ಕೋಲಾರ: ಯಾವುದೇ ಸರ್ಕಾರ ಯಾವುದೇ ಅಧಿಕಾರಿಗಳು ಇದ್ದರೂ ನ್ಯಾಯಯುತವಾಗಿ ಮಾಡಿರುವ ಕೆಲಸದಿಂದ ಅವರಿಗೆ ಮುಖಬಂಗ ಹಾಗಿದೆ ನ್ಯಾಯಾಲಯದಿಂದ ನ್ಯಾಯ ದೊರೆತಿದೆ ಮಾಲೂರು ತಾಲ್ಲೂಕಿನಲ್ಲಿ ಈ ಬೆಳವಣಿಗೆ ಮೊಟ್ಟ ಮೊದಲ ಬೆಳವಣಿಗೆಯಾಗಿದೆ ಎಂದು ಶಾಸಕ ಕೆವೈ ನಂಜೇಗೌಡ ಹೇಳಿದರು.
ಮರು ಮತ ಎಣಿಕಾ ಕೇಂದ್ರದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ನಾವು ಮಾಡಿದ ತಪ್ಪನ್ನು ನಾವೇ ಇಂದು ಅನುಭವಿಸಿದ್ದೇವೆ ಆ ದೇವರು ಸಂವಿಧಾನ ಇಂದು ಉತ್ತರ ಕೊಟ್ಟಿದೆ ಇದರ ಬಗ್ಗೆ ಹೆಚ್ಚಾಗಿ ಇನ್ಮುಂದೆ ನಾನು ಮಾತನಾಡೋದಿಲ್ಲ ನ್ಯಾಯ ನಮ್ಮ ಪರವಾಗಿ ಇದೆ ಎಂದರು.
ಇಂದಿನಿಂದ ನಾನು ಒಂದು ತೀರ್ಮಾನಕ್ಕೆ ಬಂದಿದ್ದೆನೇ ಮಾಲೂರು ಕ್ಷೇತ್ರದಲ್ಲಿ ಶಾಂತಿ ನೆಮ್ಮದಿ ಜೊತೆಗೆ ಅಭಿವೃದ್ದಿ ಮಾಡಬೇಕು ಅಲ್ಲದೆ ಇಂದಿನಿಂದ ಹೊಸ ನಂಜೇಗೌಡ ಹಾಗಿದ್ದೇನೆ ಎಂದು ತಿಳಿಸಿದರು.
2023 ರ ವಿಧಾಸಭಾ ಚುನಾವಣಾ ಮತ ಎಣಿಕೆಯಲ್ಲಿ ಅಕ್ರಮ ಮಾಡಿಬಿಟ್ಟಿದ್ದಾರೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಮಾಜಿ ಶಾಸಕ ಮಂಜುನಾಥ್ ಗೌಡ ಪ್ರತಿದಿನ ಒಂದೊಂದು ಹೇಳಿಕೆ ಕೊಟ್ಟು ಮರುಚುನಾವಣೆ ನಡೆಯುತ್ತದೆ ಎನ್ನುವ ಹೇಳಿಕೆಗಳನ್ನು ನೀಡುವ ಮೂಲಕ ನನಗೆ ಹಾಗೂ ನಮ್ಮ ಕುಟುಂಬಕ್ಕೆ ನಿರಂತರ ಕಿರುಕುಳ ಜೊತೆಗೆ ಮಾನಸೀಕ ಹಿಂಸೆ ನೀಡಿದ್ದಾರೆ ಆದರೆ ನ್ಯಾಯ ನಮ್ಮ ಪರವಾಗಿ ಇದ್ದುದ್ದರಿಂದ ಅದಕ್ಕೆ ಇಂದು ತೆರೆ ಕಂಡಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇನ್ಮುಂದೆ ನನ್ನ ವಿರುದ್ದ ಟೀಕೆ ಮಾಡುವವರ ವಿರುದ್ದ ಯಾವುದೇ ಕಾರಣಕ್ಕೂ ಕೌಂಟರ್ ಕೊಡೋದಿಲ್ಲ ನನ್ನ ಮೇಲೆ ಸಾವಿರ ಮಾತನಾಡಿದರು ಅವರ ಬಗ್ಗೆ ನಾನು ಮಾತನಾಡೋದಿಲ್ಲ ನನ್ನ ಮುಂದಿನ ಗುರಿ ತಾಲ್ಲೂಕಿನ ಅಭಿವೃದ್ದಿಯೊಂದೆ ಹಾಗಿದೆ.
ಮಾಲೂರು ತಾಲ್ಲೂಕಿಗೆ ರಾಜ್ಯ ಸರ್ಕಾರದಿಂದ ಎರಡುವರೆ ಸಾವಿರ ಕೋಟಿ ಅನುಧಾನ ಕೊಟ್ಟಿದ್ದಾರೆ ರಸ್ತೆ ಬಸ್ ನಿಲ್ದಾಣ ಕೆರೆ, ಸೇರಿದಂತೆ ವಿವಿದ ಅಭಿವೃದ್ದಿ ಮಾಡುವುದೊಂದೆ ಮಂತ್ರವಾಗಿದೆ ಯಾವುದೇ ಕಾರಣಕ್ಕೂ ಈ ವ್ಯಕ್ತಿ ವಿರುದ್ದ ನಾನು ಮಾತನಾಡೋದಿಲ್ಲ ಎಂದು ಪರೋಕ್ಷವಾಗಿ ಮಂಜುನಾಥ್ ಗೌಡ ವಿರುದ್ದ ವಾಗ್ದಾಳಿ ನಡೆಸಿದರು ಎಷ್ಟು ಮಾತನಾಡಿದರು ಮಾಜಿ ಶಾಸಕರು ನಾನು ಮಾತ್ರ ತುಟುಲ್ ಪಿಟಕ್ ಅನ್ನೋದಿಲ್ಲ ಎಂದರು.
ಆ ಭಗವಂತ, ಸಂವಿಧಾನ ನ್ಯಾಯ ಇತ್ತು ಏನೇನು ಮಾಡಬೇಕು ಅಂತ ಅನ್ಕೊಂಡಿದ್ದರು ಅದಲ್ಲೆನ್ನಲ್ಲ ಮಾಡಿದ್ದರೂ ಫಲಿತಾಂಶದಲ್ಲಿ ಯಾವುದೇ ವ್ಯಾತ್ಯಾಸ ಹಾಗಿಲ್ಲ, ಮನಸ್ಸಿಗೆ ತುಂಬಾ ನೋವಾಗಿದೆ ಮರು ಮತ ಎಣಿಕೆಯ ಕ್ರಮದಲ್ಲಿ ನ್ಯಾಯಾಲಯ ತೀರ್ಪು ನೀಡಲಿದೆ. ಮಾಜಿ ಶಾಸಕ ಮಂಜುನಾಥ್ ಗೌಡ ಅವರಿಗೂ ದೇವರು ಒಳ್ಳೆಯ ಬುದ್ದಿ ನೀಡಲಿ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾರು ಸಹ ಗಲಾಟೆ ಗಲಭೆಗಳಿಗೆ ಅವಕಾಶ ಕೊಡಬೇಡಿ ಮಾಲೂರಿನ ಅಭಿವೃದ್ದಿ ಶ್ರಮಿಸೋಣ ಎಂದು ಅಭಿಮಾನಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಶಾಸಕ ಕೆವೈ ನಂಜೇಗೌಡ ಕರೆ ನೀಡಿದರು.
ಇದನ್ನು ಓದಿದ್ದೀರಾ…? 21ರಂದು ಬೆಂಗಳೂರುನಲ್ಲಿ ನಡೆಯುವ ಬೃಹತ್ ಪ್ರತಿಭಟನೆ
ಇನ್ನೇನಿದ್ದರು ಹೊಸ ನಂಜೇಗೌಡ ಹಾಗು ಹೊರ ಹೊಮ್ಮಿದ್ದೇನೆ ಕ್ಷೇತ್ರದಲ್ಲಿ ನನ್ನ ನಂಬಿರವವರನ್ನು ಕೈಹಿಡಿಯಬೇಕು ತಾಲ್ಲೂಕಲ್ಲಿ ಶಾಂತಿ ನೆಮ್ಮದಿ ಕಾಪಾಡಕೊಂಡು ಹೋಗುತ್ತೇನೆ ಎಂದು ಹೇಳಿದರು.





