಾಲೆಗಳಲ್ಲಿ ಗೋಡೆಗಳ ಮೇಲೆ ಶಾಲಾ ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಅಸುರಕ್ಷತೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳು ಚಿತ್ರಗಳು ಶಾಲಾ ಗೋಡೆಗಳ ಮೇಲೆ ಬರಿಸುವ ಮೂಲಕ
ಜಾಗೃತಿ ಮೂಡಿಸುತ್ತದೆ. ಭಿತ್ತಿಚಿತ್ರಗಳು ಮಕ್ಕಳ ಸುರಕ್ಷತೆಗೆ ಅತ್ಯಗತ್ಯ ಮ್ಮ ದೇಹ ನಿಮ್ಮದು ಖಾಸಗಿ ಭಾಗಗಳನ್ನು ಯಾರೂ ಮುಟ್ಟಬಾರದು ಇಲ್ಲ ಎಂದು ಹೇಳಲು ಕಲಿಯಿರಿ ಮತ್ತು ನಂಬಿಕಸ್ಥರಿಗೆ ತಿಳಿಸಿ ಎಂಬ ಸರಳ ಸಂದೇಶಗಳು ಮಕ್ಕಳಲ್ಲಿ ಆತ್ಮರಕ್ಷಣೆ ಮತ್ತು ನಿರ್ಭಯತೆಯನ್ನು ಮೂಡಿಸುತ್ತವೆ.
ಬಾಗೇಪಲ್ಲಿ ತಾಲ್ಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ನಲ್ಲಗುಟ್ಲಪಲ್ಲಿ ಶಾಲಾ ಆವರಣದ ಗೋಡೆಯ ಮೇಲೆ ಹೆಣ್ಣು ಮಕ್ಕಳ ಸುರಕ್ಷತೆ ಹಾಗು ಅಸುರಕ್ಷತೆಯ ಸ್ವರ್ಶಗಳ ಅರಿವು ಮೂಡಿಸುವ ಚಿತ್ರಗಳನ್ನು ಬರಿಸುವ ಮೂಲಕ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಬಿಇಓ ಎನ್. ವೆಂಕಟೇಶಪ್ಪ ಮಾತನಾಡಿ ಶಾಲೆಯಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಪರಿಗಣಿಸಿ ಮಕ್ಕಳಿಗೆ ಒಳ್ಳೆಯ–ಸ್ಪರ್ಶ ಹಾಗೂ ಕೆಟ್ಟ–ಸ್ಪರ್ಶ ಯಾವುದು ಎಂಬುದನ್ನು ಗುರುತಿಸುವ ಕುರಿತು ತಿಳಿವಳಿಕೆ ನೀಡಬೇಕು ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರಗಳನ್ನು ಶಾಲಾ ಶಿಕ್ಷಣ ಇಲಾಖೆ ಚಿತ್ರಗಳನ್ನು ಬರಿಸಲು ಮುಂದಾಗಿದೆ.
ಪ್ರತಿ ಗಂಟೆಗೆ ಮಕ್ಕಳ ಮೇಲೆ ದೌರ್ಜನ್ಯಕ್ಕೊಳಗಾಗುತ್ತಿರುವ ಈ ಸನ್ನಿವೇಶದಲ್ಲಿ, ಇಂತಹ ದೃಶ್ಯಾವಳಿಯ ಚಿತ್ರಗಳು ಶೋಷಣೆಯನ್ನು ತಡೆಯಲು ಸಹಾಯ ಮಾಡುತ್ತವೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ತಮ್ಮ ರಕ್ಷಣೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಹೆಣ್ಣು ಮಕ್ಕಳ ಒಳ್ಳೆಯ ಸ್ಪರ್ಶ ಕೆಟ್ಟ ಸ್ಪರ್ಶ ಶಾಲಾ ಗೋಡೆಗಳ ಮೇಲೆ ಅರಿವು ಒಳ್ಳೆಯ ಸ್ಪರ್ಶ – ಕೆಟ್ಟ ಸ್ಪರ್ಶವು ಮಕ್ಕಳಿಗೆ ಕಲಿಸಬೇಕಾದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಸ್ಪರ್ಶವು ಯಾವ ಪರಿಣಾಮವನ್ನ ಬೀರುತ್ತದೆ.? ಮಕ್ಕಳು ಯಾರೊಂದಿಗೆ ಹೇಗೆ ವರ್ತಿಸಬೇಕು.? ಯಾರಾದರೂ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಏನು ಮಾಡಬೇಕೆಂದು ಅವರಿಗೆ ತಿಳಿಸುವುದು ಮುಖ್ಯ.
ಪ್ರತಿ ಶಾಲೆಯಲ್ಲಿ ಈ ಬಗ್ಗೆ ಮಕ್ಕಳಿಗೆ ತಿಳಿಸುವುದು ಮುಖ್ಯ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಅವರು ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂದು ತಿಳಿಯದ ವಯಸ್ಸಿನವರು
ಬೆನ್ನು ಕೈಗಳನ್ನು ಮಟ್ಟಿದರೆ ಅದು ಒಳ್ಳೆಯ ಸ್ಪರ್ಶ ಆದರೆ ಎದೆ ಹೊಟ್ಟೆ ತೊಡೆ ಸಂದಿಗಳನ್ನು ಮುಟ್ಟುವುದು ಕೆಟ್ಟ ಸ್ಪರ್ಶ ಇದನ್ನು ಮಕ್ಕಳಿಗೆ ಸೂಕ್ಷ್ಮವಾಗಿ ತಿಳಿಸಿ ಹೇಳಬೇಕು ಒಟ್ಟಿನಲ್ಲಿ ಗೋಡೆ ಬರಹ ಚಿತ್ರಗಳು ಶಾಲಾ ಶಿಕ್ಷಣ ಇಲಾಖೆ ಹೆಣ್ಣು ಮಕ್ಕಳ ಪೋಷಕರಿಗೆ ಅರಿವು ಅನ್ನು ಉಂಟುಮಾಡುತ್ತದೆ ಎಂದು ಹೇಳಬಹುದು.





