ಬೇತಮಂಗಲ: ಇಲ್ಲಿನ ಟಿ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಮಂಗಲ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನಾರಾಯಣಮ್ಮ ವಯೋಸಹಜ ನಿವೃತ್ತಿಯಾದ ಹಿನ್ನಲೆ ದಲಿತ ಸಂಘರ್ಷ ಸಮಿತಿ ಹಾಗೂ ಜಯಮಂಗಲ ಗ್ರಾಮಸ್ಥರು ನಿವೃತ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸನ್ಮಾನಿಸಿ, ಗೌರವಿಸಿ ಬಿಲ್ಕೋಟ್ಟರು.
ಈ ವೇಳೆ ದಲಿತ ಸಂಘರ್ಷ ಸಮಿತಿ ಕೆಜಿಎಫ್ ತಾಲೂಕು ಸಂಚಾಲಕರಾದ ಎಂ ರಾಮಪ್ಪ ಮಾತನಾಡಿ, ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ನಾರಾಯಣಮ್ಮ ಇದೇ ಗ್ರಾಮದವರಾಗಿದ್ದು, ಅವರು ಅಂಗನವಾಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಅಂಗನವಾಡಿಯಲ್ಲಿದ್ದ ಮಕ್ಕಳನ್ನು ತಮ್ಮ ಮಕ್ಕಳನಂತೆ ಒಳ್ಳೆಯ ಬುದ್ದಿ ಸಂಸ್ಕಾರ ಮತ್ತು ವಿದ್ಯೆ ನೀಡಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಇದನ್ನು ಓದಿದ್ದೀರಾ..? ಬಾಗೇಪಲ್ಲಿ| ವೋಟ್ ಚೋರ್ ಗದ್ದಿ ಛೋಡೊ ಸಹಿ ಸಂಗ್ರಹ ಅಭಿಯಾನ
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಎಲ್ಲಮ್ಮ, ಗಾಯತ್ರಿ, ರಾಧಮ್ಮ, ಅಮೃತ, ದೀಪಾ, ಅಲುವೇಲಮ್ಮ, ಶಿವಮೂರ್ತಿ, ಸುಬ್ರಮಣಿ, ಗ್ರಾಮ ಪಂಚಾಯತಿ ಸದಸ್ಯ ವೆಂಕಟಲಕ್ಷ್ಮಮ್ಮ, ಗ್ರಾಮಸ್ಥರಾದ ಮಣಿ ಶಾಲೆ ಸಿಬ್ಬಂದಿ ವೆಂಕಟೇಶಪ್ಪ, ಸರಿತಾ, ಕೋಮಲಾ ಹಾಗೂ ಅನೇಕ ಗ್ರಾಮಸ್ಥರು ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು





