ಗುಬ್ಬಿ | ಹಳ್ಳಿಕಾರ್ ತಳಿ ರಾಸುಗಳ ಪಾಲಕ ಸಿ.ಜಿ.ಕೃಷ್ಣಮೂರ್ತಿ ನಿಧನ

Date:

ವಿಶೇಷ ಹಳ್ಳಿಕಾರ್ ತಳಿಯ ರಾಸುಗಳ ಪಾಲಕರಾಗಿ ಗುರುತಿಸಿಕೊಂಡ ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದ ಸಿ.ಜಿ.ಕೃಷ್ಣಮೂರ್ತಿ (81) ದೈವಾಧೀನರಾಗಿದ್ದಾರೆ.

ಸಿ.ಎಸ್.ಪುರ ಗ್ರಾಮದ ವಿಪ್ರ ಸಮಾಜದ ಮುಖಂಡರಾದ ಮೃತರು ಉತ್ತಮ ಕೃಷಿಕರಾಗಿ ಹೈನುಗಾರಿಕೆಯಲ್ಲಿ ವಿಶೇಷ ಹೆಗ್ಗಳಿಕೆ ಪಡೆದಿದ್ದರು. ಹಳ್ಳಿಕಾರ್ ತಳಿಯ ರಾಸುಗಳನ್ನು ವಿಶೇಷ ಕಾಳಜಿಯಲ್ಲಿ ಸಾಕು ಸಲಹಿದ್ದರು. ಹೋಬಳಿಯ ಹಲವು ರೈತರಿಗೆ ರಾಸುಗಳ ಆರೈಕೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರು. 

ಸಿ.ಎಸ್.ಪುರ ಬ್ರಾಹ್ಮಣ ಸಮಾಜ ಹಾಗೂ ಎಂ.ಎಚ್.ಪಟ್ಟಣ ಬ್ರಾಹ್ಮಣ ಸಮಾಜದ ಸದಸ್ಯರಾಗಿ ಧಾರ್ಮಿಕ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವಸುಂಧರಾ, ಪುತ್ರ ವಕೀಲ ಸಿ.ಕೆ.ವಿಜಯ್, ಪುತ್ರಿ ಲಕ್ಷ್ಮೀ ಇವರನ್ನು ಅಗಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...