ಕೋಲಾರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಸುಮಾರು 103 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ಕಾರ್ಯಕ್ರಮವು ಬುಧವಾರ ಬೆಳಗ್ಗೆ 11.30 ಗಂಟೆಗೆ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿದ್ದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಮಾಂತರ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ ಹಾಗೂ ಸೈಯದ್ ಅಫ್ಸರ್ ಮನವಿ ಮಾಡಿದ್ದಾರೆ.
ಸರ್ಕಾರಿ ಮಹಿಳಾ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ಮೊದಲ ಮತ್ತು ದ್ವೀತಿಯ ಹಂತದ ಕಾಮಗಾರಿಗಳು ಮೊತ್ತ 41ಕೋಟಿ, ಪಿ.ಜಿ. ಬ್ಲಾಕ್ 2ನೇ ಮಹಡಿ, 1 ಸೈನ್ಸ್ ಬ್ಲಾಕ್ 1ನೇ ಮಹಡಿ 5 ಕೊಠಡಿಗಳ ನಿರ್ಮಾಣ 2.50 ಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. 40 ಕೋಟಿ ಪಿಜಿ ಕೇಂದ್ರದ ಮಹಿಳಾ ವಸತಿ ನಿಲಯದ 20 ಕೋಟಿ ಕಾನೂನು ಕಾಲೇಜು 6.82 ವೇಮಗಲ್ ಮೊದಲನೇ ಅಂತಸ್ತಿನ 3 ಕೊಠಡಿ ನಿರ್ಮಾಣ ಎರಡನೇ ಅಂತಸ್ತಿನ 2 ಕೊಠಡಿ ನಿರ್ಮಾಣ 1.60 ಕೋಟಿ ಸೇರಿದಂತೆ ಒಟ್ಟು 103 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯಲಿದೆ.
ಇದನ್ನು ಓದಿದ್ದೀರಾ..? ಕೇಂದ್ರದಲ್ಲಿ ಎಂಎಸ್ಎಂಇ ಮಂತ್ರಿ ಆಗಿದ್ದಾಗ ಒಂದು ಲಕ್ಷ ಉದ್ದಿಮೆಗಳ ಸ್ಥಾಪನೆ:ಸಚಿವ ಕೆ.ಹೆಚ್ ಮುನಿಯಪ್ಪ
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೊತ್ತೂರು ಮಂಜುನಾಥ್ ವಹಿಸಲಿದ್ದಾರೆ ಎಂದು ಬ್ಲಾಕ್ ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





