ಕೆಜಿಎಫ್: ಸರ್ಕಾರ ನಿಗದಿಪಡಿಸಿರುವ ಜನವರಿ 25ರಂದು ಸವಿತಾ ಮಹರ್ಷಿ ಜಯಂತ್ಯೋತ್ಸವವನ್ನು ಶಾಸಕಿ ಎಂ ರೂಪಕಲಾ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತೂಕಲ್ ರವೀಂದ್ರ ಹೇಳಿದರು
ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜಿಎಫ್ ತಾಲೂಕಿನ ಸವಿತಾ ಸಮಾಜ ಹಾಗೂ ವಿವಿಧ ಸಮುದಾಯಗಳ ಜನಾಂಗದೊಂದಿಗೆ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಎಲ್ಲರೂ ಮಾತನಾಡಿ ಸರ್ಕಾರ ನಿಗದಿಪಡಿಸಿರುವ ದಿನಾಂಕದಂದು ತಾಲೂಕು ಕೇಂದ್ರದಲ್ಲಿ ಸಡಗರ ಸಂಭ್ರಮದಿಂದ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪ್ರತಿ ವರ್ಷವೂ ಸಹ ಸರ್ಕಾರಿ ಜಯಂತಿ ದಿನದಂದೇ ಆಚರಿಸುತ್ತೇವೆ ನಂತರ ಮತ್ತೊಂದು ದಿನ ದಿನಾಂಕ ನಿಗದಿಪಡಿಸಿ ಸಮುದಾಯದವರು ಬೇತಮಂಗಲ ಭಾಗದಲ್ಲಿ ವಿಶೇಷವಾಗಿ ಪಲ್ಲಕ್ಕಿ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಜನವರಿ 25 ಭಾನುವಾರ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಸವಿತಾ ಸಮಾಜದ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ..? ಸಿಟಿಜನ್ ವೆಲ್ ಫೇರ್ ಫೋರಂ ಅಸೋಸಿಯೇಷನ್ ವತಿಯಿಂದ ಸಂಕ್ರಾಂತಿ ಸಂಭ್ರಮ.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.





