ಕೋಲಾರ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿ ರವರ ಘಟನೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಇಂದು ಕೋಲಾರ ಜಿಲ್ಲಾಧ್ಯಂತ ಸ್ವಯಂ ಪ್ರೇರಿತ ಬಂದಿಗೆ ಕರೆ ನೀಡಲಾಗಿದ್ದು ಬಂದ್ ಬಹುತೇಕ ಯಶಸ್ವಿಯಾಗಿದೆ.
ಪ್ರತಿಭಟನೆಕಾರರು ಬೆಳ್ಳಂಬೆಳ್ಳಗ್ಗೆ ನಗರದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಲ್ಲಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿ ನಂತರ ಬಸ್ ಡಿಪೋದಿಂದ ಬಸ್ ಗಳು ಹೊರಗೆ ಬಾರದಂತೆ ಮನವಿ ಮಾಡಿದರು ನಂತರ ನಗರದ ಶ್ರೀನಿವಾಸಪುರ ವೃತ್ತದಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ಸುಪ್ರೀಂ ಕೋರ್ಟ್ ನ್ಯಾಯಧಿಶರಿಗೆ ಶೂ ಎಸೆದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ನಗರ ಅಲ್ಲದೇ ಶ್ರೀನಿವಾಸಪುರ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್, ಮುಳಬಾಗಿಲು ತಾಲೂಕಗಳಲ್ಲಿಯು ಬಂದ್ ಯಶಸ್ವಿಯಾಗಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ದಲಿತ ಸಮುದಾಯಕ್ಕೆ ಸೇರಿದ ಎನ್ನುವ ಕಾರಣಕ್ಕೆ ಶೂ ಎಸೆದಿರುವ ಘಟನೆ ಖಂಡಿನೀಯ ಇದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದ್ದು, ಕೂಡಲೇ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಇದನ್ನು ಓದಿದ್ದೀರಾ..? ಬೇತಮಂಗಲ, ಕ್ಯಾಸಂಬಳ್ಳಿ ಹೋಬಳಿಗಳಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ವಿ
ಈ ಸಂದರ್ಭದಲ್ಲಿ ಜನಪರ ಸಂಘಟನೆಗಳು ಒಕ್ಕೂಟ ಮುಖಂಡರು ಸದಸ್ಯರು ಭಾಗವಸಿದ್ದರು.





