ಚಿಂತಾಮಣಿ : ನಗರ ಭಾಗದಲ್ಲಿ ಈಗಾಗಲೇ ವಿವಿಧ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದುಇಂದು ನಗರದ ವಾರ್ಡ್ ನಂ:06 ರ.ಅಂಜನಿ ಬಡಾವಣೆಯ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮಾಜಿ ನಗರಸಭಾ ಸದಸ್ಯರಾದ ರಾಜಾ ಚಾರಿ ಗೋಪಾಲ್ ರೆಡ್ಡಿ ರವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ರಾಮಣ್ಣ ಮನೆಯಿಂದ ಸಂತೋಷ್ ಮಾತಾ ದೇವಸ್ಥಾನದವರೆಗೂ ಮತ್ತೆ ಅಲ್ಲಿಂದ ಶ್ರೀನಿವಾಸ ಡಿಪೋ ಸೇರಿದಂತೆ ಎಲೆಕ್ಟ್ರಿಕಲ್ ಮೋಹನ್ ಮನೆಯವರೆಗೂ ರಸ್ತೆ ಕಾಮಗಾರಿ ಮಾಡಲಾಗುವುದು ಎಂದು ಮುಖಂಡರು ತಿಳಿಸಿದರು.
ಇದನ್ನು ಓದಿದ್ದೀರಾ…? ಪತ್ರಿಕಾ ರಂಗದಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ: ಶಿವಾನಂದ ತಗಡೂರು
ಈ ಸಂದರ್ಭದಲ್ಲಿ ಆರ್ ಎಂ ಜಿ ಶ್ರೀನಿವಾಸ್,ರಮೇಶ್,ರಘು,ಡಿಶ್ ಪ್ರಭು,ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು





