ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದ ಯುವ ಮುಖಂಡ ಸ್ಥಳೀಯ ಉದ್ಯಮಿ ಅಮ್ಜದ್ ಖಾನ್ ಎನ್ನುವರು ಎರಡು ವರ್ಷಗಳ ಹಿಂದೆ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನೆಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲು ಬೆಳಗಾವಿ ಸುವರ್ಣಸೌಧಕ್ಕೆ ಗಾಂಧಿ ಟೋಪಿ ಧರಿಸಿ ಗೌನಪಲ್ಲಿಯಿಂದ ಬೆಳಗಾವಿಗೆ 14 ದಿನಗಳ ಪಾದಯಾತ್ರೆ ಮೂಲಕ ಹೋಗಿ ಗೌನಿಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯನ್ನಾಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.
ಮತ್ತೆ ಪುನಹ 18 ದಿನಗಳ ಪಾದಯಾತ್ರೆ ಮೂಲಕ ತಮ್ಮ ಗ್ರಾಮದಿಂದ ಬೆಳಗಾವಿ ಸುವರ್ಣ ಸೌಧದ ವರಿವಿಗೂ ಹೋಗಿ ಶ್ರೀನಿವಾಸಪುರ ಕ್ಷೇತ್ರದ ಶಾಸಕರಾದ ವೆಂಕಟಶಿವಾರೆಡ್ಡಿ ರವರ ಸಮ್ಮುಖದಲ್ಲಿ ಪೌರಾಡಳಿತ ಸಚಿವರಾದ ರಹೀಮ್ ಖಾನ್ ರವರಿಗೆ,ಗೌನಿಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯತಿ ಕೂಡಲೆ ಪಟ್ಟಣ ಪಂಚಾಯತಿ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇದರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ..?ಮನೆ ವಿಚಾರಕ್ಕೆ ದೊಡ್ಡಪ್ಪನ ಮರ್ಡರ್ ಮಾಡಿದ ತಮ್ಮನ ಮಗ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರವಿಕುಮಾರ್,ರಾಮ್ ಮೋಹನ್,ಉಪಾಧ್ಯಕ್ಷರಾದ ವೆಂಕಟರಮಣಪ್ಪ,ಗ್ರಾಮದ ಮುಖಂಡರಾದ ಆಬಿದ್ ಪಾಷಾ,ನಯಾಜ್ ಪಾಷಾ, ಬಾಬಾಜಾನ್,ಮಾಲೀಕ್,ಮುನೀರ್ ಪಾಷಾ,ಅಯೂಬ್ ಖಾನ್,ಇದ್ದರು





