ಪೂರ್ವ ಕಾಲದಿಂದ ಉಳುಮೆ ಮಾಡುತ್ತಿದ್ದ ಜಮೀನಿಗೆ ಇತರರಿಂದ ಸರ್ವೆ ಕಾರ್ಯ:ಆರೋಪ

Date:

ಕೆಜಿಎಫ್ : ಇಲ್ಲಿನ ಕ್ಯಾಸಂಬಳ್ಳಿ ಹೋಬಳಿಯ ದುರ್ಗೆಪಲ್ಲಿ ಗ್ರಾಮದಲ್ಲಿ ಜಮೀನು ಸರ್ವೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ಗಲಾಟೆ- ಗದ್ದಲದ ನಡುವೆ ಸರ್ವೆ ಕಾರ್ಯ ನಡೆಯಿತು.

ಪಟ್ಟಣದ ಬಳಿಯ ವೆಂಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತೇನಹಳ್ಳಿ ಗ್ರಾಮದ ವೆಂಕಟರಾಮಪ್ಪ ಹಾಗೂ ಜೀಡ ಮಾಕನಹಳ್ಳಿ ರಾಮಕೃಷ್ಣಪ್ಪ ಕುಟುಂಬಗಳ ನಡುವೆ ಸರ್ವೆ ವೇಳೆ ಯಲ್ಲಿ ಗಲಾಟೆಗಳು ನಡೆದು ಕೊನೆಗೆ ಸರ್ವೆ ಕಾರ್ಯ ಮುಕ್ತಾಯವಾಯಿತು.

ತಾತೇನಹಳ್ಳಿ ಗ್ರಾಮದ ವೆಂಕಟರಾಮಪ್ಪ ಮಾತನಾಡಿ, ನಾವು ನಮ್ಮ ಹಿರಿಯರ ಕಾಲದಿಂದಲೂ ಈ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಜೀವನ ನಡೆಸುತಿದ್ದೇವೆ ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ನಮ್ಮ ಜಮೀನು ಬೇರೆ ಕಡೆ ಇದೆ ಈ ಜಮೀನು ಬೇರೆಯವರಿಗೆ ಸೇರಿದೆ ಎಂದು ದಾಖಲೆಗಳು ಸೃಷ್ಟಿಸಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾವು ಪೂರ್ವದ ಕಾಲದಿಂದಲೂ ಜಮೀನಿನಲ್ಲಿ ರಾಗಿ ,ಜೋಳ ,ತೊಗರಿ, ಶೇಂಗಾ ಸೇರಿದಂತೆ ವಿವಿಧ ಮಳೆಯಾಶ್ರಿತ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದು, ಏಕಾಏಕಿಯಾಗಿ ರಾಮಕೃಷ್ಣಪ್ಪ ಅವರು ಈ ಜಮೀನು ನಮಗೆ ಸೇರಿದ್ದು ನೀವು ತಕ್ಷಣ ಜಾಗ ಖಾಲಿ ಮಾಡಬೇಕು ಎಂದು ನ್ಯಾಯಾಲಯದ ಮೂಲಕ ಆದೇಶವನ್ನು ತಂದು ಸರ್ಕಾರಿ ಸರ್ವೆ ಮಾಡಲು ಬಂದಿದ್ದಾರೆ.

ಆದರೆ ನಮ್ಮ ಜಮೀನಿನ ಸರ್ವೆ ನಂಬರ್ 46/ 2 ಆಗಿದ್ದು, ಇದರ ವಿಸ್ತೀರ್ಣ 2.03 ಗುಂಟೆ ಇದೆ.ಇದು ನಕಾಶೆಯಲ್ಲಿ ಬೇರೆ ಕಡೆ ಜಮೀನು ತೋರಿಸುತ್ತಿದೆ ಇದು ನಮಗೆ ಗೋತ್ತಿಲ್ಲ ಆದರೆ ನಾವು ಇಷ್ಟು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನು ರಾಮಕೃಷ್ಣಪ್ಪ ಅವರಿಗೆ ಖಾತೆಯಾಗಿದೆ ಎಂಬ ದಾಖಲೆಗಳನ್ನು ತೋರಿಸುತ್ತಿದ್ದು, ಸದರಿ ನಮ್ಮ ಜಮೀನನ್ನು ರಾಮಕೃಷ್ಣಪ್ಪ ಅವರು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.

ರಾಮಕೃಷ್ಣಪ್ಪ ಅವರಿಗೆ ಸರ್ವೆ ನಂಬರ್ 43 ರಲ್ಲಿ 2.32 ಎಕರೆ ಇದ್ದು, ನಮ್ಮ ಸರ್ವೇ ನಂಬರ್ 46/2 ರಲ್ಲಿ ಜಮೀನು ಬೇರೆ ಕಡೆ ಇದೆ ಎನ್ನುತ್ತಾರೆ.

ಆದರೆ ಅದರಲ್ಲಿ ಬೇರೆಯವರು ಸಾಗುವಳಿ ಮಾಡುತ್ತಿದ್ದು ನಾವು ಈ ಜಮೀನನ್ನು ಬಿಟ್ಟು ಆ ಜಮೀನನ್ನು ವಶಕ್ಕೆ ಪಡೆದುಕೊಳ್ಳಲು ಸಮಸ್ಯೆ ಆಗಿದೆ ಆದ್ದರಿಂದ ಈ ಕೂಡಲೇ ತಹಸಿಲ್ದಾರ್, ಶಾಸಕರು ಹಾಗೂ ಜನಪ್ರತಿನಿಧಿಗಳು ನಮಗೆ ಕಾನೂನು ಅಡಿಯಲ್ಲಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಇದೇ ರೀತಿಯಲ್ಲಿ ಗ್ರಾಮದ ಅನೇಕ ರೈತರ ಸರ್ವೇ ನಂಬರ್ ಗಳು ಅದಲು ಬದಲಾಗಿರುವ ಬಗ್ಗೆ ಅನುಮಾನವಿದೆ ಈ ಕೂಡಲೇ ಕಂದಾಯ ಇಲಾಖೆಯ ತಾಹಸಿಲ್ದಾರ್ ಮತ್ತು ಕ್ಷೇತ್ರದ ಶಾಸಕರು ಜನಪ್ರತಿನಿಧಿಗಳು ಈ ಕೂಡಲೇ ನಮ್ಮ ಸರ್ವೇ ನಂಬರನ್ನು ಸರ್ವೆ ನಡೆಸಿ ನಮಗೆ ಸಾಗುವಳಿ ಮಾಡಲು ಅವಕಾಶ ಕೊಡಬೇಕು ಇಲ್ಲದಿದ್ದರೆ , ಹಾಲಿ ಸಾಗುವಳಿ ಮಾಡುತ್ತಿರುವ ಜಮೀನಿಗೆ ಖಾತೆ ಮಾಡಬೇಕಿದೆ ಎಂದರು .

ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಎರಡು ಕಡೆಯವರನ್ನು ಸಮಾಧಾನಪಡಿಸಿ ಇಂದು ಕೇವಲ ಸರ್ವೆ ಮಾಡಿ ಹದ್ದು ಬಸ್ತನ್ನು ಮಾತ್ರ ಗುರುತಿಸಲಾಗುತ್ತಿದೆ.

ಇದನ್ನು ಓದಿದ್ದೀರಾ..? ಆಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ಎಸ್ ಪಿ ತಂಡ ದಾಳಿ

ನಿಮ್ಮಿನ್ನು ಜಮೀನಿನಿಂದ ಹೊರ ಹಾಕುತ್ತಿಲ್ಲ ಹಾಲಿ ಜಮೀನಿನಿಂದ ಹೋಗಬೇಡಿ ಒಂದು ವರ್ಷದ ಕಾಲ ನೀವೇ ಸಾಗುವಳಿ ಮಾಡಿ ಒಂದು ವರ್ಷದ ಒಳಗೆ ಇದರ ಬಗ್ಗೆ ಕಾನೂನು ಹೋರಾಟ ಮಾಡಿ ನಿಮ್ಮ ಸರ್ವೇ ನಂಬರ್ ನ ಜಮೀನನ್ನು ಪಡೆದುಕೊಂಡು ಜೀವನ ರೂಪಿಸಿಕೊಳ್ಳಿ ಇಲ್ಲ ಇದೇ ಜಮೀನು ನಿಮ್ಮದೇ ಎಂದು ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಬಂದರೂ ಸಹ ನಿಮ್ಮ ಜಮೀನನ್ನು ನಿಮಗೆ ಬಿಡುತ್ತೇವೆ ಎಂದು ಗ್ರಾಮಸ್ಥರು ಸಮಾಧಾನಪಡಿಸಿ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...