ಬಾಗೇಪಲ್ಲಿ:- ಪರ್ಯಾಯ ರಾಜಕಾರಣದ ಉದ್ದೇಶದೊಂದಿಗೆ ಸಿಪಿಐ(ಎಂ) ಪಕ್ಷ 21-12-2025 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂಘಟಿಸಿದ್ದ ಜನದನಿ ರ್ಯಾಲಿ ಅತ್ಯಂತ ಯಶಸ್ವಿಯಾಗಿ ಜರುಗಿದೆ ಎಂದು ರಾಜ್ಯ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮುನಿ ವೆಂಕಟಪ್ಪ ತಿಳಿಸಿದರು.
ಪಟ್ಟಣದ ಸಿಪಿಐಎಂ ಪಕ್ಷದ ಸುಂದರಯ್ಯ ಭವನದಲ್ಲಿ ಅವಿರೋಧವಾಗಿ ಆಯ್ಕೆಯಾದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಮಾತನಾಡಿದರು. ಸಾವಿರಕ್ಕೂ ಹೆಚ್ಚು ಸಿಪಿಐ(ಎಂ) ತಂಡಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಚರ್ಚಿಸಿ ವಂತಿಗೆ ನೀಡಿ ಈ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟದಕ್ಕೆ ಅಭಿನಂದನೆಗಳು ತಿಳಿಸಿದರು.
ನಿರುದ್ಯೋಗ, ಬೆಲೆ ಏರಿಕೆ, ಭೂಸ್ವಾಧೀನ,ಭ್ರಷ್ಟಾಚಾರ, ಸಾಮಾಜಿಕ ಅಸಮತೋಲನ, ಶಿಕ್ಷಣ, ಆರೋಗ್ಯ, ಖಾಸಗೀಕರಣ, ವಸತಿ, ರಸ್ತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಕೋಮವಾದಿ,ಜಾತಿವಾದಿ,ಹೊಸ ಜನ ವಿರೋಧಿ ನೀತಿಗಳು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜನ ವಿರೋಧಿ ಆರ್ಥಿಕ ನೀತಿಗಳ ಜನದನಿ ರ್ಯಾಲಿ ಯಲ್ಲಿ ವಿಸ್ತೃತ ಚರ್ಚೆಗಳಾದವು.
ಸಿಪಿಐಎಂ ಪಕ್ಷ ಮುಂದಿನ ದಿನಗಳಲ್ಲಿ ಜನತೆಯ ಸಮಸ್ಯೆಗಳ ಆಧಾರದಲ್ಲಿ ಚಳುವಳಿಗಳನ್ನು ಹೋರಾಟಗಳನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ, ವಿಶಾಲವಾದ ಎಡ ಪ್ರಜಾಸತ್ತಾತ್ಮಕ ಪರ್ಯಾಯವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಲು ತೀರ್ಮಾನಿಸಲಾಗಿದೆ.
ರಾಜ್ಯದ ದುಡಿಯುವ ವರ್ಗಗಳು, ಜನಸಾಮಾನ್ಯರು, ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಯುವಜನ-ವಿದ್ಯಾರ್ಥಿಗಳು, ಪ್ರಗತಿಪರ ಶಕ್ತಿಗಳು, ಬುದ್ದೀಜೀವಿಗಳು, ಸಾಹಿತಿಗಳು ಮತ್ತು ಕಲಾವಿದರ ಸಹಾಯ ಸಹಕಾರ ಮತ್ತು ಬೆಂಬಲದೊಂದಿಗೆ ಈ ಕಾರ್ಯಕ್ಕೆ ಸಿಪಿಐ(ಎಂ) ಮುನ್ನಡೆಯುತ್ತದೆ.
ಜನದನಿ ಸಮಾವೇಶವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಸಿಪಿಐ(ಎಂ)ನ ಧನ್ಯವಾದಗಳು ತಿಳಿಸಿದ ಸಿಪಿಐ ಎಂ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪಿ.ಎಂ.ಮುನಿವೆಂಕಟಪ್ಪ ತಿಳಿಸಿದರು.
ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ರಘುರಾಮ ರೆಡ್ಡಿ ಮಾತನಾಡಿ ಸೇವೆಗಳ ಖಾಸಗೀಕರಣ: ವಿದ್ಯುತ್, ಸಾರಿಗೆ, ನೀರು, ರಸ್ತೆ, ಮುಂತಾದ ಸೇವೆಗಳ ಖಾಸಗೀಕರಣವನ್ನು ಮಾಡಲಾಗುತ್ತಿದೆ. ಎಲ್ಲಾ ಸೇವೆಗಳಿಗೂ ಜನರೇ ಪೂರ್ಣವಾಗಿ ಹಣ ಪಾವತಿಸಿಬೇಕೆಂಬ ಕಾರ್ಪೊರೇಟ್ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇವುಗಳನ್ನು ತಡೆಯದಿದ್ದರೆ ಮುಂದೆ ಸಾಮಾನ್ಯರಿಗೆ ಯಾವುದೂ ಸಿಗುವುದಿಲ್ಲ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮುಂತಾದ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕೃಷ್ಣಾ ನೀರಿನಲ್ಲಿ ಈ ಭಾಗಕ್ಕೆ ನೀರನ್ನು ಒದಗಿಸಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಪೌರ ಕಾರ್ಮಿಕರಿಗೆ ಸನ್ಮಾನ: ಶಾಲಾ ಆಡಳಿತ ಮಂಡಳಿಯ ಕಾರ್ಯಕ್ಕೆ ಶ್ಲಾಘನೆ
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ಚನ್ನರಾಯಪ್ಪ, ಕೃಷ್ಣಪ್ಪ, ಬಿಳ್ಳೂರು ನಾಗರಾಜು, ಮುನಿಯಪ್ಪ,ವಾಲ್ಮೀಕಿ ಅಶ್ವತ್ಥಪ್ಪ,ಜಿ.ಕೃಷ್ಣಪ್ಪ, ಸೋಮಶೇಖರ್, ಹಾಗೂ ಇತರರು ಹಾಜರಿದ್ದರು.





