ಮಾಲೂರು ತಾಲ್ಲೂಕು ಸಂವಿಧಾನ ರಥಸಂಚಲನ ಸಮಿತಿಯ ವತಿಯಿಂದ ನವೆಂಬರ್ 26 ರಂದು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮಾಲೂರಿನಲ್ಲಿ ಸಂವಿಧಾನ ರಥಸಂಚಲನ ಮತ್ತು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಸ್ತುವಾರಿ ಸಮಿತಿಯ ಸದಸ್ಯರಾದ ಎಂ.ಶೇಷಪ್ಪ ಹಾಗೂ ಬಿ.ವಿ.ಸಂಪಂಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನದ ರಥಸಂಚಲನಾ ಜಾಥಾ ಕಾರ್ಯಕ್ರಮಕ್ಕೆ ಹೋಂಡಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಉರಿಲಿಂಗಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಮಹಿಳಾ ಹೋರಾಟಗಾರ್ತಿ,ಚಿಂತಕಿ, ಕಲ್ಬುರ್ಗಿಯ ಕೆ.ನೀಲಾ ಚಾಲನೆ ನೀಡಲಿದ್ದು,ಮೆರವಣಿಗೆಯು ಮಾಲೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಗೆ ಸರ್ಕಾರಿ ಬಾಲಕೀಯರ ಆಟದ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಇದನ್ನು ಓದಿದ್ದೀರಾ..? ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಅವಕಾಶ ಕೊಡಿ
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ದಲಿತ ಸಂಘಟನೆಗಳು,ಬುದ್ಧವಿಹಾರ,ಬಹುಜನ ಚಳುವಳಿ,ಕಾರ್ಮಿಕ ಸಂಘಟನೆಗಳು,ಮಹಿಳಾ ಸಂಘಟನೆಗಳು, ಮುಸಲ್ಮಾನ ಬಂಧುಗಳು,ಕ್ರೈಸ್ತ ಸಮುಧಾಯ,ಹಿಂದುಳಿದ ವರ್ಗಗಳು,ರೈತಪರ,ಕನ್ನಡಪರ, ಪ್ರಗತಿಪರ,ಪ್ರಜಾಪ್ರಭುತ್ವಪರ,ಜಾತ್ಯಾತೀತಪರ,ಒಟ್ಟಾರೆಯಾಗಿ ಸಂವಿಧಾನಪರ ಇರುವ ಸಮಾನಮನಸ್ಕರ ಸಂವಿಧಾನ ರಥಸಂಚಲನಾ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸಿದೆ.ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಉಸ್ತುವಾರಿ ಸಮಿತಿಯ ಸದಸ್ಯರು ಈಗಾಗಲೆ ಬೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದ್ದು,ಸುಮಾರು ಹತ್ತು ಸಾವಿರಕ್ಕೂ ಮೀರಿ ಜನ ಸೇರುವ ನಿರೀಕ್ಷೆ ಇದೆ. ತಾಲ್ಲೂಕಿನ ಪ್ರಜ್ಞಾವಂತ ನಾಗರೀಕರೆಲ್ಲರೂ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ನ. 26 ರಂದು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮಾಲೂರಿನಲ್ಲಿ ಸಂವಿಧಾನ ರಥಸಂಚಲನ
ಪೋಸ್ಟ್ ಹಂಚಿಕೊಳ್ಳಿ:




