ಕೋಲಾರ : ನಗರದ ಪತ್ರಕರ್ತರ ಭವನ ಪಾರ್ಕ್ ಹಿಂದೆ ಇರುವ ಜಮಾತೆ ಇಸ್ಲಾಮಿ ಹಿಂದ್ ಕಛೇರಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಜಿ ಸುರೇಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಎ ರವಿಕುಮಾರ್, ಜಿಲ್ಲಾ ಖಜಾಂಚಿ ರಾಜೇಂದ್ರ ಸಿಂಹ ,ಜಿಲ್ಲಾ ಕಾರ್ಯದರ್ಶಿ ಶಾಮ್ಗರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮುನಿರಾಜು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ ವಿ ನಾಗರಾಜ್ ಮತ್ತು ಆಯುಬ್ ಖಾನ್ ಅವರಿಗೆ ಸನ್ಮಾನ ಮಾಡಿ ಗೌರವ ಸೂಚಿಸಿದರು.
ಕೋಲಾರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಜಮಾತೆ ಇಸ್ಲಾಮಿ ಹಿಂದ್ ಒಳ್ಳೆಯ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು, ಸಮುದಾಯದ ಮಕ್ಕಳು ಹೆಚ್ಚು ವಿದ್ಯಾಬ್ಯಾಸ ಪಡೆಯಲು ಅರಿವು ಮೂಡಿಸಬೇಕು ಹಾಗೂ ಯುವಕರು ತಪ್ಪು ದಾರಿಗೆ ಹೋಗದೆ ಇರುವ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು ಎಂದರು.
ಇದನ್ನು ಓದಿದ್ದೀರಾ..? ಮನರೇಗಾ ಹೆಸರನ್ನು ‘ವಿಬಿ ಜೀ ರಾಮ್ ಜೀ’ ಎಂದು ಬದಲಾವಣೆ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಸಿಪಿಐಎಂ ಪಕ್ಷದ ವತಿಯಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮಾಜಿ ಮಾಜಿ ಜಿಲ್ಲಾ ಅಧ್ಯಕ್ಷ ಮುಬಾರಕ್ ಬಾಗ್ ಬಾನ್, ಜಿಲ್ಲಾ ಅಧ್ಯಕ್ಷ ಅಮ್ಜದ್ ಅಲಿ, ಜಿಲ್ಲಾ ಸಂಚಾಲಕ ಆಜ್ಮಲ್ ಕದಿರ್, ಕೃಷ್ಣಪ್ಪ, ಸಲಾವುದ್ದೀನ್ ಬಾಬು, ಹಿದಾಯತ್ ಉಲ್ಲಾ ಷರೀಫ್, ಅನ್ವರ್ ,ಸದಸ್ಯರಾದ ನಫೀಜ್ ಬೇಗ್, ಮುಜಮಿಲ್,ಅಬ್ರಾರ್ ಅಲಿ,ಸಾಕಿಬ್ ಪಾಷಾ, ಮುದಸ್ಸಿರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.





