ಚಿಕ್ಕಬಳ್ಳಾಪುರ: ಗುಡಿಬಂಡೆ ಪಟ್ಟಣದ ಪೊಲೀಸ್ ಕ್ವಾಟ್ರಸ್ ನಲ್ಲಿ ಒಂದು ಚಿರತೆ ಮರಿ ಕಾಣಿಸಿಕೊಂಡಿದ್ದು, ಪೊಲೀಸರು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಆತಂಕದಲ್ಲಿ ಇದ್ದಾರೆ.
ತನ್ನ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿ ಪೊಲೀಸ್ ಠಾಣೆ ಆವರಣಕ್ಕೆ ಬಂದಿರುವುದು ನೋಡಿದರೆ ತನ್ನ ತಾಯಿಯನ್ನು ಹುಡುಕಿ ಕೊಡಿ ಎಂದು ಬಂದಿರಬಹುದೇ? ಗುಡಿಬಂಡೆ ಪೊಲೀಸ್ ಠಾಣೆ ವಸತಿ ಗೃಹಗಳ ಆವರಣದಲ್ಲಿ ಒಂದು ಚಿರತೆ ಮರಿ ಕಾಣಿಸಿಕೊಂಡಿದ್ದು, ಪೊಲೀಸ್ ವಸತಿ ನಿಲಯದ ಕುಟುಂಬವರು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕ ಆತಂಕಗೊಂಡಿದ್ದಾರೆ.
ಪೊಲೀಸ್ ಠಾಣೆ ವಸತಿ ಗೃಹದಲ್ಲಿ ವಾಸವಾಗಿದ್ದ ಪೊಲೀಸ್ ಒಬ್ಬರು ಮನೆಗೆ ಹೋಗುವಾಗ ಕಾಂಪೌಂಡ್ ಪಕ್ಕದಲ್ಲಿ ಚಿರತೆ ಮರಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ಇದರಿಂದ ಭಯ ಮತ್ತು ಆತಂಕದಲ್ಲೇ ಗುಡಿಬಂಡೆ ಪೊಲೀಸ್ ಸಿಕಂದರ್ ಮುಲ್ಲ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗುಡಿಬಂಡೆ ಪೊಲೀಸ್ ಅರಣ್ಯ ಇಲಾಖೆ ಗೆ ಮಾಹಿತಿ ತಿಳಿಸಿದ್ದು, ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ. ತಕ್ಷಣವೇ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಗುಡಿಬಂಡೆ ಪೊಲೀಸ್ ಠಾಣೆ ಆವರಣಕ್ಕೆ ಜಮಾಯಿಸಿದ್ದಾರೆ. ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಅಪಘಾತ ಕಾರಿನ ಸೀಟ್ ಕೆಳಗೆ ಅವಿತು ಕೊಂಡಿದೆ.
ಇದನ್ನು ಓದಿದ್ದೀರಾ..? ವಶಪಡಿಸಿಕೊಂಡ ರೈತರ ಜಮೀನಿನಲ್ಲಿ ಮತ್ತೆ ಗಿಡ ನೆಡಲು ಮುಂದಾಗಿದ್ದಾರೆ
ಚಿರತೆ ಮರಿ ಸೆರೆಗಾಗಿ ಬೋನುಗಳನ್ನು ಇಟ್ಟಿದ್ದಾರೆ.ಅದನ್ನು ಹಿಡಿಯಲು ಬನ್ನೇರುಘಟ್ಟ ಅರಣ್ಯ ಇಲಾಖೆಯ ತಜ್ಞರು ಸ್ಥಳಕ್ಕೆ ಬಂದು ಅರವಳಿಕೆ ಇಂಜೆಕ್ಷನ್ ನೀಡಿ ಚಿರತೆ ಹಿಡಿದು ಬೋನ್ ನಲ್ಲಿ ಹಾಕಿಕೊಂಡು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ರವಾನಿಸಿದ್ದಾರೆ.




