ನಾವು ಧರ್ಮಸ್ಥಳದ ವಿರೋಧಿ ಅಲ್ಲಾ, ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯದ ವಿರೋಧಿಗಳು : ವಿ.ಗೀತಾ

Date:

ಕೋಲಾರ: ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಯಾಗಿ ಇಂದಿಗೆ ೧೩ ವರ್ಷಗಳೇ ಕಳೆದಿದೆ, ಆದರೂ ಇನ್ನು ನೈಜ ಆರೋಪಿಗಳನ್ನು ಬಂಧಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ ನೂರಾರು ಸಹಜ ಸಾವು, ಕೊಲೆ, ಅತ್ಯಾಚಾರಗಳಾಗುತ್ತಿದೆ. ಧರ್ಮಸ್ಥಳದ ಮಂಜುನಾಥ್ ದೇವರ ಹೆಸರಿನಲ್ಲಿ ಭೂ ಹಗರಣಗಳು, ದಲಿತರಿಗೆ ಸೇರಿದ ಭೂಕಬಳಿಕೆ ಮಹಿಳಾ ಸಂಘಟನೆಗಳಿಗೆ ಸಾಲ ಕೊಡುವ ನೆಪದಲ್ಲಿ ಬಡ್ಡಿ ಧಂದೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಜನಾಗ್ರಹಿಸಿ ತಮ್ಮ ಹಕ್ಕೋತ್ತಾಯಗಳ ಅಗ್ರಹ ಪಡೆಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ನಗರದಲ್ಲಿ ಭಿತ್ತಿ ಫಲಕಗಳ ಪ್ರದರ್ಶನ ದೊಂದಿಗೆ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ, ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಕೆಲ ಕಾಲ ರಸ್ತೆ ನಡೆಸಿದ ನಂತರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿಪತ್ರ ಸಲ್ಲಿಸಿದರು.

ಜನಾವಾದಿ ಸಂಘಟನೆಯ ವಿ.ಗೀತಾ ಮಾತನಾಡಿ ಕಳೆದ ೨೦೧೨ರ ಅ.೧೩ರಂದು ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿನ ೧೭ ವರ್ಷದ ವಿದ್ಯಾರ್ಥಿ ಸೌಜನ್ಯಳ ಮೇಲೆ ಅಮಾನುಷವಾಗಿ ಅತ್ಯಾಚಾರವೇಸಗಿ ಕೊಲೆ ಮಾಡಲಾಯಿತು. ಇದಕ್ಕೆ ಸಂಬಂಧಪಟ್ಟ ಮೂವರು ವ್ಯಕ್ತಿಗಳು ಸಂತೋಷ್ ರಾವ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಹಿಡಿದುಕೊಟ್ಟ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿತು, ಆದರೆ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಅಂದಿನ ಸರ್ಕಾರ ವಿಫಲವಾಗಿ ಸಿ.ಐ.ಡಿ. ವಹಿಸಿ ಕೈತೊಳೆದುಕೊಂಡಿತು. ನಂತರದಲ್ಲಿ ಬಂದ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣ ಸಿ.ಬಿ.ಐ.ಗೆ ವಹಿಸಿತು. ಸಂತೋಷ್ ರಾವ್ ವಿರುದ್ದ ಚಾರ್ಚ್ ಶೀಟ್ ಹಾಕಿ ನ್ಯಾಯಾಲಯದ ವಿಚಾರಣೆಯಲ್ಲಿ ಸಂತೋಷ್‌ರಾವ್‌ಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನೈಜ ಆರೋಪಿಗಳನ್ನು ಬಂಧಿಸಿಲ್ಲ, ವೈದ್ಯಕೀಯ ವಿಧಿವಿಜ್ಞಾನ ತನಿಖೆಯೇ ಸೂಕ್ತ ರೀತಿಯಲ್ಲಿ ನಡೆದಿಲ್ಲ ಎಂದು ಸಂತೋಷ್ ರಾವ್‌ರನ್ನು ಖುಲಾಸೆ ಮಾಡಿತು.

ಕಳೆದ ೧೩ ವರ್ಷದಿಂದ ಈ ಪ್ರಕರಣದಲ್ಲಿನ ಅತ್ಯಾಚಾರಿಗಳು, ಹಂತಕರನ್ನು ಪತ್ತೆಹಚ್ಚುವಲ್ಲಿ ಆಡಳಿತರೂಢ ಸರ್ಕಾರಗಳು ವಿಫಲವಾಗಿರುವ ಹಿನ್ನಲೆಯಲ್ಲಿ ಸೂಕ್ತ ತನಿಖೆ ನಡೆಸದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ವಿಶೇಷ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು. ಅತ್ಯಾಚಾರದ ನಂತರ ವೈದ್ಯರು ಸಂಗ್ರಹಿಸಿದ ಮಾದರಿಗಳು ಪ್ರಕರಣಕ್ಕೆ ಪೂರಕವಾಗಿಲ್ಲದ ಹಿನ್ನಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತವಾದ ಕ್ರಮಕೈಗೊಳ್ಳಲು ಖುಲಾಸೆ ಸಮಿತಿಯ ಮುಂದೆ ಇಡಲು ಇದು ಸೂಕ್ತವಾದ ಪ್ರಕರಣವಾಗಿದೆ ಎಂದು ನ್ಯಾಯಾಲಯದ ಆದೇಶ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸದೆ ನಾಶವಾಗಲು ಅನುವು ಮಾಡಿರುವ ವಿರುದ್ದ ವೈದ್ಯಕೀಯ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ದ ಕ್ರಮ ಜರುಗಿಸಬೇಕು. ಅತ್ಯಾಚಾರದ ನೈಜ್ಯ ಆರೋಪಿಗಳನ್ನು ಬಂಧಿಸಿ ತನಿಖೆಗೆ ಸರ್ಕಾರ ಆದೇಶಿಸಬೇಕು.
ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ೨೦ ವರ್ಷದಿಂದ ದಾಖಲಾಗಿರುವ ಅಸಹಜ ಸಾವುಗಳು ಅತ್ಯಾಚಾರ. ದೌರ್ಜನ್ಯ, ಕೊಲೆಗಳ ಸಾಕ್ಷನಾಶ ಪಡೆಸಿ ಹೊತ್ತಿಟ್ಟಿರುವ, ನಾಪತ್ತೆಯಾಗಿರುವ ನೊರಾರು ಯುವತಿಯರು. ವಿದ್ಯಾರ್ಥಿನಿಯರು. ಮಹಿಳೆಯರ ಪ್ರಕರಣಗಳನ್ನು ಭೇದಿಸಲು ಎಸ್.ಐ.ಟಿ. ಮರು ರಚಿಸಿ ತನಿಖೆಗಳನ್ನು ನಡೆಸಬೇಕು. ಇದನ್ನು ಸ್ಥಗಿತಗೊಳಿಸಲು ಬಿ.ಜೆ.ಪಿ. ಸೇರಿದಂತೆ ಕೆಲವು ಪಟ್ಟ ಭದ್ರಹಿತಾಸಕ್ತರು ವಿಫಲ ಪ್ರಯತ್ನಗಳು ನಡೆಸುತ್ತಿದೆ. ಎಸ್.ಐ.ಟಿ.ಯನ್ನು ಒತ್ತಡಕ್ಕೆ ಒಳಪಡಿಸಲು. ದೂರುದಾರರು ಸಾಕ್ಷಧಾರರನ್ನು ಬೆದರಿಸಿ ತೇಜೂವಧೆ ನಡೆಸಿ ಹಿಮ್ಮೆಟ್ಟಿಸುವ ಯತ್ನಗಳ ವಿರುದ್ದ ಕ್ರಮ ಕೈಗೊಳ್ಳಬೇಕು.

ಸೌಜನ್ಯಳ ಪ್ರಕರಣ ಸೇರಿದಂತೆ ನೂರಾರು ಪ್ರಕರಣಗಳಲ್ಲಿನ ಅಂಶಗಳನ್ನು ಪರಿಗಣಿಸಿ ವಿಚಾರಣೆ ನಡೆಸಬೇಕಾದ ಪೊಲೀಸರು ದೂರಿನ ಹಿಂದಿರುವ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಕ್ರಮಕ್ಕೆ ಮುಂದಾಗಿರುವುದನ್ನು ಸ್ಥಗಿತಗೊಳಿಸಬೇಕು.
ಧರ್ಮಸ್ಥಳ ಸಿಪಿಐಎಂ ಶಾಖಾ ಕಾರ್ಯದರ್ಶಿ ಎಂ.ಕೆ.ದೇವಾನಂದರ ಪುತ್ರಿ ಕಳೆದ ೧೯೮೬ ಡಿಸೆಂಬರ್ ತಿಂಗಳಲ್ಲಿ ಅಪಹರಿಸಿ ನಂತರ ಹತ್ಯೆ ಮಾಡಿ ಹೊಳೆಗೆ ಎಸೆಯಲಾಗಿದ್ದ ಪ್ರಕರಣ ಪದ್ಮಲತಾರ ಸಹೋದರಿಯರು ಎಸ್.ಐ.ಟಿ.ಗೆ ದೂರು ನೀಡಿದ್ದು ಈ ಪ್ರಕರಣ ಮರು ತನಿಖೆ ನಡೆಸಬೇಕು. ೨೦೧೨ರಲ್ಲಿ ಧರ್ಮಸ್ಥಳದ ಆನೆಮಾವುತ ನಾರಾಯಣ ಹಾಗೂ ಅತನ ಸಹೋದರಿಯ ಜಮೀನು ಕಬಳಿಸಲು ಪ್ರಭಾವಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿಸಿರುವ ಪ್ರಕರಣ ಪತ್ತೆಯಾಗದ ಪ್ರಕರಣ ಎಂದು ಮುಚ್ಚಿ ಹಾಕಲಾಗಿದೆ.

ಇದನ್ನು ಓದಿದ್ದೀರಾ..? ರೈತರ ಸಹಕಾರಿ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಕೊತ್ತೂರು ಮಂಜುನಾಥ್

ಧರ್ಮಸ್ಥಳದ ಅಶೋಕನಗರದಲ್ಲಿ ವಾಸವಿರುವ ದಲಿತರ ಸರ್ಕಾರಿ ಎಕರೆ ಭೂಮಿಯನ್ನು ಟ್ರಸ್ಟ್ ಅತಿಕ್ರಮಿಸಿರುವುದನ್ನು ತೆರವುಗೊಳಿಸಿ ಭೂ ಮಂಜೂರಾತಿ ಕಾಯ್ದೆ ಪ್ರಕಾರ ದಲಿತರಿಗೆ ಹಂಚಿಕೆಯಾಗಬೇಕು. ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ ಸಾಕ್ಷಾಧಾರ ನಾಶಪಡಿಸಿರುವ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯತೆಯ ಹಿಂದಿನ ಪಟ್ಟಭದ್ರ ಹಿತಾಸಕ್ತರನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು.

ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಆರ್ಥಿಕ ಅಪರಾಧ ವೆಸಗುತ್ತಿರುವ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿ ಕ್ರಮಕೈಗೊಳ್ಳಬೇಕು. ದಲಿತರ ಜಾಗಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಕಬಳಿಸುತ್ತಿರುವ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿಪತ್ರ ಸಲ್ಲಿಸಿದರು.

ಗಮಕ ಸಂಘಟನೆ ಶಾಂತಮ್ಮ, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಪಿಚ್ಚಹಳ್ಳಿ ಶ್ರೀನಿವಾಸ್, ಜೈಭೀಮ್ ಸಂಘಟನೆಯ ಸಂಸ್ಥಾಪಕ ಪಂಡಿತ್ ಮುನಿವೆಂಕಟಪ್ಪ, ಅಚ್ಚುತ, ಈಜಲಈನೆಲ ವೆಂಕಟಚಲಪತಿ, ಗಾಂಧಿನಗರ ರಮಣ ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...