ಹಾಲು ಡೇರಿ ಕಾರ್ಯದರ್ಶಿಗಳ ಬೇಡಿಕೆಗಳ ಈಡೇರಿಕೆಗಾಗಿ ಕೋಮುಲ್ ಎಂಡಿಗೆ ಮನವಿ

Date:

ಕೋಲಾರ: ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿಯ ವಯೋನಿವೃತ್ತಿಗೆ 5 ಲಕ್ಷ ಸೇರಿದಂತೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಂಗಳವಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್ ಮಾತನಾಡಿ ಕೋಮುಲ್ ಒಕ್ಕೂಟವು ಕಡ್ಡಾಯವಾಗಿ ಸಂಘಗಳ ಮೇಲೆ ಒತ್ತಡ ತಂದು ಏಕರೂಪ ತಂತ್ರಾಂಶವನ್ನು ( ಕಾಮನ್) ಸಾಫ್ಟವೇರ್ ಅಳವಡಿಸಲು ಸೂಚನೆ ನೀಡಿದ್ದು ಇದರಿಂದಾಗಿ ಸಿಬ್ಬಂದಿಗೆ ಕೆಲಸದ ಒತ್ತಡವು ಹೆಚ್ಚಾಗಿದೆ ಸಿಬ್ಬಂದಿಗೆ ಪ್ರತಿ ಲೀಟರ್ ಗೆ 30 ಪೈಸೆ ನೀಡಲಾಗುತ್ತಿದೆ ಕನಿಷ್ಠ 60 ಪೈಸೆಗೆ ಹೆಚ್ಚಳ ಮಾಡಬೇಕು ಇಲ್ಲದೆ ಹೋದರೆ ಜಿಲ್ಲೆಯ ಎಲ್ಲಾ ಡೇರಿಗಳ ಕಾರ್ಯದರ್ಶಿಗಳು ಕಾಮನ್ ಸಾಫ್ಟವೇರ್ ಅಳವಡಿಸದೆ ಇರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು

ಪ್ರತಿ ಸಂಘಗಳಲ್ಲಿ ಜಿಡ್ಡಿನಾಂಶದ ಆಧಾರದಲ್ಲಿ ಉತ್ಪಾದಕರಿಗೆ ದರ ನೀಡಲು ತೀರ್ಮಾನಿಸಲಾಗಿದೆ ಇದರಿಂದಾಗಿ ಸಂಘ ನಿರ್ವಹಣೆಗೆ ಹಾಗೂ ಸಿಬ್ಬಂದಿ ವೇತನಕ್ಕೆ ತೊಂದರೆಯಾಗಿದೆ ಸಂಘದ ಆರ್ಥಿಕ ನಷ್ಟ ಸರಿದೂಗಿಸಲು ಲೀಟರ್ ಗೆ 80 ಪೈಸೆ ಬದಲಿಗೆ 1 ರೂಪಾಯಿ ನೀಡಬೇಕು, ಅಕಾಲಿಕವಾಗಿ ಮರಣ ಹೊಂದಿದ ಸಿಬ್ಬಂದಿಗೆ ಜೇಷ್ಠತಾ ಆಧಾರದಲ್ಲಿ ವಯೋನಿವೃತ್ತಿ ಹಣ ನೀಡುವ ಮೂಲಕ ನೌಕರರ ಹಿತ ಕಾಪಾಡುವ ಕೆಲಸವನ್ನು ಒಕ್ಕೂಟ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶ್ ಗೌಡ ಮಾತನಾಡಿ ಒಕ್ಕೂಟದ ವ್ಯಾಪ್ತಿಯಲ್ಲಿನ ಬಿಎಂಸಿ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳಿಗೆ 3300 ರೂ ನೀಡುತ್ತಿದ್ದು ಬೇರೆ ಬೇರೆ ಒಕ್ಕೂಟಗಳ ಮಾದರಿಯಂತೆ ನಮ್ಮ ಒಕ್ಕೂಟದಲ್ಲಿ ಕನಿಷ್ಠ 6000 ರೂಗಳ ಪೋತ್ಸಾಹ ಧನ ನೀಡಬೇಕು ಜೊತೆಗೆ ಹಾಲಿನ ಕ್ಯಾನುಗಳ ಶುಚಿತ್ವಕ್ಕೆ ಕೇವಲ 2 ಪೈಸೆ ನೀಡುತ್ತಿದ್ದು ಕನಿಷ್ಠ 10 ಪೈಸೆ ನೀಡಬೇಕು ಕಾಲಕಾಲಕ್ಕೆ ಬರುವ ಸಿಬ್ಬಂದಿ ಸಮಸ್ಯೆಗಳನ್ನು ನಿರ್ಲಕ್ಷ್ಯ ತೋರದೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕೋಮುಲ್ ಎಂಡಿ ಗೋಪಾಲಮೂರ್ತಿ ಸಿಬ್ಬಂದಿಗಳ ಬೇಡಿಕೆಗಳನ್ನು ನನ್ನ ಕಡೆಯಿಂದ ಸಾಧ್ಯವಾಗುವುದನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಉಳಿದಿದ್ದನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.

ಇದನ್ನು ಓದಿದ್ದೀರಾ..? ವಶಪಡಿಸಿಕೊಂಡ ರೈತರ ಜಮೀನಿನಲ್ಲಿ ಮತ್ತೆ ಗಿಡ ನೆಡಲು ಮುಂದಾಗಿದ್ದಾರೆ

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಉಪಾಧ್ಯಕ್ಷ ಮಿಂಡಹಳ್ಳಿ ಮುನಿರಾಜು, ಖಜಾಂಚಿ ವಕ್ಕಲೇರಿ ನಾಗರಾಜ್, ತಾಲೂಕು ಅಧ್ಯಕ್ಷ ತೊಂಡಾಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ತಿಮ್ಮೇಗೌಡ, ಉಪಾಧ್ಯಕ್ಷ ಗಂಗಾಪುರ ಬಾಬು ಪದಾಧಿಕಾರಿಗಳಾದ ಎಂ.ಹೊಸಹಳ್ಳಿ ಮೋಹನ್, ಪುರಹಳ್ಳಿ ದೇವರಾಜ್, ಮಂಚಂಡಹಳ್ಳಿ ರಮೇಶ್, ಮೈಲಾಂಡಹಳ್ಳಿ ಶ್ರೀರಾಮ್, ವಿಜಯಕುಮಾರ್, ಅಲಹಳ್ಳಿ ಮಂಜುನಾಥ್, ಮುಂತಾದವರು ಇದ್ದರು

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...