ಆರು‌ಮಂದಿ ವಲಸೆ ಕಾರ್ಮಿಕರ ಸಾವು ಸೂಕ್ತ ಪರಿಹಾರ ಕೊಡಿಸುವಲ್ಲಿ ರಾಜ್ಯ ಸರ್ಕಾರ ವಿಫಲ ಸಿಐಟಿಯು ತೀವ್ರ ಖಂಡನೆ

Date:

ಕೋಲಾರ: ಬಿಡದಿ ಬಳಿಯ ಎಲೆಗೆನ್ಸ್ ಲೇಔಟ್ ನಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಅಕ್ಟೋಬರ್ 7 ರಂದು ವಾಸವಾಗಿದ್ದ ಕಾರ್ಮಿಕರ ವಸತಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಲಸೆ ಕಾರ್ಮಿಕರಲ್ಲಿ ಇದುವರೆಗೂ 6 ಕಾರ್ಮಿಕರು ಸಾವನಪ್ಪಿದ್ದರೂ ರಾಜ್ಯ‌ಸರ್ಕಾರ ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸಮರ್ಪ ಕ ಪರಿಹಾರವನ್ನು ಕೊಡಿಸುವಲ್ಲಿ ವಿಫಲವಾಗಿ ನೊಂದ‌ಕಾರ್ಮಿಕ ಕುಟುಂಬಗಳಿಗೆ ವಂಚನೆ‌ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ‌ಮತ್ತು ಇತರೆ ‌ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು ಕಾರ್ಮಿಕರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಅಕ್ಟೋಬರ್ 8 ರಂದು ಆಸ್ಪತ್ರೆಗೆ ಭೇಟಿ ನೀಡಿದ ಸಂಘಟನೆ ನಿಯೋಗ, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದ್ದು ಮಾತ್ರವಲ್ಲದೆ ಗಾಯಾಳುಗಳಿಗೆ ಕನಿಷ್ಟ 10 ಲಕ್ಷ ಮತ್ತು ಮೃತರಾದವರ ಪ್ರತಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿತ್ತು. ಈ ಬಗ್ಗೆ 11 ನೇ ತಾರೀಕು ಬೆಳಿಗ್ಗೆ ಸಂತ್ರಸ್ಥರ ಕುಟುಂಬದವರೊಂದಿಗೆ ಬಿಡದಿ ಪೋಲಿಸ್ ಠಾಣೆ ಹಾಗೂ ರಾಮನಗರ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಚರ್ಚಿಸಬೇಕೆಂದೂ ನಿರ್ಧರಿಸಲಾಗಿತ್ತು. ಅಲ್ಲದೆ ನಿರ್ಮಾಣ ಸ್ಥಳದಲ್ಲಿ ನಡೆದಿರುವ ಈ ಘಟನೆ ಕುರಿತು ಮಾಹಿತಿ ನೀಡಿ ಕಟ್ಟಡ ‌ಕಾರ್ಮಿಕ ಕಲ್ಯಾಣ ಮಂಡಳಿ ಸಿಇಓ ಹಾಗೂ ಉಪಕಾರ್ಮಿಕ ಆಯುಕ್ತರನ್ನು ಸೂಕ್ತ ಪರಿಹಾರ ವ್ಯವಸ್ಥೆಯನ್ನು ನೊಂದ‌ ಕುಟುಂಬಗಳಿಗೆ ನಿರ್ಮಾಣ ಸಂಸ್ಥೆಯಿಂದ ಮಾಡಲು ಒತ್ತಾಯಿಸಿದರು

ಕಾರ್ಮಿಕ‌ ಕುಟುಂಬಗಳಿಗೆ ವಂಚನೆಸಿಐಟಿಯು ಮೃತಪಟ್ಟವರಿಗೆ ಕನಿಷ್ಟ25 ಲಕ್ಷ ಪರಿಹಾರ ತೀವ್ರ ಗಾಯಾಳುಗಳಿಗೆ 10. ಲಕ್ಷ ರುಪಾಯಿಗಳ ಬೇಡಿಕೆ ಮುಂದಿಟ್ಟು ಆಗ್ರಹಪಡಿಸುತ್ತಿರುವಾಗಲೇ ಕಾರ್ಮಿಕರ ನಡುವೆಯೇ ಇದ್ದ ಕೆಲವು ಮಧ್ಯವರ್ತಿಗಳು ಹಾಗೂ ಪ.ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಕೆಲ ತೃಣಮೂಲ ಕಾಂಗ್ರೆಸ್ ಏಜೆಂಟರು ಕೇವಲ 2.5 ಲಕ್ಷ ರೂಪಾಯಿ ಪರಿಹಾರಕ್ಕೆ ಒಪ್ಪಿಸಿ, ಮೃತ ಕಾರ್ಮಿಕರ ಬಂಧುಗಳು ಸಿಐಟಿಯುಗೆ ಸೇರಿದ ಕಟ್ಟಡ ಕಾರ್ಮಿಕ ಸಂಘದೊಂದಿಗೆ ಸಂಪರ್ಕಕ್ಕೆ ಬಾರದಂತೆ ತಡೆಯಲಾಗಿದೆ. ಮಾತ್ರವಲ್ಲದೆ ಬಿಡದಿಯ ಪೋಲೀಸರು ಕಂಪನಿಯ‌ ಆಮಿಷಕ್ಕೆ ಬಲಿಯಾಗಿ ದೂರು ನೀಡಿದ ಮತ್ತು ಈಗ ಈ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಹಸನ್ ಮಲ್ಲಿಕ್ ಎನ್ನುವನನ್ನೇ ಆರೋಪಿಯನ್ನಾಗಿ ಮಾಡಿ ಇಡೀ ನ್ಯಾಯ ವ್ಯವಸ್ಥೆಗೆ ಅಪಚಾರ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೂಡ ನೊಂದ ಕುಟುಂಬಗಳಿಗೆ ನ್ಯಾಯ ಹಾಗೂ ಪರಿಹಾರ ಕೊಡಿಸುವಲ್ಲಿ ಅತ್ಯಂತ ನಿರ್ಲಕ್ಷ್ಯ ವಹಿಸಿರುವ ಪಾತ್ರ ಕಣ್ಣಿಗೆ ರಾಚುತ್ತಿದೆ. ಇದರಿಂದಾಗಿ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ದಿಂದ ಕಾರ್ಮಿಕರು ಸಾಯುತ್ತಿದ್ದು ಅವರ ಕುಟುಂಬದವರು ದಿಕ್ಕಾಪಾಲು ಆಗುವಂತೆ ಆಗಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ‌ ಕಾರ್ಮಿಕ ಸಚಿವರು ಈ‌ ಬಗ್ಗೆ ಅಗತ್ಯ‌ ಕ್ರಮವಹಿಸದಿರುವ ಬಗ್ಗೆ ಸಿಐಟಿಯು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನು ಓದಿದ್ದೀರಾ..? ಮುಂಬರುವ ಜಿಪಂ-ತಾಪಂ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಫರ್ಧೆ:ವಿ.ಮೋಹನ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುಮಾರು 8 ತಿಂಗಳ ಹಿಂದೆ ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ 9 ಜನ ಅಮಾಯಕ ಕಾರ್ಮಿಕರು ಸತ್ತಿದ್ದು, 15 ದಿನಗಳ ಹಿಂದೆ ಮಡಿವಾಳದಲ್ಲಿ 2, ಬಿಡದಿಯಲ್ಲಿ 6, ನಿನ್ನೆ ಬೆಳ್ಳಂದೂರಿನಲ್ಲಿ 2 ಕಾರ್ಮಿಕರು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿನ ವಿವಿಧ ರೀತಿಯ ಅವಘಡದಿಂದ ಸಾವನಪ್ಪಿರುವ ಹೊರ ರಾಜ್ಯದ ವಲಸೆ ಕಾರ್ಮಿಕರಾಗಿದ್ದಾರೆ. ನಮ್ಮ ರಾಜ್ಯ ಅಭಿವೃದ್ಧಿಗೆ ತಮ್ಮದೇ ಶ್ರಮದ‌ಮೂಲಕ ಕೊಡುಗೆ ನೀಡುತ್ತಿದ್ದಾರೆ ಇಷ್ಟಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡಿಲ್ಲ. ಇದರಿಂದಾಗಿ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲ ಎಂಬಂತಾಗಿದೆ. ಸರಕಾರ ಇಂತಹ ಘಟನೆಗಳಿಗೆ ತಡೆ ಹಾಕಬೇಕು. ಪೋಲಿಸ್ ಮತ್ತು ಕಾರ್ಮಿಕ ಇಲಾಖೆ ಬಡ ಕಾರ್ಮಿಕರ ಪರ ಕೆಲಸ ಮಾಡುವಂತೆ ಮಾನ್ಕ್ರ ಮುಖ್ಯಮಂತ್ರಿ ಗಳು ಸೂಕ್ತ ಆದೇಶ ನೀಡಬೇಕೆಂದು ಸಿಐಟಿಯು ಒತ್ತಾಯಿಸಿದೆ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...