ಬಾಗೇಪಲ್ಲಿ:-ವಿಶ್ವಕ್ಕೆ ಶಾಂತಿ, ಪ್ರೀತಿ, ವಿಶ್ವಾಸ, ಕರುಣೆ, ಪರೋಪಕಾರದ ಸಂದೇಶವ ಸಾರಿದ ಯೇಸುಕ್ರಿಸ್ತನ ಜನ್ಮ ದಿನವಾದ ಗುರುವಾರ ಕ್ರಿಸ್ಮಸ್ ಅನ್ನು ಸಡಗರ, ಸಂಭ್ರಮದಿಂದ ಆಚರಿಸಲು ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಚರ್ಚ್‌ಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.
ಕ್ರಿಸ್ಮಸ್ ಹಬ್ಬದ ಸಡಗರವು ಪಟ್ಟಣವನ್ನು ಆವರಿಸುತ್ತಿದೆ. ಸುತ್ತಮುತ್ತಲಿನ ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಕ್ರೈಸ್ತ ಧರ್ಮೀಯರೂ ಮಾತ್ರವಲ್ಲದೇ ಸಾರ್ವಜನಿಕರ ಮನಸೆಳೆಯುತ್ತಿದೆ.
ಬಾಗೇಪಲ್ಲಿನಲ್ಲಿ ಇರುವ ಕ್ಯಾಥೋಲಿಕ್ ಚರ್ಚ್, ನ್ಯಾಷನಲ್ ಕಾಲೇಜು ಮುಂಭಾಗದ ಹೊಸ ಜೀವನ ಚರ್ಚ
ಪಾತ ಬಾಗೇಪಲ್ಲಿ ರಸ್ತೆಯಲಗಲಿರುವ ಚರ್ಚ ಕೊಂಡರೆಡ್ಡಿ ಹಳ್ಳಿ ಚರ್ಚ ಹಾಗೂ ಇತರೆ
ಕ್ರೈಸ್ತರು ಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಹಬ್ಬದ ಆಗಮನಕ್ಕೆ ಕಾತರರಾಗಿದ್ದಾರೆ.
ಹಬ್ಬಕ್ಕೆ ಸ್ವಾಗತ ಬ್ಯಾನರ್‌ಗಳು, ಬಣ್ಣಬಣ್ಣದ ಬಾವುಟಗಳು ರಾರಾಜಿಸಲು ಸಿದ್ಧವಾಗಿವೆ. ಚರ್ಚ್ ಆವರಣದಲ್ಲಿ ಬಾಲ ಯೇಸುವನ್ನು ಸ್ವಾಗತಿಸುವ ಗೋದಲಿಗಳನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಬಾಲ ಯೇಸುವಿನ ಹಾಗೂ ಮಾತೆ ಮೇರಿಯ ಬೊಂಬೆಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಕ್ರಿಸ್ಮಸ್ ಮರಕ್ಕೆ ಅಲಂಕಾರ ಮಾಡಲಾಗಿದೆ. ಕ್ರೈಸ್ತರು ತಮ್ಮ ಮನೆಗಳ ಮುಂದೆ ನಕ್ಷತ್ರ ದೀಪ, ಗೋದಲಿ ಸ್ಥಾಪಿಸಿ ಹಬ್ಬವನ್ನು ಸ್ವಾಗತಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ..? ಕೇಂದ್ರದ ವಿರುದ್ಧ ಹಳ್ಳಿಗಳಲ್ಲಿ ಆಂದೋಲನ ನಡೆಯಲಿ: ಎಐಸಿಸಿ ಕಾರ್ಯದರ್ಶಿ ಅಭಿಷೇಕ ದತ್ತ
ಗುರುವಾರ ಕ್ರಿಸ್‌ಮಸ್ ಪ್ರಾರ್ಥನೆ ನಂತರ ಹಂಚಲು ಬೃಹತ್ ಕೇಕ್ ವ್ಯವಸ್ಥೆ ಮಾಡಲಾಗಿದೆ. ಬುಧವಾರ ತಡರಾತ್ರಿವರೆಗೆ ಸಂಜೆಯಿಂದ ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ಭಜನೆಗಳನ್ನು ಹಾಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಸಮುದಾಯದವರು ತಿಳಿಸಿದ್ದಾರೆ.





