ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಮುಖಂಡ ನಂದಿ ಆಂಜನಪ್ಪ ಅವರನ್ನು ರಾಜ್ಯ ಬೀಜ ನಿಗಮದ ಅಧ್ಯಕ್ಷರನ್ನಾಗಿ ಸರ್ಕರ ನೇಮಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಅಥವ ಮುಂದಿನ ಆದೇಶದವರೆಗೆ ಅವರನ್ನು ನೇಮಿಸಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಿಸಿದ ಪಟ್ಟಿಯಲ್ಲಿ ಕರ್ನಾಟಕ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಅದು ಕರ್ನಾಟಕ ಬೀಜ ನಿಗಮವಷ್ಟೇ. ‘ಅಭಿವೃದ್ಧಿ ಎನ್ನುವುದು ಹೆಚ್ಚುವರಿಯಾಗಿ ಸೇರಿತ್ತು.
ಇದನ್ನು ಓದಿದ್ದೀರಾ..? ಕಿಡ್ನಿ ಸಮಸ್ಯೆ ರೋಗಿಗೆ ಶಾಸಕ ಕೊತ್ತೂರು ಮಂಜುನಾಥ್ ೫೦ ಸಾವಿರ ನೆರವು
ಈ ತಾಂತ್ರಿಕ ಕಾರಣದಿಂದಷ್ಟೇ ಮುಖ್ಯಮಂತ್ರಿ ಅವರು ಅನುಮೋದಿಸಿರುವ ಪಟ್ಟಿಯಲ್ಲಿ ಅಂಜನಪ್ಪ ಅವರ ಹೆಸರು ಇರಲಿಲ್ಲ. ಈಗ ಅಧಿಕೃತವಾಗಿ ಅಂಜನಪ್ಪ ಅವರ ನೇಮಕವಾಗಿದೆ.
ಆಂಜನಪ್ಪ ಬೀಜ ನಿಗಮದ ಅಧ್ಯಕ್ಷರಾಗಿ ನೇಮಕ
Date:
ಪೋಸ್ಟ್ ಹಂಚಿಕೊಳ್ಳಿ:




