ಬಾಗೇಪಲ್ಲಿ:-ತಾಲ್ಲೂಕು ದಲಿತರ ಭೂಮಿ-ವಸತಿ ಹಕ್ಕಿಗಾಗಿ ಮತ್ತು ಇತರೆ ಹಕ್ಕೋತ್ತಾಯಗಳಿಗೆ ಆಗ್ರಹಿಸಿ, ತಾಲ್ಲೂಕು ಘಟಕ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ.ವೆಂಕಟರವಣ ಹೇಳಿದರು.
ಅವರು ತಾ.ಪಂ ಕಛೇರಿ ಮುಂದೆ ದಲಿತರ ಮೂಲಭೂತ ಸೌಲಭ್ಯಗಳಾದ ನೀರು,ನಿವೇಶನ, ಭೂಮಿ,ಹಕ್ಕುಪತ್ರ ವಿತರಣೆ ಹಾಗೂ ಎಲ್ಲಾ ಗ್ರಾಮಪಂಚಾಯಿತಿ ಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಒತ್ತಾಯಿಸಿ ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದರು ತಾಲ್ಲೂಕಿನಾದ್ಯಂತ ದಲಿತರ ದರಕಾಸ್ತು ಭೂಮಿ ಸಮೀಕರಣ ಸಮಿತಿಗಳ ನಿರ್ಲಕ್ಷ್ಯದಿಂದ ಸಭೆಗಳು ಜರುಗದೆ ಫಾರಂ 54, 53, 57 ಸಲ್ಲಿಸಿರುವ ದಲಿತ, ತಳ ಸಮುದಾಯಗಳ ಅರ್ಜಿಗಳು ಹಾಗೆಯೇ ಉಳಿದಿವೆ. ಅವುಗಳಲ್ಲಿ ಜಿಪಿಎಸ್ ಮೂಲ ಉಳುಮೆ ಮಾಡುತ್ತಿಲ್ಲ ಎಂದು ಹೇಳಿ ಸಾವಿರಾರು ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಈ ಬಗ್ಗೆ ಸರಕಾರವನ್ನು ಎಚ್ಚರಿಸಲು ಹಾಗೂ ದಲಿತರ ಭೂಮಿ-ವಸತಿ ಹಕ್ಕಿಗಾಗಿ ಮತ್ತು ಇತರೆ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಹೋರಾಟ ಆಯೋಜಿಸಲಾಗಿದೆ ಎಂದು ಹೇಳಿದರು.
15ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡಿರುವ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಬಳಸದೆ ಜನಪ್ರತಿನಿಧಿಗಳು ದುರುಪಯೋಗಪಡಿಸಿ ಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಶೇ.22.75ರಡಿ ಬಿಡುಗಡೆಗೊಳ್ಳುವ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ಗ್ರಾಮ ಸಭೆಗಳನ್ನು ನಡೆಸಬೇಕು ಎಂದು ಹೇಳಿದರು.
ಹಕ್ಕೊತ್ತಾಯಗಳು:-
ಬಾಗೇಪಲ್ಲಿ, ತಾಲ್ಲೂಕು ಕೇಂದ್ರ ಸ್ಥಾನ ಗೂಳೂರು ವೃತ್ತದ ಬಳಿ ಅಂಬೇಡ್ಕರ್ ಭವನಕ್ಕೆ ಜಾಗವನ್ನು ಮಂಜೂರು ಮಾಡಿ ಅಂಬೇಡ್ಕರ್ ಭವನ ನಿರ್ಮಿಸಬೇಕು. ಬಾಗೇಪಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ/ವರ್ಗ ಹಾಗೂ ಹಿಂದುಳಿದ ವರ್ಗದವರ ಮನೆಗಳಿಗೆ ಖಾತೆ ಬದಲಾವಣೆ ಮತ್ತು ಈ-ಸ್ವತ್ತು ಮಾಡಿಕೊಡಬೇಕು. ಬಾಗೇಪಲ್ಲಿ ತಾಲ್ಲೂಕಿನ ಗೂಳೂರು, ಪಾತಪಾಳ್ಯ, ಮಿಟ್ಟೇಮರಿ ಹೋಬಳಿ, ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನಕ್ಕೆ ನಿವೇಶನ ಕಾಯ್ದಿರಿಸಿ ಅಂಬೇಡ್ಕರ್ ಭವನ ನಿರ್ಮಿಸುವುದು., ಬಾಗೇಪಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶೇ. 22.75% ಅನುಧಾನ ದುರ್ಬಳಿಕೆ ಆಗಿದ್ದು ಇದರ ಬಗ್ಗೆ ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸುವುದು.
ನಿವೇಶನ ಮತ್ತು ಮನೆಯ ಮೂಲದಾಖಲೆಗಳ ನೆಪವೊಡ್ಡಿ ಖಾತೆ ಮಾಡಿ ಈ ಸ್ವತ್ತು ಮಾಡಿಕೊಡದೇ, ಭೂಮಾಫಿಯ, ರಿಯಲ್ ಎಸ್ಟೇಟ್ ಕುಳಗಳಿಗೆ ಈ ಸ್ವತ್ತು ಮಾಡಿಕೊಡುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸುವುದು.( ಉದಾ : ಪರಗೋಡು & ಘಂಟಂವಾರಿಪಲ್ಲಿ)
, ಘಂಟಂವಾರವಲ್ಲಿ ಗ್ರಾಮ ಪಂಚಾಯಿತಿ ನಾರೇಪಲ್ಲಿ ಸ.ನಂ:18 ರಲ್ಲಿ 2-00 ಎಕರೆ ಜಮೀನು ಆಶ್ರಯ ಯೋಜನೆಯಡಿ ಮಂಜೂರು ಮಾಡಿದ್ದು ಇನ್ನು 3-00 ಎಕರೆ ಜಮೀನು ಮಂಜೂರು ಮಾಡಿಸಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಮಾಡಿ ವಸತಿ ಸೌಲಭ್ಯ ಕಲ್ಪಿಸಬೇಕು.
ಘಂಟಂವಾರಪಲ್ಲಿ ಗ್ರಾಮ ಪಂಚಾಯಿತಿ ಗೌನವಲ್ಲಿ ಸ.ನಂ:15 ರಲ್ಲಿ 5-20 ಗುಂಟೆ ಜಮೀನು ಆಶ್ರಯ ಯೋಜನೆಯಡಿಯಲ್ಲಿ ಮಂಜೂರಾಗಿದ್ದು 150 ಫಲಾನುಭವಿಗಳಲ್ಲಿ ಇನ್ನೂ 60 ಜನ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಿರುವುದಿಲ್ಲ ಇವರಿಗೆ ಕೂಡಲೇ ಹಕ್ಕುಪತ್ರ ಮತ್ತು ವಸತಿ ಯೋಜೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ನಾನು ಅಧಿಕಾರಕ್ಕೆ ಆಸೆ ಪಡುವನನು ಅಲ್ಲಾ:ಮೊಹಮ್ಮದ್ ಶಫೀಕ್
ತದನಂತರ ಸ್ಥಳಕ್ಕೆ ಬಂದ ತಹಸೀಲ್ದಾರ್ ಮನೀಷಾ ಎನ್ ಪತ್ರಿ ಹಾಗೂ ಇಓ ರಮೇಶ್ ಮನವಿ ಪತ್ರ ಸ್ವೀಕರಿಸಿ ಈ ಮೇಲಿನ ವಿಷಯಗಳ ಬಗ್ಗೆ ತನಿಖೆ ನಡೆಸಿ 100 %100 ರಷ್ಟು ಬಡವರಿ ಭೂಮಿ ನಿವೇಶನ ಹಕ್ಕು ಪತ್ರಗಳನ್ನು ಕೊಡಲು ಎರಡು ತಿಂಗಳು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ ಮೇಲೆ ದಲಿತ ಸಂಘರ್ಷ ಸಮಿತಿ ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಪೈಪಾಳ್ಯ ರವಿ,ಎನ್. ಸತೀಶ್,ಪ್ರಕಾಶ್,ಚೌಡಯ್ಯ,ಸೂರಿ,ನಂಜುಂಡಪ್ಪ,ಶ್ರೀನಿವಾಸ್, ಭಾನುಪ್ರಕಾಶ್,ಮುನಿರಾಜು,ಈರಪ್ಪ,ಗಂಗಾಧರ, ಇಂದ್ರಾ ಗೋಪಿ,ಬಾಬು ಹಾಗೂ ತಾಲ್ಲೂಕು ಘಟಕದ ಪಧಾಧಿಕಾರಿಗಳು ಹಾಜರಿದ್ದರು.





