ಕರ್ನಾಟಕ ಮಾದರ ಮಹಾಸಭಾ ನೋಂದಣಿಯ ಜಾಗೃತಿಸಭೆ

Date:

ಕರ್ನಾಟಕ ರಾಜ್ಯಾದ್ಯಂತ ಆಯಾ ಜಾತಿಗಳ ಜಾತಿವಾರು ವರ್ಗವಾರು ಜಾತಿ ಸಂಘಟನೆಗಳು ಸಂಘಟಿತರಾಗಿ ಬಲಗೊಳ್ಳುತ್ತಿದ್ದು,ಅದರ ಸಾಲಿನಲ್ಲಿಯೇ ಮಾದಿಗ ಸಮುದಾಯದ ಜನತೆಯು ಕೂಡ ರಾಜ್ಯಮಟ್ಟದಲ್ಲಿ ಕರ್ನಾಟಕ ಮಾದರ ಮಹಾಸಭಾ ವೇದಿಕೆ ಅಡಿಯಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನವನ್ನು ಮಾಡುತ್ತಿದ್ದು ಇದಕ್ಕೆ ಪೂರಕವಾಗಿ ಸಮುದಾಯ ದವರು ಹೆಚ್ಚಿನ ಸದಸ್ಯತ್ವವನ್ನು ಪಡೆಯುವ ಮೂಲಕ ಸಮುದಾಯ ವನ್ನು ಸಂಘಟನೆಯ ಬಲ ಶಕ್ತಿಯೊಂದಿಗೆ ಕೊಂಡೊಯ್ಯ ಬೇಕೆಂದು ಮುಖಂಡ,ಚಾವಡಿ ಮತ್ತು ಪ್ರಗತಿಪರ ಚಿಂತಕ ನಾರಮಾಕಲಹಳ್ಳಿ ಕೃಷ್ಣಪ್ಪ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಇತರೆ ಸಮು ದಾಯಗಳ ಜನತೆಗೆ ಇಂಜಿನಿಯರಿಂಗ್ ಕಾಲೇಜ್,ಮೆಡಿಕಲ್ ಕಾಲೇಜ್,ಮಠಗಳು ಸೇರಿದಂತೆ ಭವಿಷ್ಯದ ಮಕ್ಕಳಿಗಾಗಿ ಶಾಶ್ವತ ಚಿರಾಸ್ತಿಗಳನ್ನು ಮಾಡಿದ್ದಾರೆ.ಆದುದರಿಂದ ನಮ್ಮ ಸಮುದಾಯದ ಮಕ್ಕಳ ಭವಿಷ್ಯತ್ತಿಗಾಗಿ ಈಗಾಗಲೇ ದೊಡ್ಡಬಳ್ಳಾಪುರದ ಬಳಿಸರ್ಕಾರಿ ಜಾಗವನ್ನು ಸರ್ಕಾರದ ಬೆಲೆಕಟ್ಟಿ ಖರೀದಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಕಿರಿಯ ಮುಖಂಡರು ಈ ಸಮುದಾಯದ ಹಿರಿಯ ಮಹಾಸಭಾದ ಸದಸ್ಯತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಮೂಲಕ ಮಹಾಸಭಾವು ಅತ್ಯಂತ ಹೆಚ್ಚು ಸದಸ್ಯತ್ವ ಪಡೆಯುವ ಪಡೆದಿರುವ ಮೂಲಕ ಭವಿಷ್ಯದ ಮಕ್ಕಳಾ, ಸಂಘವಾಗಬೇಕೆಂದರು.ಆ ಭವಿಷ್ಯದಪೀಳಿಗೆಗೆ ಅಗತ್ಯವಾದ ಶೈಕ್ಷಣಿಕ ವಿದ್ಯಾಸಂಸ್ಥೆಗಳನ್ನು ಮತ್ತು ಇತರೆ ಸಮುದಾಯದ ಅಭಿವೃದ್ಧಿಯ ಪೂರಕ ಚಟುವಟಿಕೆಗಳಿಗೆ ಬಳಕೆ ಮಾಡುತ್ತೇವೆ ಹೊರತು ಯಾವುದೊಂದು ವೆಚ್ಚ ಮಾಡುವುದಿಲ್ಲವೆಂದು ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕವಾಲಿ ವೆಂಕಟರವಣಪ್ಪ ಮಾತನಾಡಿ ಸಮುದಾಯದವರು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬರುವುದರ ಮೂಲಕ ಸಮಾಜದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಅಲಂಕರಿಸುವ ದಿಕ್ಕಿನಲ್ಲಿ ನಮ್ಮ ಚಿಂತನೆಗಳು ಸಹಕಾರಿಯಾಗ ಬೇಕೆಂದರು.ಆದಷ್ಟು ನಮ್ಮ ಸಮುದಾಯದ ಕುಟುಂಬಗಳು ದುಃಖಗಳಿಂದ ದೂರ ಉಳಿದು ಅತ್ಯುತ್ತಮ ಶೈಕ್ಷಣಿಕ ಮಾರ್ಗಗಳನ್ನು ಪಡೆಯುವ ಮೂಲಕ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಸ್ಥಾನಗಳನ್ನು ಆಲಂಕರಿಸಬೇಕು ಆಗ ಮಾತ್ರ ಭವಿಷ್ಯದ ಮಕ್ಕಳ ಭವಿಷ್ಯತ್ತು ಉಜ್ವಲಗೊಳ್ಳಲಿದೆ ಎಂಬ ಅಗತ್ಯ ಆಲೋಚನೆಗಳನ್ನು ನಮ್ಮ ಸಮುದಾಯದವರು ಕಡ್ಡಾಯವಾಗಿ ಮಾಡಲೇಬೇಕೆಂದರು.

ಇದನ್ನು ಓದಿದ್ದೀರಾ..? ಜೆ.ಎಚ್‌.ಪಟೇಲ್ ರಾಜಕಾರಣಿಯಾಗಿ, ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆ ಅಪಾರವಾದದ್ದು: ಕೆ.ಆರ್ ರಮೇಶ್ ಕುಮಾರ್ ಬಣ್ಣನೆ

ಈ ಸಂದರ್ಭದಲ್ಲಿ ಬುಲೆಟ್ ರಮೇಶ್, ಜೈಪ್ರಕಾಶ್,ಚೇಳೂರು ನರಸಿಂಹಪ್ಪ, ನಾಗಜನಪ್ಪ,ಜನಾರ್ದನ್,ಜೈ ಭೀಮ್ ಮುರಳಿ,ಮಾಳಪ್ಪಲ್ಲಿ ಸುರೇಶ್,ದುಗುನಾರಿಪಲ್ಲಿ ಮೂರ್ತಿ,ಪಿ.ವಿ.ರವಿ.ಊಲವಾಡಿ ರಾಮಪ್ಪ,ಸಂತೋಷ್, ಮುನಿರಾಜು,ಫೋಟೋಗ್ರಾಫರ್ ಶಿವ, ರಾಜೇಶ್,ಶ್ರೀನಿವಾಸ್ ಸೇರಿದಂತೆ ಸಮುದಾಯವರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...