ಕೆಜಿಎಫ್: ತಾಲೂಕಿನ ಬೇತಮಂಗಲದ ಸಾರ್ವಜನಿಕ ಶೌಚಾಲಯ ಸ್ಥಳದಲ್ಲಿ ಅಕ್ರಮ ಕೊಠಡಿಗಳನ್ನು ನಿರ್ಮಿಸಿ ಬಾಡಿಗೆ ನೀಡಿರುವ ಹಾಗೂ ಕ್ಯಾಸಂಬಳ್ಳಿ ಹೋಬಳಿಯ ಕಾಜಿಮಿಟ್ಟಹಳ್ಳಿ ಸರ್ವೆ ನಂಬರ್ 28ರಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ 15 ಎಕರೆಯಲ್ಲಿ ಸೋಲಾರ್ ಪ್ಲಾಂಟ್ ಒತ್ತುವರಿ ತೆರಿಗೆ ಒತ್ತಾಯಿಸಿ ಅಂಬೇಡ್ಕರ್ ಸಮತಾದಳ ಸಂಘಟನೆ ರಾಜ್ಯಾಧ್ಯಕ್ಷ ಸಂದಾ ಮುನಿಸ್ವಾಮಿ ನೇತೃತ್ವದಲ್ಲಿ ಹೆಚ್ಚು ತಾಲೂಕು ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಡೆಸಿ ತಹಸಿಲ್ದಾರ್ ಎಚ್ ಕೆ ಭರತ್ ಅವರಿಗೆ ಮನವಿ ನೀಡಿ ಮಾತನಾಡಿದ ಅವರು, ಕೆ ಜಿ ಎಫ್ ತಾಲೂಕಿನ ಬೇತಮಂಗಲ ಸಾರ್ವಜನಿಕ ಶೌಚಾಲಯದ ಸ್ಥಳದಲ್ಲಿ ಬಲಾಢ್ಯರು ಅಕ್ರಮವಾಗಿ ದಾಖಲೆ ಸೃಷ್ಟಿಸಿ ಎರಡು ಕೊಠಡಿಗಳನ್ನು ಲಕ್ಷಾಂತರ ರೂ.,ಗಳಿಗೆ ಬಾಡಿಗೆಗೆ ನೀಡಲಾಗಿದೆ.
ಕ್ಯಾಸಂಬಳ್ಳಿ ಹೋಬಳಿಯ ಕಾಜಿಮಿಟ್ಟಹಳ್ಳಿ ಸರ್ವೆ ನಂಬರ್ 28ರಲ್ಲಿ 15 ಎಕರೆಯಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ನಿರ್ಮಿಸಿ ಕೋಟ್ಯಾಂತರ ರೂಪಾಯಿಗಳನ್ನು ಲಪಟಾಯಿಸಲಾಗುತ್ತಿದೆ.
ಆಂಧ್ರ ಗಡಿಭಾಗದಲ್ಲಿರುವ ಪಂಥನಹಳ್ಳಿಯ ಸರ್ವೇ ನಂಬರ್ 84 87 ರಲ್ಲಿ ಆಂಧ್ರ ಮೂಲದವರು ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದು ಹೇ ಭಾಗದಲ್ಲಿ ಎಕರೆಗೆ 50 ರಿಂದ 60 ಕೋಟಿ ಬೆಲೆ ಎಂದು ತಕ್ಷಣ ಒತ್ತುವರಿಸಿ ಸರ್ಕಾರದ ಭೂಮಿಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಮೂಲದ ಬಲಾಟಿಯರು ತಾಲೂಕಿನ ಸರ್ಕಾರಿ ಗೋಮಾಲ ಗುಂಡು ತೋಪು ಇನಾಂತಿ ಜಮೀನಿನನ್ನು ತಕ್ಷಣ ಸರ್ವೆ ನಡೆಸಿ ಉಳಿಸಿಕೊಂಡು , ಸ್ಥಳೀಯ ರೈತರ, ಬಡ ಕೂಲಿ , ಕಾರ್ಮಿಕರಿಗೆ ಉಳಿಮೆ ಮಾಡಲು ಹಾಗೂ ನಿವೇಶನ ರಹಿತರಿಗೆ ಸೈಟ್ ಗಳ ಹಂಚಿಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ತಹಸಿಲ್ದಾರ್ ಎಚ್ ಕೆ ಭರತ್ ಮಾತನಾಡಿ, ಇದೇ ತಿಂಗಳ 18ನೇ ತಾರೀಖಿನವರೆಗೂ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯುತ್ತಿದ್ದು , ಪೂರ್ಣಗೊಂಡ ತಕ್ಷಣ ಈ ಜಮೀನುಗಳ ಬಗ್ಗೆ ಪರಿಶೀಲನೆ ನೈಜತೆ ವರದಿ ಪಡೆದುಕೊಂಡು ಒತ್ತುವರಿ ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಪ್ರತಿಭಟನಾಕಾರರು ಒಂದು ತಿಂಗಳ ಕಾಲಾವಕಾಶ ನೀಡಿ ನಮ್ಮ ಸಮಸ್ಯೆ ಪರಿಹಾರ ವಾಗದಿದ್ದರೆ ತಾಲೂಕು ಕಚೇರಿ ಬಳಿ ಅನಿರ್ದಿಷ್ಟ ಅವಧಿ ಧರಣಿ ನಡೆಸುವುದಾಗಿ ಗಡುವು ನೀಡಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮತಾ ದಳ ಸಂಘಟನೆ ರಾಜ್ಯಾಧ್ಯಕ್ಷ ಸಂದಾ ಮುನಿಸ್ವಾಮಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಭಾರತಮ್ಮ, ಮುಖಂಡರಾದ ಬಾರ್ಲಿ ಮುನಿ ವೆಂಕಟಸ್ವಾಮಿ, ಕವರಗಾನಹಳ್ಳಿ ಬಾಲಸುಬ್ರಮಣಿ, ಆನಂದಪ್ಪ , ಅರುಣ್ ಕುಮಾರ್, ವೆಂಕಟಮನಿ, ನಾರಾಯಣಸ್ವಾಮಿ, ಅನೇಕ ಮಹಿಳೆಯರು ,ಸಂಘಟನೆ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ..? ರಿಂಗ್ ರಸ್ತೆ ನಿರ್ಮಾಣಕ್ಕೆ ರೂಪುರೇಷೆ ಚರ್ಚೆ-25 ವರ್ಷದ ದೃಷ್ಟಿಕೋನ ಇಟ್ಟುಕೊಂಡು ನಿರ್ಮಿಸಿ: ಕೊತ್ತೂರು ಮಂಜುನಾಥ್
ಚಿತ್ರ01 ವಿವಿಧ ಅಕ್ರಮ ಚಟುವಟಿಕೆಗಳ ವಿರುದ್ಧ ಡಾ.ಬಿ.ಆರ್ ಅಂಬೇಡ್ಕರ್ ಸಮತಾ ದಳ ಸಂಘಟನೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಚ್ ಕೆ ಭರತ್ ಅವರಿಗೆ ಮನವಿ ಸಲ್ಲಿಸಿದರು. ಸಿಪಿಐ ಪಿ.ಎಂ.ನವೀನ್ ಇತರರು ಇದ್ದರು.





