ಮಾಲೂರು: ನಗರದ ಹೊಂಡಾ ಕ್ರೀಡಾಂಗಣದಲ್ಲಿ ಮಾಲೂರಿನ ವಿವಿಧ ಸಂಘಟನೆಗಳು ಕರೆ ನೀಡಿದ್ದ ಸಂವಿಧಾನ ಪಥ ಸಂಚಲನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಸಂವಿಧಾನ ಪಥ ಸಂಚಲನ ಕಾರ್ಯಕ್ರಮ ಹಿನ್ನೆಲೆ ಇಡೀ ಮಾಲೂರು ನಗರವೇ ನೀಲಿಮಯವಾಗಿ ಕಂಗೊಳಿಸುತ್ತು, ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿ ಜೈ ಭೀಮ್ ಘೋಷಣೆ ಕೂಗುತ್ತಾ ಭಾಗವಹಿಸಿದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಕೆ. ನಿಲಾ ಮಾತನಾಡಿ ಮಾಲೂರಿನ ರೀತಿ ಸಂವಿಧಾನ ಪಥ ಸಂಚಲನ ರಾಷ್ಟ್ರದಲ್ಲಿ ಎಲ್ಲ ಕಡೆಗಳಲ್ಲಿಯೂ ಹಮ್ಮಿಕೊಳ್ಳುತ್ತೇವೆ, ಸಂವಿಧಾನ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡಿದೆ ಅದನ್ನು ರಕ್ಷಣೆ ಮಾಡುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕು.
ಯಾವ ಸಂವಿಧಾನದಿಂದ ನಮಗೆ ರಕ್ಷಣೆ ಸಿಗುತ್ತೆ ಅದೇ ಸಂವಿಧಾನವನ್ನು ಮನುವಾದಿಗಳಿಂದ ರಕ್ಷಿಸಲು ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು. ಆರ್ ಎಸ್ ಎಸ್ ನವರು ರಥ ಸಂಚಲನ ಮಾಡುವಾಗ ಯಾಕೆ ಕೈಯಲ್ಲಿ ದೊಣ್ಣೆ ಹಿಡಿತಾರೆ, ನೂರು ವರ್ಷದಿಂದ ಆರ್ ಎಸ್ ಎಸ್ ನವರು ಚಡ್ಡಿಯಿಂದ ಪ್ಯಾಂಟ್ ಗೆ ಬಂದಿದ್ದೆ ಅವರ ಸಾಧನೆಯಾಗಿದೆ.
ಬಡವರ,ನಿರುದ್ಯೋಗ, ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಸಂಘ ಪರಿವಾರದವರು ಎಂದೂ ಸಹ ಹೋರಾಟ ಮಾಡಲ್ಲಾ, ಈ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು.
ಇದನ್ನು ಓದಿದ್ದೀರಾ..? ಡಿಸೆಂಬರ್.1ರಿಂದ ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ
ಈ ಸಂದರ್ಭದಲ್ಲಿ ಮಾಲೂರಿನ ವಿವಿಧ ಸಂಘಟನೆಗಳ ಮುಖಂಡರುಗಳು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು





