ಬೇತಮಂಗಲ: ಪಟ್ಟಣದ ಬಳಿಯ ಶ್ರೀನಿವಾಸ ಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಗೂರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭವು ಸಿಆರ್ಪಿಎಂ ಉಷಾರಾಣಿ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ಸಿಆರ್ ಪಿ ಉಷಾರಾಣಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಪ್ರತಿಭೆಯು ಅಡಗಿರುತ್ತದೆ, ಸ್ಪರ್ದೆಯಲ್ಲಿ ಪಾಲ್ಗೊಂಡು ಸೋಲು ಗೆಲುವು ಸಾಮಾನ್ಯವಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಕಿವಿಮಾತು ನುಡಿದರು.
ಈ ಭಾಗದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬಹುಮಾನ ತರಬೇಕು ಎಂದರು.
ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಮಾಡಿದ್ದಾರೆ ಒಂದಲ್ಲ ಒಂದು ದಿನ ಬಹುಮಾನ ಪಡೆದು ಗೆಲುವು ತನ್ನದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಈ ಕಾರ್ಯಕ್ರಮದಲ್ಲಿ ಕರಡಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸಿ ಆರ್ ಪಿ ಎಂ ಉಷಾರಾಣಿ ಅವರ ನೇತೃತ್ವದಲ್ಲಿ ನಡೆಯಿತು.
ಇದನ್ನು ಓದಿದ್ದೀರಾ..? ಸಂವಿಧಾನ ಪಥ ಸಂಚಲನ ಕಾರ್ಯಕ್ರಮದಿಂದ ನೀಲಿಮಯವಾದ ಮಾಲೂರು
ಈ ಈ ಕಾರ್ಯಕ್ರಮದಲ್ಲಿ ಕ್ಲಸ್ಟರ್ ನಿಂದ ವರ್ಗಾವಣೆಗೊಂಡ ಕಂಗಾಂಡ್ಲಹಳ್ಳಿ ಶಾಲೆಯ ಶಿಕ್ಷಕಿ ಶ್ರೀಮತಿ ಸೌಮ್ಯರವರನ್ನು ಬಿಳ್ಕೊಡುಗೆ ಮಾಡಿ ಸನ್ಮಾನಿಸಲಾಯಿತು ಶಿಕ್ಷಣ ಸಂಯೋಜಕರಾದ ಗಂಗೆರೆಡ್ಡಿ ಹಾಗೂ ಲಕ್ಷ್ಮಿಕಾಂತ್ ರರು ಪಠ್ಯದ ಜೊತೆಗೆ ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಗಳನ್ನು ಹಾಗೂ ಕಲೆಗಳನ್ನು ಹೊರ ಗೆಳೆಯಲು ಪ್ರತಿಭಾ ಕಾರಂಜಿ ದಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಗಳಾಗಿವೆ ಎಂದು ಮಕ್ಕಳನ್ನು ಕುರಿತು ಹಿತವಚನಗಳನ್ನು ನುಡಿದರು.





