ಗಣಿಗಾರಿಕೆ ಚಾಲಕ ಸಾವು ದೂರಿಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯ

Date:

ಕೋಲಾರ: ತಾಲ್ಲೂಕಿನ ತಲಗುಂದ ಪುರಹಳ್ಳಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಸುವ ವೇಳೆ ಹಿಟಾಚಿ ಮೇಲೆ ಕಲ್ಲುಬಂಡೆ ಬಿದ್ದು ಆಂಧ್ರ ಮೂಲಕ ಚಾಲಕ ಷಣ್ಮುಗ ಎಂಬುವರು ಮೃತ್ತಪಟ್ಟಿದ್ದರು ಅದನ್ನು ತಿರುಚಿ ಟಿಪ್ಪರ್ ಬೈಕ್ ನಡುವೆ ಅಪಘಾತ ಎಂದು ಬಿಂಬಿಸಿ ಸಾಕ್ಷಿ ನಾಶ ಮಾಡಲು ಯತ್ನಿಸಿದವರ ವಿರುದ್ಧ ವೇಮಗಲ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೋಲಿಸರು ಯಾವುದೋ ಒತ್ತಡಕ್ಕೆ ಮಣಿದು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಮೃತಪಟ್ಟ ಚಾಲಕನ ಪತ್ನಿ ಜೀವಿತ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೃತ್ತಪಟ್ಟ ಷಣ್ಮುಗ ಕುಟುಂಬಸ್ಥರು ತಲಗುಂದ ಪುರಹಳ್ಳಿ ಬೆಟ್ಟದಲ್ಲಿ ಚೌಡಪ್ಪ ಹಾಗೂ ಮಂಜುನಾಥ್ ಅವರ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ತಮ್ಮ ಪತಿ ಹಿಟಾಚಿ ವಾಹನಕ್ಕೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇದೇ ತಿಂಗಳು 15 ರಂದು ಮಧ್ಯಾಹ್ನ ಮೂರು ಗಂಟೆಯಲ್ಲಿ ಮಣ್ಣು ಸರಿಸುವ ವೇಳೆ ದೊಡ್ಡ ಬಂಡೆ ಹುರುಳಿ ಹಿಟಾಚಿ ವಾಹನ ಮೇಲೆ ಬಿದ್ದು ತಮ್ಮ ಪತಿ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದರು ಸತ್ಯಘಟನೆ ಮರೆಮಾಚಲು ತಮ್ಮ ಪತಿಯ ಬೈಕ್ ನ್ನು ಟಿಪ್ಪರ್ ಲಾರಿ ಕೆಳಗಡೆ ಇಟ್ಟು ಅಪಘಾತದಲ್ಲಿ ಸತ್ತಿದ್ದಾರೆ ಎಂದು ನನಗೆ ಸುಳ್ಳು ಹೇಳಿದ್ದಾರೆ. ಪತಿ ಮೃತ್ತಪಟ್ಟ ಎರಡು ಗಂಟೆ ನಂತರ ಎಸ್ಎನ್ಆರ್ ಆಸ್ಪತ್ರೆಗೆ ಶವವನ್ನು ಸಾಗಿಸಿದ್ದಾರೆ. ಈ ಎರಡು ಗಂಟೆ ಅವಧಿಯಲ್ಲಿ ಸಾಕ್ಷಿನಾಶ ಮಾಡಲು ಪ್ರಯತ್ನ ಪಟ್ಟಿದ್ದಾರೆ ಎಂದು ಹೇಳಿದರು

ಘಟನೆ ನಡೆದ ದಿನವೇ ದೂರು ಕೊಡಲು ಹೋದರೆ ವೇಮಗಲ್ ಪೋಲಿಸರು ದೂರು ದಾಖಲಿಸಿಕೊಳ್ಳದೇ ವಿಳಂಬ ಮಾಡಿದ್ದಾರೆ. ಮರು ದಿನ ಸಂಜೆ ಆರು ಗಂಟೆಗೆ ಎಫ್.ಐ.ಆರ್ ದಾಖಲು ಮಾಡಿದರು. ಅಕ್ರಮ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಟ್ಟಿದಲ್ಲದೇ ಬಂಡೆ ಬಿದ್ದು ಅವಘಡ ನಡೆದಿರುವುದರಿಂದ ತಮ್ಮ ತಲೆ ಮೇಲೆ ಎಲ್ಲಿ ಪ್ರಕರಣ ಬರುತ್ತೆ ಎಂದು ನೈಜ ಘಟನೆ ಮರೆಮಾಚಿ ಅಪಘಾತ ಎಂದು ಬಿಂಬಿಸಲು ಮುಖ್ಯ ಕಾರಣವಾಗಿರುವುದು ಗಣಿ ಇಲಾಖೆ ನಿರ್ದೇಶಕ ಕೋದಂಡರಾಮಯ್ಯ ಅವರನ್ನು ಎ1 ಆರೋಪಿಯಾಗಿ ದೂರು ನೀಡಿದರೆ ಪೋಲೀಸರು ಎ3 ಆರೋಪಿಯನ್ನಾಗಿ ಎಫ್.ಐ.ಆರ್ ದಾಖಲು ಮಾಡಿದ್ದಾರೆ. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ. ನಮ್ಮ ಕುಟುಂಬಕ್ಕೆ ಷಣ್ಮುಗ ಒಬ್ಬರೇ ಧಿಕ್ಕ ಆಗಿದ್ದರು ಅವರನ್ನು ಕಳೆದುಕೊಂಡ ಈಗ ನಾವು ಅನಾಥವಾಗಿದ್ದೇವೆ ನಮಗೆ ಸರ್ಕಾರವೇ ನೆರವಿಗೆ ಬರಬೇಕಾಗಿದೆ ಎಂದು ಮನವಿ ಮಾಡಿದ್ದಾರೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕ ಸಂರಕ್ಷಣಾ ಸೇನೆ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ‌ ಅನೇಕ ಅಮಾಯಕ ಜೀವಿಗಳು ಬಲಿಯಾಗುತ್ತಿದ್ದಾರೆ. ಟೇಕಲ್ ಭಾಗದ ಕಲ್ಲುಗಣಿಗಾರಿಕೆ ಕ್ವಾರಿಗಳಲ್ಲಿ ಇಂತಹ ಅವಘಡಗಳಿಂದ ಬಡ ಕೂಲಿ ಕಾರ್ಮಿಕರು ಸಾವುನ್ನಪ್ಪಿದ್ದಾರೆ. ಇದೀಗ ಕೋಲಾರದಲ್ಲಿ ಮುಂದುವರೆದಿದೆ. ಬಡ ಕೂಲಿ ಕಾರ್ಮಿಕರ ಸಾವಿಗೆ ಬೆಲೆ ಇಲ್ಲದಂತಾಗಿದೆ. ತಲಗುಂದ ಪುರಹಳ್ಳಿ ಬೆಟ್ಟದಲ್ಲಿ ಬಂಡೆ ಬಿದ್ದು ಮೃತ್ತಪಟ್ಟಿರುವ ಷಣ್ಮುಗ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಜಿಲ್ಲಾಡಳಿತ ಮಾಡಬೇಕಿದೆ. ಷಣ್ಮುಗ ಅವರ ತಂದೆ ತಾಯಿ ವೃದ್ದರಾಗಿದ್ದು ತಾಯಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರೂ ಚಿಕ್ಕ ಮಕ್ಕಳಿದ್ದು ಇವರಿಗೆ ಅಸರೆಯಾಗಿದ್ದ ಷಣ್ಮುಗ ಮೃತ್ತಪಟ್ಟಿರುವುದರಿಂದ ಕುಟುಂಬಕ್ಕೆ ಯಾರು ದಿಕ್ಕು ಇಲ್ಲವಾಗಿದೆ. ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಡಳಿತ ಪರಿಹಾತ ಮಾಡಬೇಕು ಹಾಗೂ ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹ ಮಾಡಿದರು.

ಇದನ್ನು ಓದಿದ್ದೀರಾ…? ದಾರಿ ಬಿಡಿಸುವ ವಿಚಾರ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ

ಪತ್ರಿಕಾಗೋಷ್ಠಿಯಲ್ಲಿ ಮೃತಪಟ್ಟ ಚಾಲಕನ ತಂದೆ ಗೋವಿಂದಪ್ಪ, ತಾಯಿ ಮಂಗಮ್ಮ, ಸಂಬಂಧಿಕರಾದ ಶ್ರೀನಿವಾಸ್, ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...