ಬೇತಮಂಗಲ: ಹೋಬಳಿಯ ಕಮ್ಮಸಂದ್ರ ಗ್ರಾಮ ಪಂಚಾಯಿತಿಯ ಒಟ್ಟು 6 ಮಳಿಗೆಗಳಿಗೆ ಒಂದು ವರ್ಷಕ್ಕೆ ನಡೆದ ಹರಾಜಿನಲ್ಲಿ 4 ಲಕ್ಷ ರೂ ಅಡ್ವಾನ್ಸ್ ಮತ್ತು ಬಾಡಿಗೆ ನಿಗದಿಯಾಯಿತು.
ಗ್ರಾಮ ಪಂಚಾಯಿತಿ ಹಳೇ ಕಟ್ಟಡದಲ್ಲಿರುವ 3 ಅಂಗಡಿ ಮಳಿಗೆಗಳಿಗೆ ತಿಂಗಳಿಗೆ 1,600, ಹಾಗೂ ನ್ಯೂ ಆಕ್ಸ್ಫರ್ಡ್ ಶಾಲೆ ಮುಂಭಾಗದಲ್ಲಿರುವ 6 ಅಂಗಡಿ ಮಳಿಗೆಗಳಿಗೆ ತಿಂಗಳಿಗೆ 2000 ನಂತೆ ಹರಾಜಿನಲ್ಲಿ ಸಾರ್ವಜನಿಕರು ಬಾಡಿಗೆಗೆ ಪಡೆದುಕೊಂಡರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಮಾ ಸ್ವಾಮಿವೇಲ್ ಮಾತನಾಡಿ, ಕಮಸಂದ್ರ ಗ್ರಾಮ ಪಂಚಾಯಿತಿಯು ಇಡಿ ವಿಶ್ವದಲ್ಲೇ ಪ್ರಖ್ಯಾತಿ ಪಡೆದ ಕೋಟಿಲಿಂಗೇಶ್ವರ ದೇಗುಲದಿಂದ ಕಮಸಂದ್ರಕ್ಕೆ ತನ್ನದೇ ಆದ ಇತಿಹಾಸ ಸೃಷ್ಟಿಯಾಗಿದೆ ಎಂದರು.
ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆಗಳನ್ನು ಇಂದು ಸಾರ್ವಜನಿಕರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಿದ್ದು ಅನೇಕ ಜನರು ಪಾಲ್ಗೊಂಡು ಅವರಿಗೆ ವ್ಯಾಪಾರ ಮಾಡಲು ಅವಶ್ಯಕತೆ ತಕ್ಕಂತೆ ಹರಾಜುನಲ್ಲಿ ಪಾಲ್ಗೊಂಡು ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಬಾಡಿಗೆಗೆ ಪಡೆದುಕೊಂಡಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತ್ ಕುಮಾರ್ ಮಾತನಾಡಿ, ಹಿಂದೆ ಗ್ರಾಮ ಪಂಚಾಯಿತಿಗೆ ಸೇರಿದ ಕೇವಲ ಆರು ಮಳಿಗೆಗಳನ್ನು ಮಾತ್ರ ಹರಾಜು ನೀಡುತ್ತಿದ್ದೆವು. ಆದರೆ ಈ ಬಾರಿ ನೂತನವಾಗಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಿಕೊಂಡಿದ್ದು ಅಲೆ ಗ್ರಾಮ ಪಂಚಾಯಿತಿ ಕಟ್ಟಡದ ನೆಲಮಹಡಿಯ ಮೂರು ಅಂಗಡಿಗಳನ್ನು ಹರಾಜಿಗೆ ನೀಡಿದ್ದು ತಲಾ ಒಂದೊಂದು ಅಂಗಡಿಗೆ 50 ಸಾವಿರ ರೂಪಾಯಿ ಅಡ್ವಾನ್ಸ್ ಕಟ್ಟಿ ಜೊತೆಗೆ ಹರಾಜಿನಂತೆ ತಿಂಗಳಿಗೆ 1,600 ಕೆಲವು ಅಂಗಡಿಗಳಿಗೆ 2000ನಂತೆ ಬಾಡಿಗೆಗೆ ಹರಾಜಿನಲ್ಲಿ ಪಡೆದುಕೊಂಡಿರುವವರುನಿಗದಿತ ವೇಳೆಗೆ ಬಾಡಿಗೆಯನ್ನು ಕಟ್ಟಿಕೊಂಡು ಹೋಗಬೇಕೆಂದು ಹರಾಜುದಾರರಿಗೆ ತಿಳಿಸಿದರು.
ಇದನ್ನು ಓದಿದ್ದೀರಾ…? ಸ್ವಂತ ಹಣದಿಂದ ನಗರಸಭೆ ಸದಸ್ಯ ಫೈರೋಜ್ ಖಾನ್ 200 ಮೀಟರ್ಗೂ ಹೆಚ್ಚು ಉದ್ದದ ಹೊಸ ಪೈಪ್ಲೈನ್ ವ್ಯವಸ್ಥೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಮಾ, ಉಪಾಧ್ಯಕ್ಷ ದಾಮೋದರ್ ರೆಡ್ಡಿ, ಪಿಡಿಒ ವಸಂತ್ ಕುಮಾರ್, ಕಾರ್ಯದರ್ಶಿ ಆನಂದ್, ಸದಸ್ಯರಾದ ಚಲಪತಿ, ಶಿವು, ರಾಜಪ್ಪ, ಆನಂದ್, ಗ್ರಾಮ ಪಂಚಾಯಿತಿ ಡಿಇಒ ಶಿವಕುಮಾರ್, ಕರವಸೂಲಿಗಾರ ರಾಮು, ಗ್ರಂಥ ಪಾಲಕಿ ಸುಕನ್ಯ , ಮುಖಂಡ ಶ್ರೀನಾಥ್ ನಾಸ್ತಿಕ್ ಹಾಗೂ ಅನೇಕ ಸಾರ್ವಜನಿಕರು ಮುಖಂಡರು ಉಪಸ್ಥಿತರಿದ್ದರು.





