ಭಾಗ್ಯನಗರ: ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ರಸ್ತೆಯ ಮೂಲಕ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಒಂಟೆಯನ್ನು ಸಾಗಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು ಬಾಗೇಪಲ್ಲಿ ಪೊಲೀಸರು ಬುಲೆರೋ ವಾಹನವನ್ನು ತಡೆದು ಪರಿಶೀಲಿಸಿದಾಗ ಒಂಟೆ ಪತ್ತೆಯಾಗಿದೆ.
ಚಾಲಕ ಯಾವುದೇ ಅನುಮತಿ ಪಡೆಯದೆ ಒಂಟೆಯನ್ನು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಬಾಗೇಪಲ್ಲಿ ಪೊಲೀಸರು ಚಾಲಕನನ್ನು ಬಂಧಿಸಿ, ಮಾಲೀಕರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಬಾಗೇಪಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಶಾಂತ್ ವರಣಿಯವರು ಮಾಲೀಕರ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬುಲೆರೋ ವಾಹನ ಚಾಲಕ ಆಂಧ್ರ ಮೂಲದವರಾಗಿದ್ದು ಚಾಲಕ ಮತ್ತು ಮಾಲೀಕಣ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಕ್ರಮವಾಗಿ ಸಾಗಾಟನೆ ಮಾಡುತ್ತಿದ್ದ ಒಂಟೆ ಯನ್ನು ರಕ್ಷಿಸಿ ಯಲಹಂಕ ಬಳಿ ಇರುವ ಗೋಶಾಲೆಗೆ ಒಪ್ಪಿಸಲಾಗಿರುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಇದನ್ನು ಓದಿದ್ದೀರಾ..? ಜೂಜು ಅಡ್ಡೆಯ ಮೆಲೆ ದಾಳಿ ಎಂಟು ಜನರನ್ನು ಬಂಧಿಸಿದ ಬಟ್ಲಹಳ್ಳಿ ಪೊಲೀಸರು
ಈ ಸಂಧರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮುನಿರತ್ನo, ಸುನೀಲ್, ಮತ್ತು ಪೊಲೀಸ್ ಸಿಬ್ಬಂದಿ ಶ್ರೀಪತಿ, ಖದಿರ್,ಇದ್ದರು..





